ಕುಂದಾಪುರ, ಬೈಂದೂರಿನಲ್ಲಿ 116 ಕಾಲುಸಂಕ
ಶಾಲಾ ಸಂಪರ್ಕ ಸೇತು ಯೋಜನೆ
Team Udayavani, Jul 10, 2020, 5:23 AM IST
ಕುಂದಾಪುರ: ಅವಿಭಜಿತ ಕುಂದಾಪುರ ತಾಲೂಕಿನಲ್ಲಿ ಶಾಲಾ ಸಂಪರ್ಕ ಸೇತು ಯೋಜನೆಯಲ್ಲಿ ಮಂಜೂರಾದ ಕಾಲು ಸಂಕಗಳ ಕಾಮಗಾರಿ ಪ್ರಗತಿ ಹಂತದಲ್ಲಿದೆ. ಕೋವಿಡ್ ಹರಡುವಿಕೆ ತಡೆಗಾಗಿ ಸರಕಾರ ವಿಧಿಸಿದ್ದ ಲಾಕ್‌ಡೌನ್‌ನಿಂದಾಗಿ ಬೇಸಗೆಯಲ್ಲಿ ಬಾಕಿಯಾಗಿದ್ದರೆ ಮಳೆಗಾಲದಲ್ಲಿ ಗದ್ದೆ ಬೇಸಾಯದಿಂದಾಗಿ ಬಾಕಿಯಾಗಿದೆ.
ಬಹುತೇಕ ಕಾಲುಸಂಕಗಳು ಗದ್ದೆ ಸಮೀಪವೇ ಇರುವುದರಿಂದ ಗದ್ದೆ ಬೇಸಾಯ ಪೂರ್ಣವಾಗದ ಹೊರತು ಕಾಮಗಾರಿ ಕೈಗೆತ್ತಿಕೊಳ್ಳುವಂತಿಲ್ಲ ಎಂಬ ಪರಿಸ್ಥಿತಿ ಇದೆ.
ಏನಿದು ಶಾಲಾ ಸಂಪರ್ಕ ಸೇತು?
ಗ್ರಾಮೀಣ ಭಾಗಗಳಿಂದ ಸರಕಾರಿ ಶಾಲೆ ಸಂಪರ್ಕಿಸುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರಕಾರವು ಲೋಕೋಪಯೋಗಿ ಇಲಾಖೆಯ ಮೂಲಕ ಶಾಲಾ ಸಂಪರ್ಕ ಸೇತು ಯೋಜನೆ ಯಡಿ ಕಾಲುಸಂಕಗಳಿಗೆ ಅನುದಾನ ನೀಡುತ್ತಿದೆ.
ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಶಾಲಾ ಸಂಪರ್ಕ ಸೇತು ಯೋಜನೆ ಜಾರಿಗೆ ಬಂದಿದ್ದು, ಇದಕ್ಕೆ ಅನುದಾನ ಮೀಸಲಿಡ ಬೇಕಾದರೆ ಯಾವುದೇ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಈ ಪ್ರದೇಶದ ತೋಡಿನಿಂದ ತೊಂದರೆಯಾಗುತ್ತದೆ ಎಂಬುದನ್ನು ದಾಖಲಿಸಬೇಕಾಗುತ್ತದೆ.
ಸರಕಾರಿ ಶಾಲೆಗೆ ನಡೆದು ಬರುವ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು, ನೀರಿಗೆ ಬೀಳುವಂತಹ ಅಪಾಯಕಾರಿ ಸ್ಥಿತಿ ಇರಬಾರದು ಎನ್ನುವುದು ಇದರ ಉದ್ದೇಶ. ಶಾಲಾ ಮಕ್ಕಳು ಮಳೆಗಾಲದಲ್ಲಿ ನೀರಿಗೆ ಬಿದ್ದು ಮೃತ ಪಟ್ಟ ಘಟನೆ ಬಳಿಕ ಈ ಯೋಜನೆ ಜಾರಿ ಯಾಗಿದೆ. ಅದರಂತೆ ಕುಂದಾಪುರ ಲೋಕೋಪಯೋಗಿ ಇಲಾಖೆ ಉಪ ವಿಭಾಗದ ವ್ಯಾಪ್ತಿಗೆ ಬರುವ ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ 116 ಕಡೆ ಇಂತಹ ಕಾಲುಸಂಕ ಮಾಡಲು ಉದ್ದೇಶಿಸಲಾಗಿದೆ.
ಕೆಲವು ಕಾಮಗಾರಿಗಳು ಪ್ರಗತಿಯಲ್ಲಿವೆ. ಉಳಿದ ಕಾಮಗಾರಿಗಳು ಟೆಂಡರ್ ಹಂತದಲ್ಲಿವೆ ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್ ಹರ್ಷವರ್ಧನ ಅವರು ತಿಳಿಸಿದ್ದಾರೆ.
ಕಾಲು ಸಂಕ ನಿರ್ಮಾಣ ಪ್ರಕ್ರಿಯೆ ಮಳೆಗಾಲ ಪೂರ್ಣಗೊಂಡ ಅನಂತರವಷ್ಟೇ ಆಗುತ್ತದೆ. ಅನುದಾನ ಮರಳಿ ಹೋಗದು ಶಾಲಾ ಸಂಪರ್ಕ ಸೇತುವಿಗಾಗಿ ಬಂದ ಅನುದಾನ ಮರಳಿ ಹೋಗುವುದಿಲ್ಲ.
ಸರಕಾರದ ಕೆಲವೊಂದು ನಿರ್ದಿಷ್ಟ ಉದ್ದೇಶಗಳಿಗೆ ಬಂದ ಅನುದಾನ ಸಕಾಲದಲ್ಲಿ ಯಾವುದೇ ಕಾಮಗಾರಿಗೆ ವಿನಿಯೋಗಿಸದೇ ಇದ್ದರೆ ಮರಳಿ ಸರಕಾರಕ್ಕೆ ಹೋಗುತ್ತದೆ ಅಥವಾ ಮುಂದಿನ ವರ್ಷದ ಅನುದಾನದಲ್ಲಿ ಆ ಬಾಬತ್ತು ಕಡಿತ ಮಾಡಿ ನೀಡಲಾಗುತ್ತದೆ. ಆದರೆ ಶಾಲಾ ಸಂಪರ್ಕ ಸೇತುವಿಗೆ ಬಂದ ಅನುದಾನ ಮರಳಿ ಹೋಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
116 ಕಾಲುಸಂಕ ಮಂಜೂರು
2019-20ನೇ ಸಾಲಿನಲ್ಲಿ ಕುಂದಾಪುರ ಉಪವಿಭಾಗಕ್ಕೆ 5.94 ಕೋ.ರೂ. ಅನುದಾನದಲ್ಲಿ 116 ಕಾಲುಸಂಕ ಮಂಜೂ ರಾಗಿದೆ. ಈ ಪೈಕಿ 24 ಪೂರ್ಣಗೊಂಡಿದ್ದು, ಕೆಲವು ಕಾಮಗಾರಿಗಳು ಪ್ರಗತಿ ಯಲ್ಲಿವೆ. ಉಳಿದ ಕಾಮಗಾರಿಗಳು ಟೆಂಡರ್ ಹಂತದಲ್ಲಿವೆ ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್ ಹರ್ಷವರ್ಧನ ಅವರು ತಿಳಿಸಿದ್ದಾರೆ. ಕಾಲು ಸಂಕ ನಿರ್ಮಾಣ ಪ್ರಕ್ರಿಯೆ ಮಳೆಗಾಲ ಪೂರ್ಣಗೊಂಡ ಅನಂತರವಷ್ಟೇ ಆಗುತ್ತದೆ. ಅನುದಾನ ಮರಳಿ ಹೋಗದು ಶಾಲಾ ಸಂಪರ್ಕ ಸೇತುವಿಗಾಗಿ ಬಂದ ಅನುದಾನ ಮರಳಿ ಹೋಗುವುದಿಲ್ಲ. ಸರಕಾರದ ಕೆಲವೊಂದು ನಿರ್ದಿಷ್ಟ ಉದ್ದೇಶಗಳಿಗೆ ಬಂದ ಅನುದಾನ ಸಕಾಲದಲ್ಲಿ ಯಾವುದೇ ಕಾಮಗಾರಿಗೆ ವಿನಿಯೋಗಿಸದೇ ಇದ್ದರೆ ಮರಳಿ ಸರಕಾರಕ್ಕೆ ಹೋಗುತ್ತದೆ ಅಥವಾ ಮುಂದಿನ ವರ್ಷದ ಅನುದಾನದಲ್ಲಿ ಆ ಬಾಬತ್ತು ಕಡಿತ ಮಾಡಿ ನೀಡಲಾಗುತ್ತದೆ. ಆದರೆ ಶಾಲಾ ಸಂಪರ್ಕ ಸೇತುವಿಗೆ ಬಂದ ಅನುದಾನ ಮರಳಿ ಹೋಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅನುದಾನ ಮೀಸಲು
ಮಂಜೂರಾದ ಕಾಲುಸಂಕಗಳು ಕುಂದಾಪುರ, ಬೈಂದೂರು ವಿಧಾನಸಭೆ ಕ್ಷೇತ್ರಗಳ ಮೂಲಕ ಅನುಷ್ಠಾನ ಗೊಳ್ಳುತ್ತಿದ್ದು, ಆಯಾಯ ಶಾಸಕರಮೂಲಕ ಅನುದಾನ ಮೀಸಲಿಡ ಲಾಗುತ್ತದೆ. ಕುಂದಾಪುರ ಲೋಕೋಪ ಯೋಗಿ ಇಲಾಖೆ ವಿಭಾಗದ ಮೂಲಕ ಬೈಂದೂರು ಕ್ಷೇತ್ರದಲ್ಲಿ 82, ಕುಂದಾಪುರ ತಾಲೂಕಿನಲ್ಲಿ 34 ಕಾಲುಸಂಕಗಳು ರಚನೆಯಾಗಲಿವೆ. ಕುಂದಾಪುರ ವಿಧಾನಸಭಾ ಕ್ಷೇತ್ರಕ್ಕೆ ಉಡುಪಿ ಲೋಕೋಪಯೋಗಿ ಇಲಾಖೆ ಮೂಲಕವೂ ಕಾಲು ಸಂಕ ರಚನೆಯಾಗಲಿದೆ.
ಮಳೆಗಾಲವಾದ ಕಾರಣ ಬಾಕಿ ಆಗಿದೆ
ಕೆಲವೊಂದು ಕಾಮಗಾರಿ ಮಂಜೂರಾತಿ ಆಗುವಾಗ ವಿಳಂಬವಾಗಿದೆ. ಮಳೆಗಾಲ, ಲಾಕ್‌ಡೌನ್ ಕಾರಣದಿಂದ ಇದು ಬಾಕಿಯಾಗಿದ್ದು ಮಳೆಗಾಲ ಮುಗಿದ ಕೂಡಲೇ ಮತ್ತೆ ಕಾಮಗಾರಿಗಳಿಗೆ ಚಾಲನೆ ದೊರೆಯಲಿದೆ. ಇದಕ್ಕಾಗಿ ಬಂದ ಅನುದಾನ ಮರಳಿ ಹೋಗುವುದಿಲ್ಲ.
-ದುರ್ಗಾದಾಸ್,
ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಲೋಕೋಪಯೋಗಿ ಇಲಾಖೆ, ಕುಂದಾಪುರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.