20 ತಿಂಗಳ ಹಸಿವಿಗೆ ಕೊನೆಗೂ ಪರಿಹಾರ! ಬಿಸಿಯೂಟ ದತ್ತಾಂಶಕಾರರ ವೇತನ ಆದೇಶ
Team Udayavani, Dec 11, 2021, 5:02 AM IST
ಸಾಂದರ್ಭಿಕ ಚಿತ್ರ..
ಕುಂದಾಪುರ: ರಾಜ್ಯದ ಶಾಲಾ ಮಕ್ಕಳ ಬಿಸಿಯೂಟದ ಮಾಹಿತಿಯನ್ನು ಕಂಪ್ಯೂಟರ್‌ಗೆ ಅಳವಡಿಸುವ ಡಾಟಾ ಎಂಟ್ರಿ ಆಪರೇಟರ್‌ಗಳ ವೇತನ ಬಿಡುಗಡೆ ಮಾಡಲು ಕೊನೆಗೂ ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ.
ಡಿ. 9ರಂದು ಸಂಜೆ ಈ ಕುರಿತು ಆದೇಶ ಹೊರಡಿಸಿದ ಆರ್ಥಿಕ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಆರ್. ಲತಾ ಅವರು ವೇತನ ನೀಡಲು ಸೂಚಿಸುವ ಮೂಲಕ ರಾಜ್ಯದ 208 ಮಂದಿ ದತ್ತಾಂಶಕಾರರಿಗೆ ಕಳೆದ 20 ತಿಂಗಳಿನಿಂದ ಬಾಕಿಯಾಗಿದ್ದ ವೇತನ ವನ್ನು ದೊರೆಯುವಂತೆ ಮಾಡಿದ್ದಾರೆ.
ಆದೇಶ
ಮಧ್ಯಾಹ್ನ ಉಪಾಹಾರ ಯೋಜನೆ ಯಡಿ ಹೊರಗುತ್ತಿಗೆ ಆಧಾರದ ಮೇಲೆ ಜಿಲ್ಲಾ ಹಂತದಲ್ಲಿ 32 ಡಾಟಾ ಎಂಟ್ರಿ ಆಪರೇಟರ್‌ಗಳು, ತಾಲೂಕು ಹಂತದಲ್ಲಿ 176 ಡಾಟಾ ಎಂಟ್ರಿ ಆಪರೇಟರ್‌ಗಳ ಸೇವೆಯನ್ನು ಎಂಎಂಇ ಕಾರ್ಯಕ್ರಮದಡಿ ಪಡೆಯಲು ಕೇಂದ್ರ ಸರಕಾರ ಬೆಂಬಲಿಸುವವರೆಗೆ ಮಾತ್ರ ಮುಂದುವರಿಸತಕ್ಕದ್ದು. ಇಷ್ಟೂ ಜನರಿಗೆ ಕೇಂದ್ರ ಸರಕಾರದಿಂದ ಎಂಎಂಇ ಕಾರ್ಯಕ್ರಮದಡಿ ಬಿಡುಗಡೆ ಮಾಡಲಾಗುವ ಅನುದಾನ ದಿಂದಲೇ ಸಂಪೂರ್ಣ ವೇತನ ಭರಿಸತಕ್ಕದ್ದು. ಈ ಉದ್ದೇಶಕ್ಕಾಗಿ ವೇತನ ಪಾವತಿಗಾಗಿ ರಾಜ್ಯದ ಪಾಲಿನ ಅನುದಾನವಾಗಿ ಯಾವುದೇ ಕಾರಣಕ್ಕೆ ಕೋರತಕ್ಕದ್ದಲ್ಲ ಎಂದು ಆದೇಶದಲ್ಲಿ ಸೂಚಿಸಿದ್ದಾರೆ.
ತಡೆ ಯಾಕೆ
ವೇತನ ಬಿಡುಗಡೆಗೆ ಆದೇಶ ನೀಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರಕಾರ ಬಿಡುಗಡೆ ಮಾಡುವ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ನೀಡುವುದಕ್ಕೆ ಇಷ್ಟು ಸಮಯ ಕಾಲಹರಣ ಮಾಡಿದ್ದು ಯಾಕೆ? ರಾಜ್ಯದ ಪಾಲು ನಯಾಪೈಸೆ ಇಲ್ಲದೇ ಇದ್ದರೂ ಕಳೆದ 20 ತಿಂಗಳಿನಿಂದ ವೇತನ ತಡೆ ಹಿಡಿದದ್ದು ಯಾಕೆ? ಕೇಂದ್ರ ಬಿಡುಗಡೆ ಮಾಡಿದ ಮೇಲೂ ತಡೆ ಹಿಡಿದದ್ದು ಯಾಕೆ? ಹೀಗೆ ಪ್ರಶ್ನೆಗಳ ಸುರಿಮಳೆಯಿದ್ದು ಶಿಕ್ಷಣ ಇಲಾಖೆಯ ಈ ವಿಭಾಗದ ಉನ್ನತ ಅಧಿಕಾರಿಗಳ ಮೇಲೆ ಸಂಶಯದ ಬೊಟ್ಟು ತೋರುವಂತೆ ಮಾಡಿದೆ. ಮೂಲಗಳ ಪ್ರಕಾರ ಒಂದು ಬಾರಿಯ ವೇತನ 42 ಲಕ್ಷ ರೂ.ಗಳಾಗುತ್ತವೆ. ದೊಡ್ಡ ಮೊತ್ತ ಬಿಡುಗಡೆ ಮಾಡಲು ಪ್ರತಿಫಲ ಅಪೇಕ್ಷಿಸಿ ಹೀಗೆ ಅಮಾಯಕರ ಹೊಟ್ಟೆಗೆ ಹೊಡೆಯಲಾಗಿದೆ ಎಂಬಆರೋಪವೂ ಇದೆ. ಅದಲ್ಲದಿದ್ದರೆ ಕೇಂದ್ರದಿಂದ ಬಂದ ಅನುದಾನವನ್ನು ಕಾರಣವಿನಾ ನೌಕರರಿಗೆ ನೀಡದೇ ವಿಳಂಬಿಸಿ ವಂಚಿಸಿದವರ ಮೇಲೆ ಸರಕಾರ ಕಾನೂನು ಕ್ರಮವಾದರೂ ಕೈಗೊಳ್ಳಬೇಕಿದೆ.
ಇದನ್ನೂ ಓದಿ:ವಾಸ್ತುಶಿಲ್ಪಿ ಬಾಲಕೃಷ್ಣ ಜೋಷಿಗೆ ರಾಯಲ್ ಗೋಲ್ಡ್ ಮೆಡಲ್ 2022 ಗೌರವ
“ಉದಯವಾಣಿ’ ಪತ್ರಿಕೆ ಡಿ. 2ರಂದು “ಬಿಸಿಯೂಟ ದತ್ತಾಂಶಕಾರರ 20 ತಿಂಗಳ ಹಸಿವಿಗಿಲ್ಲ ಪರಿಹಾರ’ ಎಂದು ವರದಿ ಮಾಡಿತ್ತು. ವರದಿಗಾಗಿ ಸಂಪರ್ಕಿಸಿದಾಗ ಖುದ್ದು ಶಿಕ್ಷಣ ಸಚಿವರು ಈ ಬಗ್ಗೆ ಎರಡು ಮೂರು ದಿನಗಳಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಇದೀಗ ಡಿ. 9ರಂದು ಆದೇಶ ಹೊರಬೀಳುವ ಮೂಲಕ ಸಚಿವರ ಮಾತು ಫಲಿಸಿದೆ. ವರದಿಗೆ ಮನ್ನಣೆ ದೊರೆತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.