Belagavi: ಚಳಿಗಾಲದ ಅಧಿವೇಶ- ಬೆಳಗಾವಿ ಸುವರ್ಣ ವಿಧಾನಸೌಧ ಸಜ್ಜು

ಆರೋಪ ಮತ್ತು ಪ್ರತ್ಯಾರೋಪಗಳ ಸುರಿಮಳೆಗೆ ಮೇಲ್ಮನೆ, ಕೆಳಮನೆ ಸಜ್ಜು

Team Udayavani, Dec 2, 2023, 10:27 PM IST

belagavi session

ಬೆಳಗಾವಿ: ಭೀಕರ ಬರಗಾಲ, ರೈತರ ಸಂಕಷ್ಟದ ಸರಮಾಲೆಯ ನಡುವೆ ಸುವರ್ಣ ವಿಧಾನಸೌಧ ನೂತನ ಸರಕಾರದ ಚಳಿಗಾಲದ ಅಧಿವೇಶನಕ್ಕೆ ಎಲ್ಲ ರೀತಿಯಿಂದ ಸಜ್ಜಾಗಿ ನಿಂತಿದೆ. ಭವ್ಯವಾದ ಕಟ್ಟಡದಲ್ಲಿ ಇನ್ನು ಹತ್ತು ದಿನಗಳ ಕಾಲ ರಾಜಕೀಯ ಕುಸ್ತಿ, ಆರೋಪ ಮತ್ತು ಪ್ರತ್ಯಾರೋಪಗಳ ಸುರಿಮಳೆ ಹರಿಯಲಿದ್ದು, ಇದಕ್ಕಾಗಿ ವೇದಿಕೆ ಸಿದ್ಧವಾಗಿದೆ.

ಸೋಮವಾರ (ಡಿ.4)ದಿಂದ ಎರಡು ವಾರಗಳ ಕಾಲ ವಿಧಾನಸಭೆ ಮತ್ತು ವಿಧಾನ ಪರಿಷತ್‌ ಕಲಾಪಗಳು ನಡೆಯಲಿದ್ದು ಎರಡೂ ಸದನ ಸಜ್ಜುಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಕಾರ ಅಧಿಕಾರಕ್ಕೆ ಬಂದ ಅನಂತರ ಸುವರ್ಣ ವಿಧಾನಸೌಧ ಈ ಸರಕಾರದ ಮೊದಲ ಅಧಿವೇಶನಕ್ಕೆ ಸಾಕ್ಷಿಯಾಗುತ್ತಿದೆ. ಹೀಗಾಗಿ ಈ ಭಾಗದ ಜನರಲ್ಲಿ ಸಹಜವಾ ಗಿಯೇ ಕುತೂಹಲಗಳು ಗರಿಗೆದರಿವೆ.

ಸರಕಾರದ ಆಡಳಿತ ಯಂತ್ರ ಹಂತ ಹಂತವಾಗಿ ಬೆಳಗಾವಿಗೆ ಬಂದಿಳಿದಿದೆ. ಅಧಿವೇಶನದ ಸಂದರ್ಭ ನೆಟ್‌ವರ್ಕ್‌ ಸಮಸ್ಯೆ ಉಂಟಾಗದಂತೆ 12 ಬೂಸ್ಟರ್‌ಗಳು ಮತ್ತು ಮೂರು ಮೊಬೈಲ್‌ ಟವರ್‌ ಅಳವಡಿಸಲಾಗಿದೆ. ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದು ಸುವರ್ಣ ವಿಧಾನಸೌಧವನ್ನು ಜಿಲ್ಲಾಡಳಿತದ ಸುಪರ್ದಿಗೆ ವಹಿಸಲಾಗಿದೆ.

ಅಧಿವೇಶನದ ದಿನಾಂಕ ಘೋಷಣೆಯಾ ಗುವ ಮೊದಲು ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ್‌ ಮತ್ತು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅಧಿವೇಶನದ ಸಿದ್ಧತೆ ಪರಿಶೀಲಿಸಿ ಸುವರ್ಣ ವಿಧಾನಸೌಧದ ಸ್ಥಿತಿ ಮತ್ತು ಅಲ್ಲಿನ ಕಳಪೆ ಕಾಮಗಾರಿಗಳ ಬಗ್ಗೆ ಅಸಮಾಧಾನ ಹೊರಹಾಕಿದ್ದರಲ್ಲದೇ ಅಧಿಕಾರಿಗಳಿಗೆ ಕೆಲವು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದರು. ಅಂತೆಯೇ ಸೌಧದ ಒಳಭಾಗದ ಗೋಡೆಗಳಿಗೆ ಬಣ್ಣ ಬಳಿಯಲಾಗಿದೆ. ಮಳೆಯಿಂದ ಪಾಚಿಗಟ್ಟಿದ್ದ ಹೊರಭಾಗದ ಗೋಡೆಗಳನ್ನು ಸ್ವತ್ಛ ಮಾಡಲಾಗಿದೆ. ಸೌಧದ ಒಳ ಮತ್ತು ಹೊರ ಆವರಣ ಸಂಪೂರ್ಣ ಸ್ವತ್ಛಗೊಳಿಸಿ ಹೊಸ ರೂಪ ಕೊಡಲಾಗಿದೆ.

ದೀಪಾಲಂಕಾರ
ಸುವರ್ಣ ವಿಧಾನಸೌಧದಲ್ಲಿ ಈಗ ಎಲ್‌ಇಡಿ ಬಣ್ಣದ ದೀಪಗಳನ್ನು ಅಳವಡಿಸುತ್ತಿರುವುದು ವಿಶೇಷ. ಈ ದೀಪಗಳ ವ್ಯವಸ್ಥೆ ಶಾಶ್ವತವಾಗಿರಲಿದೆ. ಅಧಿವೇಶನ ನಡೆಯುವ ದಿನಗಳಲ್ಲದೇ ರಜಾ ದಿನಗಳು ಮತ್ತು ರಾಷ್ಟ್ರೀಯ ಹಬ್ಬಗಳ ಸಂದರ್ಭ ಈ ದೀಪಗಳಿಂದ ಸೌಧವನ್ನು ಅಲಂಕಾರ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ. ಅಧಿವೇಶನದ ಸಂದರ್ಭದಲ್ಲೇ ಮುಖ್ಯಮಂತ್ರಿಗಳು ಈ ಯೋಜನೆಗೆ ಚಾಲನೆ ನೀಡುವ ಸಾಧ್ಯತೆಯಿದೆ.

ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಸಲಹೆ ಮೇರೆಗೆ ಸುವರ್ಣ ವಿಧಾನಸೌಧದ ಆವರಣದಲ್ಲಿ ಔಷಧೀಯ ಸಸ್ಯಗಳ ಜತೆಗೆ ವಿವಿಧ ಜಾತಿಗಳ ಸಸಿ ನೆಡಲು ಯೋಜನೆ ರೂಪಿಸಲಾಗಿದೆ. ಅಧಿವೇಶನ ವೀಕ್ಷಿಸಲು ಬರುವ ಮಕ್ಕಳ ಬಗ್ಗೆ ಈ ಬಾರಿ ವಿಶೇಷ ಕಾಳಜಿ ವಹಿಸಲಾಗಿದೆ. ಅವರಿಗೆ ಸದನದ ಕಲಾಪಗಳ ಬಗ್ಗೆ ತಿಳಿದುಕೊಳ್ಳಲು ನೆರವಾಗುವುದಲ್ಲದೆ ಸೌಧದ ಆವರಣದಲ್ಲಿ ಓಡಾಡಲು ಮಿನಿ ಬಸ್‌ಗಳ ವ್ಯವಸ್ಥೆ ಸಹ ಮಾಡಲಾಗುತ್ತಿದೆ.

ಸುವರ್ಣ ವಿಧಾನಸೌಧದ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಕಚೇರಿಗಳನ್ನು ತಾತ್ಕಾಲಿಕವಾಗಿ ನೆಲಮಹಡಿಗೆ ಸ್ಥಳಾಂತರಿಸಲಾಗಿದೆ. ಅಧಿವೇಶನಕ್ಕೆ ಬರುವವರಿಗೆ ಅನುಕೂಲವಾಗಲು 5 ಸಾವಿರ ವಾಹನಗಳಿಗೆ ಹೆಚ್ಚುವರಿ ಪಾರ್ಕಿಂಗ್‌ ಸ್ಥಳ ಒದಗಿಸಲಾಗಿದೆ. ನಗರಕ್ಕೆ ಹೊಸ ರೂಪ ಅಧಿವೇಶನಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಬೆಳಗಾವಿ ಚಿತ್ರಣವೇ ಬದಲಾಗಿದೆ. ವಾಹನಗಳ ಭರಾಟೆ ಜೋರಾಗಿದೆ. ಅಧಿಕಾರಿಗಳು ಸರಣಿ ಸಭೆಗಳನ್ನು ನಡೆಸುವುದರಲ್ಲಿ ತಲ್ಲೀನರಾಗಿದ್ದರೆ ಕಾರ್ಮಿಕ ಸಿಬಂದಿ ಸುವರ್ಣ ವಿಧಾನಸೌಧ ಮತ್ತು ನಗರದ ರಸ್ತೆಗಳಿಗೆ ಮತ್ತೆ ಹೊಸ ರೂಪ ಕೊಡುತ್ತಿದ್ದಾರೆ.

ವಿಧಾನಮಂಡಲ ಚಳಿಗಾಲದ ಅಧಿವೇಶನ ಸುಗಮವಾಗಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ ಹಲವು ಸಮಿತಿ ರಚಿಸಲಾಗಿದ್ದು, ಎಲ್ಲ ಸಮಿತಿಗಳಿಗೆ ಜವಾಬ್ದಾರಿ ನೀಡಲಾಗಿದೆ. ಊಟ ಮತ್ತು ವಸತಿ ಸೌಕರ್ಯ ಕಲ್ಪಿಸಲಾಗಿದೆ. ವಿಧಾನಸಭೆ ಮತ್ತು ವಿಧಾನ ಪರಿಷತ್‌ ಸಭಾಂಗಣದಲ್ಲಿ ಸೂಕ್ತ ವ್ಯವಸ್ಥೆ ಮಾಡುವ ಜತೆಗೆ ಸೌಧದ ಆವರಣ ಸುಂದರಗೊಳಿಸಲಾಗಿದೆ.
-ನಿತೇಶ್‌ ಪಾಟೀಲ, ಜಿಲ್ಲಾಧಿಕಾರಿ

18 ವರ್ಷ, 11 ಅಧಿವೇಶನ, 130 ಕೋಟಿ ರೂ. ಖರ್ಚು!

ಕಳೆದ ಹದಿನೆಂಟು ವರ್ಷಗಳಲ್ಲಿ ಹನ್ನೊಂದು ಅಧಿವೇಶನ.. ಹಲವಾರು ಬೇಡಿಕೆಗಳ ನೂರಾರು ಪ್ರತಿಭಟನೆ.. ಮೈತ್ರಿ ಸರ್ಕಾರ, ಬಿಜೆಪಿ ಮತ್ತು ಕಾಂಗ್ರೆಸ್‌ ಸರ್ಕಾರದ ಆಡಳಿತ.. ಇಷ್ಟಾದರೂ ಸಮಸ್ಯೆಗಳು ಮಾತ್ರ ಎಂದಿನಂತೆ ಜೀವಂತ.. ಇವತ್ತಿಗೂ ಅದೇ ಬೇಡಿಕೆಗಳ ಹೋರಾಟ, ಹಾರಾಟ..!

ಇದು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದಿರುವ ಹಾಗೂ ನಡೆಯುತ್ತಿರುವ ಅಧಿವೇಶನಗಳ ಸಂಕ್ಷಿಪ್ತ ಕಥೆ. ಇದುವರೆಗೆ ನಡೆದಿರುವ ಹನ್ನೊಂದು ಅಧಿವೇಶನಗಳಿಗೆ 130 ಕೋಟಿ ರೂ.ಗಳಿಗೂ ಅಧಿಕ ಹಣ ವೆಚ್ಚವಾಗಿದೆ. ಅಧಿವೇಶನಕ್ಕೆ ಬರುವ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸೌಲಭ್ಯಗಳಲ್ಲಿ ಯಾವ ಕೊರತೆಯೂ ಕಂಡು ಬಂದಿಲ್ಲ. ಆದರೆ ಇದರಿಂದ ಸಾಧಿಸಿದ್ದು ಏನು ಎನ್ನುವ ಪ್ರಶ್ನೆ ಮೂಡಿದೆ.

ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಸಲುವಾಗಿಯೇ ಸುಮಾರು 500 ಕೋಟಿ ರೂ. ವೆಚ್ಚ ಮಾಡಿ ನಿರ್ಮಿಸಿರುವ ಸುವರ್ಣ ವಿಧಾನಸೌಧದಿಂದ ಯಾವುದೇ ಲಾಭವಾಗಿಲ್ಲ ಎಂಬ ಆರೋಪ ಇನ್ನೂ ಗಟ್ಟಿಯಾಗಿಯೇ ಕೇಳಿಬರುತ್ತಿದೆ. ಈ ಧ್ವನಿ ಸ್ವಲ್ಪವೂ ಕ್ಷೀಣಿಸಿಲ್ಲ. 2012ರಲ್ಲಿ ಇದರ ಉದ್ಘಾಟನೆಯನ್ನು ಆಗಿನ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ನೆರವೇರಿಸಿದ್ದರು. ಆಗ ಉದ್ಘಾಟನಾ ಕಾರ್ಯಕ್ರಮಕ್ಕೇ 8 ಕೋಟಿಗೂ ಹೆಚ್ಚು ಹಣ ಖರ್ಚು ಮಾಡುವ ಮೂಲಕ ದಾಖಲೆ ಬರೆಯಲಾಗಿತ್ತು. ಇದು ಪ್ರತಿಯೊಬ್ಬರ ಹುಬ್ಬೇರುವಂತೆ ಮಾಡಿತ್ತು. ಈ ಭಾಗದ ಜನಪ್ರತಿನಿಧಿಗಳು ದುಂದುವೆಚ್ಚದ ಬಗ್ಗೆ ಯಾವತ್ತೂ ಪ್ರಶ್ನೆ ಮಾಡಿಲ್ಲ. ಹೋರಾಟ ಸಮಿತಿಗಳು ಸರ್ಕಾರದ ವಿರುದ್ಧ ಕೂಗು ಎತ್ತಿದರೂ ಅದಕ್ಕೆ ಯಾವ ಮುಖ್ಯಮಂತ್ರಿಗಳೂ, ಸಚಿವರೂ ಸೊಪ್ಪು ಹಾಕಲಿಲ್ಲ. ಪರಿಣಾಮ 11 ಅಧಿವೇಶನಗಳಿಗೆ 130 ಕೋಟಿ ರೂ. ವೆಚ್ಚ ಮಾಡಿದ್ದರೂ ಅದರ ಬಗ್ಗೆ ಈ ಭಾಗದ ಶಾಸಕರು ಮೌನವಾಗಿದ್ದಾರೆ. ಇದರ ಸಾರ್ಥಕತೆಯ ಬಗ್ಗೆ ಸಹ ಯಾವ ಅಧಿವೇಶನದಲ್ಲೂ ಪ್ರಸ್ತಾಪವಾಗಿಲ್ಲ.

ಕೋಟಿ ಕೋಟಿ ಖರ್ಚು:
2006ರಲ್ಲಿ ಮೊದಲ ಬಾರಿಗೆ ನಡೆದ 5 ದಿನಗಳ ಅಧಿವೇಶನಕ್ಕೆ ಆಗ ಐದು ಕೋಟಿ ರೂ. ವೆಚ್ಚ ಮಾಡಲಾಗಿತ್ತು. 2009ರಲ್ಲಿ ನಡೆದ ಎಂಟು ದಿನಗಳ ಅಧಿವೇಶನಕ್ಕೆ 12.33 ಕೋಟಿ, 2012ರಲ್ಲಿ ಏಳು ದಿನಗಳ ಅಧಿವೇಶನಕ್ಕೆ 7.39 ಕೋಟಿ, 2013ರಲ್ಲಿ 10 ದಿನಗಳಿಗೆ 14.40 ಕೋಟಿ, 2014ರಲ್ಲಿ 10 ದಿನಗಳ ಕಲಾಪಕ್ಕೆ 10.09 ಕೋಟಿ, 2015ರಲ್ಲಿ 10 ದಿನಗಳಿಗೆ 6.95 ಕೋಟಿ, 2016ರಲ್ಲಿ 10 ದಿನಗಳಿಗೆ 7.20 ಕೋಟಿ, 2017ರಲ್ಲಿ 10 ದಿನಗಳಿಗೆ 21.57 ಕೋಟಿ, 2018ರಲ್ಲಿ 10 ದಿನಗಳ ಕಲಾಪಕ್ಕೆ 13.85 ಕೋಟಿ, 2021ರಲ್ಲಿ 15 ಕೋಟಿ ಮತ್ತು 2022ರಲ್ಲಿ 17.50 ಕೋಟಿ ರೂ. ವೆಚ್ಚ ಮಾಡಲಾಗಿದೆ.
ಇಷ್ಟೆಲ್ಲ ಖರ್ಚು ಮಾಡಿದ್ದರೂ ಉತ್ತರ ಕರ್ನಾಟಕದ ಚಿತ್ರಣ ಬದಲಾಗಿದೆಯೇ? ಎಲ್ಲ ನೀರಾವರಿ ಯೋಜನೆಗಳು ಪೂರ್ಣಗೊಂಡಿವೆಯೇ ಎಂಬ ಪ್ರಶ್ನೆಗೆ ಬರುವ ಉತ್ತರ ಖಂಡಿತ ಇಲ್ಲ’. ಹಾಗಾದರೆ ಅಧಿವೇಶನ ನಡೆಸಿದ್ದು ಯಾವ ಸಾರ್ಥಕತೆಗೆ ಎಂಬುದು ಈ ಭಾಗದ ಜನರು ಹಾಗೂ ಅಭಿವೃದ್ಧಿ ಪರ ಚಿಂತಕರ ಪ್ರಶ್ನೆ.

ಉತ್ತರ ಕರ್ನಾಟಕ ಅದರಲ್ಲೂ ವಿಶೇಷವಾಗಿ ಗಡಿ ಭಾಗದ ಅಭಿವೃದ್ಧಿಯಾಗಬಾರದು ಎಂಬುದು ಸರ್ಕಾರಗಳ ಸ್ಪಷ್ಟ ಉದ್ದೇಶ ಇದ್ದಂತೆ ಕಾಣುತ್ತಿದೆ. 2006ರಿಂದ ಇಲ್ಲಿವರೆಗೆ ನಡೆದ ಅಧಿವೇಶನಗಳಿಂದ ಏನೂ ಪ್ರಯೋಜನವಾಗಿಲ್ಲ. ಗಡಿ ಭಾಗ ಸುಧಾರಣೆ ಕಂಡಿಲ್ಲ. ನೀರಾವರಿ ಯೋಜನೆಗಳು ಪೂರ್ಣಗೊಂಡಿಲ್ಲ. ಹೀಗಾಗಿ ಬೆಳಗಾವಿಯಲ್ಲಿ ಅಧಿವೇಶನ ಮಾಡಿದರೂ ಅಷ್ಟೇ, ಬಿಟ್ಟರೂ ಅಷ್ಟೇ ಎಂಬ ತಾತ್ಸಾರ ಭಾವನೆ ಜನರಲ್ಲಿ ಬಂದಿದೆ ಎಂಬುದು ಕನ್ನಡ ಹೋರಾಟಗಾರರ ಅಭಿಪ್ರಾಯ.

ಅಧಿವೇಶನಗಳ ಸಾರ್ಥಕತೆ ಮಾತು ಬಂದಾಗ ಬಹಳ ನಿರಾಸೆಯಾಗುತ್ತದೆ. ಇಷ್ಟು ಅಧಿವೇಶನಗಳನ್ನು ನೋಡಿದಾಗ ಉತ್ತರ ಕರ್ನಾಟಕದ ಚಿತ್ರಣವೇ ಬದಲಾಗಬೇಕಿತ್ತು. ಆದರೆ ಸಮಸ್ಯೆಗಳು ಇನ್ನೂ ಜೀವಂತವಾಗಿವೆ. ಅಧಿವೇಶನದಲ್ಲಿ ರಚನಾತ್ಮಕ ಚರ್ಚೆಗಳು ನಡೆಯಬೇಕು. ಈ ಚರ್ಚೆಗಳು ಮುಂದೆ ಕಾರ್ಯರೂಪದಲ್ಲಿ ಬರಬೇಕು.
-ಡಾ. ಬಸವರಾಜ ಜಗಜಂಪಿ, ಶಿಕ್ಷಣ ತಜ್ಞರು

ಹತ್ತು ದಿನಗಳ ಕಾಲ ಬೆಂಗಳೂರಿನಿಂದ ಬೆಳಗಾವಿಗೆ ಸರ್ಕಾರ ಸ್ಥಳಾಂತರವಾಗುತ್ತದೆ ಎಂಬುದನ್ನು ಬಿಟ್ಟರೆ ಬೇರೆ ಏನೂ ಬದಲಾವಣೆ ಆಗಿಲ್ಲ. ಪ್ರಮುಖ ಸಮಸ್ಯೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಈ ಬಗ್ಗೆ ಸರ್ಕಾರ ಮತ್ತು ಪ್ರತಿಪಕ್ಷದವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಸದನದ ಒಳಗಡೆ ಒಮ್ಮೆಯೂ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಗಂಭೀರ ಚರ್ಚೆ ನಡೆದೇ ಇಲ್ಲ. ನಡೆದಿದ್ದರೂ ಅವುಗಳು ಕಾರ್ಯರೂಪಕ್ಕೆ ಬಂದಿಲ್ಲ. ಇದುವರೆಗಿನ ಅಧಿವೇಶನಗಳ ಸಾಧನೆ ಶೂನ್ಯ.
-ಬಸವರಾಜ ರೊಟ್ಟಿ, ಹಿರಿಯ ನ್ಯಾಯವಾದಿ

ಕೇಶವ ಆದಿ

ಟಾಪ್ ನ್ಯೂಸ್

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

IPL 2025-27: BCCI announces dates for next three IPL seasons

IPL 2025-27: ಮುಂದಿನ ಮೂರು ಐಪಿಎಲ್ ಸೀಸನ್‌ ನ ದಿನಾಂಕ ಪ್ರಕಟಿಸಿದ ಬಿಸಿಸಿಐ

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

5-video

ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ

Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

9-someshwara

Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ

Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.