14 ವರ್ಷ ಜೈಲುವಾಸ ಅನುಭವಿಸಿ ಹೊರ ಬಂದು ವೈದ್ಯನಾದ!
Team Udayavani, Feb 15, 2020, 3:08 AM IST
ಕಲಬುರಗಿ: “ಪರಸಂಗ’ಕ್ಕೆ ಕೊಲೆ ಮಾಡಿ 14 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ಹೊರ ಬಂದ ವ್ಯಕ್ತಿಯೊಬ್ಬ ಎಂಬಿಬಿಎಸ್ ಪದವಿ ಮುಗಿಸಿ ಈಗ ವೈದ್ಯನಾಗಿದ್ದಾನೆ. ಜಿಲ್ಲೆಯ ಅಫಜಲಪುರ ತಾಲೂಕಿನ ಭೋಸಗಾ ಗ್ರಾಮದ ಡಾ| ಸುಭಾಷ ತುಕಾರಾಂ ಪಾಟೀಲ ಬೆಂಗಳೂರಿನ ಕಾಲೇಜೊಂದರಲ್ಲಿ ಎಂಬಿಬಿಎಸ್ ಓದುತ್ತಿದ್ದರು.
ಆಗ ಮಹಾಲಕ್ಷ್ಮೀ ಲೇಔಟ್‌ನಲ್ಲಿ ಅಬಕಾರಿ ಗುತ್ತಿಗೆದಾರ ಅಶೋಕ ಗುತ್ತೇದಾರ ಎಂಬವರ ಪತ್ನಿ ಪದ್ಮಾವತಿ ಅವರ ಜತೆ ಪ್ರೇಮಾಂಕುರವಾಗಿತ್ತು. ಪ್ರೇಮದ ಅಮಲಿನಲ್ಲಿ ಪದ್ಮಾವತಿ ಜತೆಗೂಡಿ 2002ರಲ್ಲಿ ಅಶೋಕ ಗುತ್ತೇದಾರ ಅವರನ್ನು ಬಂದೂಕಿನಿಂದ ಹೊಡೆದು ಕೊಲೆ ಮಾಡಿದ್ದರು. ಬಳಿಕ ಜೀವಾವಧಿ ಶಿಕ್ಷೆಗೊಳಗಾಗಿ 7 ವರ್ಷ ಬೆಂಗಳೂರಿನ ಪರಪ್ಪನ ಅಗ್ರಹಾರ ಹಾಗೂ 7 ವರ್ಷ ಕಲಬುರಗಿಯ ಕೇಂದ್ರ ಕಾರಾಗೃಹದಲ್ಲೂ ಜೈಲುವಾಸ ಅನುಭವಿಸಿದ್ದರು.
ಕೊಲೆ ಮಾಡಿದ ವೇಳೆ ಡಾ| ಸುಭಾಷ ಎಂಬಿಬಿಎಸ್ ದ್ವಿತೀಯ ವರ್ಷ ಓದುತ್ತಿದ್ದ. ನಂತರ 2016ರ ಆ.15ರಂದು ಶಿಕ್ಷೆ ಅನುಭವಿಸಿ ಹೊರ ಬಂದ ನಂತರ ಡಾ| ಸುಭಾಷ ಪಾಟೀಲ ರಾಜೀವ ಗಾಂಧಿ ಆರೋಗ್ಯ ವಿವಿಯಿಂದ ವೈದ್ಯ ಪದವಿ ಮುಂದುವರಿಸುವ ಕುರಿತು ಅನುಮತಿ ಪಡೆದು 2017 ಹಾಗೂ 2018ರಲ್ಲಿ ಮೂರನೇ ಹಾಗೂ ನಾಲ್ಕನೇ ವರ್ಷದ ಎಂಬಿಬಿಎಸ್ ಪರೀಕ್ಷೆ ಬರೆದು, 2019ರ ಫೆಬ್ರುವರಿಯಲ್ಲಿ ಉತ್ತೀರ್ಣವಾಗಿದ್ದಾರೆ.
ಬಳಿಕ ಒಂದು ವರ್ಷ ಬಸವೇಶ್ವರ ಸಾರ್ವಜನಿಕ ಹಾಗೂ ಬೋಧನಾ ಆಸ್ಪತ್ರೆಯಲ್ಲಿ ಹೌಸಮನ್‌ಶಿಪ್ (ಶಿಕ್ಷಣಾ ತರಬೇತಿ) ಪಡೆದು ಇಂದು (ಫೆ.15) ಶನಿವಾರ ವೈದ್ಯ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ. ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಕಾಲೇಜಿ (ಎಂಆರ್‌ಎಂಸಿ)ನಿಂದ ವೈದ್ಯ ಪದವಿ ಪಡೆದು ಸಮಾಜಮುಖೀಯಾಗಿ ಹೊರ ಹೊಮ್ಮಿದ್ದಾರೆ.
ಒಂದೇ ಯತ್ನದಲ್ಲಿ ಪಾಸ್: ಜೈಲುವಾಸ ಅನುಭವಿಸಿ ಹೊರ ಬಂದವರು ಮೊದಲಿನಂತೆ ಸಾಮಾಜಿಕವಾಗಿ ಬೆರೆಯುವುದು ಕಡಿಮೆ. ಮುಖ್ಯವಾಗಿ ಯಾವ ತಪ್ಪು ಮಾಡಿ ಜೈಲಿಗೆ ಹೋಗಿರುತ್ತಾರೆಯೋ ಆ ಗುಂಗಿನಿಂದ ಹೊರ ಬರುವುದೇ ಇಲ್ಲ. ಆದರೆ ಸುಭಾಷ ಪಾಟೀಲ ಜೈಲಿನಲ್ಲಿ ಹಾಗೂ ಹೊರ ಬಂದ ಮೇಲೂ ಅನೇಕ ನಿಂದನೆ ಕೇಳಿದರೂ, ಅದಕ್ಕೆ ಕುಗ್ಗದೇ 14 ವರ್ಷಗಳ ಹಿಂದೆ ಇದ್ದ ಕಲಿಕಾ ಮನೋವೃತ್ತ ಮೈಗೂಡಿಸಿಕೊಂಡು ಒಂದೇ ಪ್ರಯತ್ನದಲ್ಲಿ ಎಲ್ಲ ವಿಷಯಗಳಲ್ಲಿ ಪಾಸಾಗಿದ್ದಾರೆ.
ಪತ್ರಿಕೋದ್ಯಮ ಪದವಿ!: ಜೈಲಿನಲ್ಲಿದ್ದಾಗಲೇ ಮೈಸೂರಿನ ಕರ್ನಾಟಕ ಮುಕ್ತ ವಿವಿಯಿಂದ ಎಂಎ ಪತ್ರಿಕೋದ್ಯಮ ಪದವಿ ಪಡೆದಿದ್ದ ಡಾ| ಸುಭಾಷ ಪಾಟೀಲ, ಈಗ ಎಂಬಿಬಿಎಸ್ ಮುಗಿಸಿ ಜ್ಞಾನವಂತಿಕೆ ಮೆರೆದಿದ್ದಾರೆ. ಯಾವುದಾದರೂ ಪದವಿ ಒಂದೆ ರಡು ವರ್ಷ ಅಂತರವಾದರೆ ಉತ್ತೀರ್ಣವಾಗುವುದೇ ಅಪರೂಪ. ಆದರೆ ಡಾ| ಸುಭಾಷ 14 ವರ್ಷಗಳ ಹಿಂದಿನಂತೆ ಈಗಲೂ ತನಗಿಂತ 20 ವರ್ಷ ಕಡಿಮೆ ವಯಸ್ಸಿನ ವಿದ್ಯಾರ್ಥಿಗಳೊಂದಿಗೆ ತರಗತಿಗೆ ಹಾಜರಾಗಿ ಅದರಲ್ಲೂ ತನ್ನ ವಿದ್ಯಾರ್ಥಿ ಸಹಪಾಠಿಗಳೇ ಬೋಧಕರಾಗಿದ್ದರಿಂದ ಅವರಿಂದ ಬೋಧನೆ ಕಲಿತಿರುವುದು ಒಂದು ಅಪರೂಪ-ಅಸಾಮಾನ್ಯ ಸಂಗತಿ.
ಇಂದು ಪದವಿ ಪ್ರದಾನ: ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಕಾಲೇಜಿ(ಎಂಆರ್‌ಎಂಸಿ)ನ ಪ್ರಸಕ್ತ ಸಾಲಿನ ವೈದ್ಯಕೀಯ ಪದವಿ ಪ್ರದಾನ ಸಮಾರಂಭ ಫೆ.15ರಂದು ಸಂಜೆ 5:30ಕ್ಕೆ ಕಾಲೇಜಿನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ರಾಜೀವಗಾಂಧಿ ಆರೋಗ್ಯ ವಿವಿ ಕುಲಪತಿ ಡಾ| ಎಸ್. ಸಚ್ಚಿದಾನಂದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಘಟಿಕೋತ್ಸವ ಭಾಷಣ ನೆರವೇರಿಸಿ ವೈದ್ಯಕೀಯ ಪದವಿ ಪ್ರದಾನ ಮಾಡಲಿದ್ದಾರೆ.
ಸುಭಾಷ ವಿದ್ಯಾರ್ಥಿಯಾಗಿ ತರಗತಿಗೆ ಹಾಜರಾಗಿರುವಂತೆ ಈಗಲೂ ಅದೇ ಶ್ರದ್ಧೆ ಹಾಗೂ ಕಲಿಕಾ ಆಸಕ್ತಿಯಿಂದ ಪಾಲ್ಗೊಂಡು ಪದವಿ ಪೂರ್ಣಗೊಳಿಸಿರುವುದು ಸಮಾಜಕ್ಕೆ ಮಾದರಿ. 14 ವರ್ಷಗಳ ಕಾಲ ಜೈಲುವಾಸ ಅನುಭವಿಸಿ ಎಳ್ಳಷ್ಟೂ ಕುಗ್ಗದೇ ತನಗಿಂತ 18ರಿಂದ 20 ವರ್ಷ ಕಡಿಮೆ ವಯಸ್ಸಿನ ವಿದ್ಯಾರ್ಥಿಗ ಳೊಂದಿಗೆ ಅದೇ ಉತ್ಸಾಹದಿಂದ ಕಲಿತಿರುವುದು ನಿಜಕ್ಕೂ ಆಶ್ಚರ್ಯ.
-ಡಾ|ಉಮೇಶ್ಚಂದ್ರ ಡಿ.ಜಿ. ಡೀನ್, ಎಂಆರ್‌ಎಂಸಿ
14 ವರ್ಷಗಳ ಜೈಲುವಾಸ ಎಲ್ಲ ನಿಟ್ಟಿನ ಪಾಠ ಕಲಿಸಿದೆ. ಜೈಲಿನಲ್ಲಿ ದ್ದಾಗ ಗ್ರಂಥಾಲಯದಲ್ಲೇ ಹೆಚ್ಚಿನ ಸಮಯ ಕಳೆಯುತ್ತಿದ್ದೆ. ಜೈಲಿಗೆ ಹೋದ ನಂತರ ಮುಖ್ಯವಾಗಿ ತಾಳ್ಮೆ ಕಳೆದುಕೊಳ್ಳಲಿಲ್ಲ. ಎಂಬಿಬಿಎಸ್ ಪದವಿ ಪಡೆದಿದ್ದರಿಂದ ಸಣ್ಣದಾದ ಕ್ಲಿನಿಕ್ ತೆಗೆದು ಕೈದಿಗಳ ಸಂಬಂಧಿಕರಿಗೆ ಹಾಗೂ ಸೈನಿಕರಿಗೆ ಉಚಿತ ವೈದ್ಯಕೀಯ ಸೇವೆ ನೀಡಲು ನಿರ್ಧರಿಸಿದ್ದೇನೆ. ಈಗೇನಿದ್ದರೂ ಸಮಾಜಕ್ಕೆ ವೈದ್ಯ ಸೇವೆಗೆ ಕಂಕಣಬದ್ಧನಾಗಿದ್ದೇನೆ.
-ಡಾ| ಸುಭಾಷ ಟಿ. ಪಾಟೀಲ, ವೈದ್ಯ ಪದವೀಧರ
ಡಾ| ಸುಭಾಷ ಪಾಟೀಲ ಹಳೇ ಸಹಪಾಠಿ. ನಾವು ವೈದ್ಯ ಕಾಲೇ ಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿದ್ದರೆ, ಸುಭಾಷ ಪ್ರಧಾನ ಕಾರ್ಯದರ್ಶಿಯಾಗಿದ್ದ. ಆಕಸ್ಮಿಕವಾಗಿ ಅಪರಾಧ ಪ್ರಕರಣ ಎಸಗಿ, ಜೈಲುವಾಸ ಅನುಭವಿಸಿ ಹೊರ ಬಂದ ನಂತರ ಮೊದಲಿನ ಉತ್ಸುಕತೆಯಿಂದಲೇ ಪದವಿ ಪೂರ್ಣಗೊಳಿಸಿರುವುದು ಹೆಮ್ಮೆ ಮೂಡಿಸುವಂತಿದೆ.
-ಡಾ| ಕಿರಣ ದೇಶಮುಖ, ಮುಖ್ಯಸ್ಥರು, ಇಎನ್‌ಟಿ ವಿಭಾಗ, ಬಸವೇಶ್ವರ ಆಸ್ಪತ್ರೆ
* ಹಣಮಂತರಾವ ಭೈರಾಮಡಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Private Bus fare: ಶೀಘ್ರದಲ್ಲೇ ಖಾಸಗಿ ಬಸ್ ಪ್ರಯಾಣ ದರವೂ ಏರಿಕೆ?
Minimum Temperature: ಬೆಂಗಳೂರಿನಲ್ಲಿ ಶೀಘ್ರ 11 ಡಿಗ್ರಿ ತಾಪ?: 12 ವರ್ಷದಲ್ಲೇ ದಾಖಲೆ
Report: ಐಸಿಯು ಗಲೀಜು, ಟ್ಯಾಂಕ್‌ನಲ್ಲಿ ಪಾಚಿ: ಸರಕಾರಿ ಆಸ್ಪತ್ರೆಗಳ ದುಃಸ್ಥಿತಿ!
JDS: ಆಂತರಿಕ ಚುನಾವಣೆ ಮೂಲಕವೇ ರಾಜ್ಯಾಧ್ಯಕ್ಷರ ಆಯ್ಕೆ: ಎಚ್.ಡಿ.ಕುಮಾರಸ್ವಾಮಿ
Contracter Case: ಗುತ್ತಿಗೆದಾರ ಆತ್ಮಹತ್ಯೆ: ಸಚಿವ ಪ್ರಿಯಾಂಕ್ ರಾಜೀನಾಮೆಗೆ ಬಿಜೆಪಿ ಆಗ್ರಹ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Photography: ಎಲ್ಲೆಲ್ಲೂ ಫೋಟೋಗ್ರಫಿ
Pune: ಪಿಜ್ಜಾ ಆರ್ಡರ್ ಮಾಡುವ ಮುನ್ನ ಎಚ್ಚರ.. ಪಿಜ್ಜಾದಲ್ಲಿತ್ತು ಚಾಕುವಿನ ತುಂಡು
Kerala: ದೇಗುಲ ಸಂಪ್ರದಾಯ ಬದಲು ಹಕ್ಕು ತಂತ್ರಿಗಳದ್ದು, ಸರ್ಕಾರದಲ್ಲ: ಕೇರಳ ಸಚಿವ
Abujhmad: ಗುಂಡಿನ ಕಾಳಗದಲ್ಲಿ ನಾಲ್ವರು ನಕ್ಸಲೀಯರ ಹತ್ಯೆ; ಓರ್ವ ಪೊಲೀಸ್ ಹುತಾತ್ಮ
Chikkamagaluru: ತಾಯಿ ಮನೆಗೆ ಬರಲಿಲ್ಲ ಎಂದು ಮಾವನ ಮೇಲೆ ಮಚ್ಚು ಬೀಸಿದ ಅಳಿಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.