ಎಸ್ಸೆಸ್ಸೆಲ್ಸಿ ಫಲಿತಾಂಶಕ್ಕಾಗಿ 2 ದಿನ ಕಾದ ಮಕ್ಕಳು!
Team Udayavani, May 3, 2019, 6:00 AM IST
ಬಾಗಲಕೋಟೆ: ಪ್ರಸಕ್ತ ಎಸ್ಸೆಸ್ಸೆಲ್ಸಿ ಫಲಿತಾಂಶ ರಾಜ್ಯಾದ್ಯಂತ ಎರಡು ದಿನಗಳ ಹಿಂದೆಯೇ ಬಹಿರಂಗಗೊಂಡರೂ ಇಲ್ಲಿನ ಆದರ್ಶ ವಿದ್ಯಾಲಯದ 35 ವಿದ್ಯಾರ್ಥಿಗಳು ತಮ್ಮ ಫಲಿತಾಂಶಕ್ಕಾಗಿ ಎರಡು ದಿನ ಕಾಯಬೇಕಾದ ಪರಿಸ್ಥಿತಿ ಎದುರಾಗಿತ್ತು.
ಎರಡು ದಿನಗಳಿಂದ ನವನಗರದ ಆದರ್ಶ ವಿದ್ಯಾಲಯಕ್ಕೆ ಅಲೆದಾಡಿದಾಗ ಶಿಕ್ಷಕರು, ತಾಂತ್ರಿಕ ಸಮಸ್ಯೆ ಆಗಿದೆ. ಸದ್ಯದಲ್ಲೇ ಫಲಿತಾಂಶ ಬರುತ್ತದೆ ಎಂದು ಹೇಳುತ್ತಲೇ ಇದ್ದರು. ಎರಡು ದಿನಗಳಾದರೂ ಫಲಿತಾಂಶ ಬಾರದ ಹಿನ್ನೆಲೆಯಲ್ಲಿ 35 ಜನ ವಿದ್ಯಾರ್ಥಿಗಳು ಹಾಗೂ ಪಾಲಕರು ಗುರುವಾರ ಮಧ್ಯಾಹ್ನ ದಿಢೀರ್ ಪ್ರತಿಭಟನೆ ನಡೆಸಿದರು. ಇದೇ ವೇಳೆ ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಶಿಕ್ಷಕರ ಎದುರು ಕಣ್ಣೀರು ಹಾಕಿದರು.
ಈ ಘಟನೆ ನಡೆದ ಮೂರು ಗಂಟೆಯಲ್ಲಿ ಫಲಿತಾಂಶ ಕೂಡ ಬಂತು. ಬೆಳಿಗ್ಗೆ ಕಣ್ಣೀರು ಹಾಕಿ, ಪ್ರತಿಭಟನೆ ನಡೆಸಿದ್ದ ಮಕ್ಕಳು ಸಂಜೆಯ ಹೊತ್ತಿಗೆ ಖುಷಿಪಟ್ಟರು. ಆದರೆ, ಕೆಲವು ವಿದ್ಯಾರ್ಥಿಗಳು ನಾವು ನಿರೀಕ್ಷಿಸಿದ್ದ ಅಂಕ ಬಂದಿಲ್ಲ. ಹೀಗಾಗಿ ಮರು ಮೌಲ್ಯಮಾಪನಕ್ಕೆ ಹಾಕುತ್ತೇವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ranking: ಐಸಿಸಿ ನೂತನ ರ್‍ಯಾಂಕಿಂಗ್ ಪ್ರಕಟ: ಶಾಹೀನ್ ಅಫ್ರಿದಿ ಮತ್ತೆ ನಂ.1
Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.