Mobile ಸ್ಟೋರ್ ಉದ್ಯೋಗಿಯಿಂದ 2.36 ಲಕ್ಷ ರೂ. ಮೌಲ್ಯದ ಮೊಬೈಲ್, 58 ಸಾವಿರ ರೂ. ನಗದು ಕಳವು
Team Udayavani, Aug 23, 2024, 6:30 AM IST
ಮಂಗಳೂರು: ಬಂಟ್ಸ್ ಹಾಸ್ಟೆಲ್ ಮೊಬೈಲ್ ಫೋನ್ ಸ್ಟೋರ್ ಒಂದರ ಉದ್ಯೋಗಿ ಮೊಹಮ್ಮದ್ ಶಿಬಾನ್ ಎಂಬಾತ 2,36,510 ರೂ. ಮೌಲ್ಯದ 7 ಮೊಬೈಲ್ ಫೋನ್ ಮತ್ತು ಅಂಗಡಿಯ ಕ್ಯಾಶ್ ಡ್ರಾಯರ್ನಲ್ಲಿದ್ದ 58,100 ರೂ. ನಗದು ಕಳವು ಮಾಡಿರುವ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಲ್ಲಿನ ಜಾನ್ವಿ ಪ್ಲಾಝಾದಲ್ಲಿರುವ ಮೊಬೈಲ್ ಅಂಗಡಿಯ ಸ್ಟೋರ್ ಮ್ಯಾನೇಜರ್ ಸಂದೇಶ್ ಶೆಟ್ಟಿ ಎನ್ನುವವರು ರಜೆಯಲ್ಲಿ ತೆರಳುವ ಕಾರಣಕ್ಕಾಗಿ ಸ್ಟೋರ್ನ ಸಂಪೂರ್ಣ ಜವಾಬ್ದಾರಿಯನ್ನು ಮೊಹಮ್ಮದ್ ಶಿಬಾನ್ಗೆ ವಹಿಸಿದ್ದರು. ಆದರೆ ಆತ ಕಂಪೆನಿಯ ಕೆಲಸವನ್ನು ಸರಿಯಾಗಿ ನಿರ್ವಹಿಸದೇ ಇದ್ದುದರಿಂದ ಅವರು ರಜೆಯನ್ನು ಅರ್ಧದಲ್ಲಿ ಮೊಟಕುಗೊಳಿಸಿ ಬಂದಾಗ ಸ್ಟೋರಿನ ಬಾಗಿಲು ಹಾಕಲಾಗಿತ್ತು.
ಈ ಬಗ್ಗೆ ಕಂಪೆನಿಯ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ ಅವರ ಅನುಮತಿ ಮೇರೆಗೆ ಬಾಗಿಲನ್ನು ತೆರೆದಾಗ ಅಂಗಡಿಯ ಒಳಗಿನ ಸೊತ್ತುಗಳು ಅಸ್ತವ್ಯಸ್ತವಾಗಿತ್ತು. ಅವರು ಬೆಂಗಳೂರಿನಿಂದ ಬಂದು ಅಡಿಟ್ ಮಾಡಿ ಪರಿಶೀಲಿಸಿದಾಗ ಅಂಗಡಿಯಲ್ಲಿದ್ದ ಒಟ್ಟು 2,36,510 ರೂ. ಮೌಲ್ಯದ 7 ಮೊಬೈಲ್ ಫೋನ್ಗಳು ಮತ್ತು ಅಂಗಡಿಯ ಕ್ಯಾಶ್ ಡ್ರಾಯರ್ನಲ್ಲಿದ್ದ ನಗದು 58,100 ರೂ. ಇಲ್ಲದಿರುವುದು ಕಂಡುಬಂದಿತ್ತು.
ಈ ಬಗ್ಗೆ ಮೊಹಮ್ಮದ್ ಶಿಬಾನ್ಗೆ ಕರೆ ಮಾಡಿ ವಿಚಾರಿಸಿದಾಗ ತಾನು ತೆಗೆದುಕೊಂಡಿರುವುದಾಗಿ ಒಪ್ಪಿಕೊಂಡಿದ್ದು, ಅವುಗಳನ್ನು ವಾಪಸು ನೀಡುವುದಾಗಿ ಹೇಳಿದ್ದ. ಆದರೆ ವಾಪಸು ನೀಡದಿರುವದರಿಂದ ಸಂದೀಪ್ ಶೆಟ್ಟಿ ಕದ್ರಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kota; ಮತ್ತೊಬ್ಬ ವಿದ್ಯಾರ್ಥಿ ಆತ್ಮಹ*ತ್ಯೆ: ವರ್ಷದ 17ನೇ ಕೇಸು
C.T. Ravi ಗೈರು; ಸಾಹಿತ್ಯ ಕ್ಷೇತ್ರದಲ್ಲಿ ರಾಜಕೀಯ ಮಾಡಬಾರದು: ಎಚ್.ಕೆ.ಪಾಟೀಲ್
ಮಮ್ತಾಜ್ ಅಲಿ ಆತ್ಮಹತ್ಯೆಗೆ ಪ್ರಚೋದನೆ ಆರೋಪ: ಜಾಮೀನು ವಿಚಾರಣೆ ಅರ್ಜಿ ಮುಂದೂಡಿಕೆ
Kannada; ಬಳ್ಳಾರಿಯಲ್ಲಿ 88ನೇ ಕನ್ನಡ ಸಾಹಿತ್ಯ ಸಮ್ಮೇಳನ
BBK11: ಫಿನಾಲೆಗೆ ಬರುತ್ತಾರೆ ಎನ್ನಲಾಗುತ್ತಿದ್ದ ದೈತ್ಯ ಸ್ಪರ್ಧಿಯೇ ಬಿಗ್ ಬಾಸ್ ನಿಂದ ಔಟ್?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.