ಕೊಬ್ಬರಿಗೆ 20 ಸಾವಿರ ರೂ. ಬೆಂಬಲ ನೀಡಿ

Team Udayavani, Mar 15, 2023, 5:10 AM IST

ಕೊಬ್ಬರಿಗೆ 20 ಸಾವಿರ ರೂ. ಬೆಂಬಲ ನೀಡಿ

ಸಿ.ಬಿ.ಶಶಿಧರ್‌, ತೆಂಗು ಬೆಳೆಗಾರರ ಸಂಘದ ಗೌರವಾಧ್ಯಕ್ಷ
ಕಲ್ಪತರು ನಾಡಿನ ರೈತರ ಜೀವನಾಧಾರ ಹಾಗೂ ಪ್ರಮುಖ ವಾಣಿಜ್ಯ ಬೆಳೆ ತೆಂಗು. ಇದರ ಪ್ರಮುಖ ಉತ್ಪನ್ನ ಒಣ ಕೊಬ್ಬರಿ. ಇದರ ಬೆಲೆ ಕಳೆದ ವರ್ಷ ಮಾರುಕಟ್ಟೆಯಲ್ಲಿ ಕ್ವಿಂಟಾಲ್‌ಗೆ 18 ಸಾವಿರ ರೂ. ಇತ್ತು. ಪ್ರಸ್ತುತ ತಿಪಟೂರಿನ ಪ್ರಸಿದ್ಧ ಕೊಬ್ಬರಿ ಮಾರುಕಟ್ಟೆಯಲ್ಲಿಹಾಲಿ 9 ಸಾವಿರ ರೂ. ಆಸುಪಾಸಿಗೆ ಕುಸಿದಿದೆ.

ಕೊಬ್ಬರಿ ಬೆಲೆ ತೀವ್ರ ಕುಸಿತವಾಗಿರುವುದರ ವಿರುದ್ಧ ತಿಪಟೂರಿನಲ್ಲಿ ತೆಂಗು ಬೆಳೆಗಾರರ ಪರ ರೈತ, ವಿವಿಧ ಸಂಘಟನೆಗಳು ನಿರಂತ ರವಾಗಿ ಹೋರಾಟ ನಡೆಸುತ್ತಿವೆ. ಆದರೂ ಕೇಂದ್ರ ಹಾಗೂ ರಾಜ್ಯ ಸರಕಾರ ಯಾವುದೇ ಸ್ಪಂದನೆ ನೀಡಿಲ್ಲ. ಇದೇ ರೀತಿ ವಿವಿಧ ಪಕ್ಷಗಳೂ ಕೊಬ್ಬರಿ ಬೆಂಬಲ ಬೆಲೆ ಬಗ್ಗೆ ಹಾಗೂ ಧಾರಣೆ ಬಗ್ಗೆ ಯಾವ ನಿಲುವನ್ನೂ ಹೊಂದಿಲ್ಲ. ಪಕ್ಷಗಳ ಚುನಾವಣ ಪ್ರಣಾಳಿಕೆ ಗಳಲ್ಲಿ ತೆಂಗು ಬೆಳೆಗಾರರ ಬಗ್ಗೆ ಏನೂ ಹೇಳಿಲ್ಲ.

ರೈತಪರವಾಗಿ ಮಾತನಾಡುವ ಸರಕಾರ ರೈತರ ತುಟಿಗೆ ತುಪ್ಪ ಸವರುವ ಕೆಲಸ ಮಾಡುತ್ತಿರುವುದು ಬಿಟ್ಟರೆ, ರೈತರಿಗೆ ಯಾವ ಅನುಕೂಲವೂ ಆಗುತ್ತಿಲ್ಲ. ತೆಂಗಿನ ಮರ ಗಳಿಗೆ ಅಣಬೆ ರೋಗ, ರಸ ಸೋರುವುದು, ನುಸಿ ಹೀಗೆ ಹಲವು ರೋಗಗಳು ಬರುತ್ತಿವೆ. ತೆಂಗನ್ನೇ ನಂಬಿ ಜೀವನ ನಡೆಸುತ್ತಿರುವ ರೈತನ ಸ್ಥಿತಿ ಶೋಚನೀಯವಾಗಿದೆ.

ಒಂದು ತೆಂಗಿನ ಮರ ಬೆಳೆಸಲು ಹತ್ತು ವರ್ಷ ಬೇಕು. ಅದರ ಪಾಲನೆ ಪೋಷಣೆಗಾಗಿ 10 ಸಾವಿರ ರೂ.ಗಳಿಗೂ ಹೆಚ್ಚು ಖರ್ಚು ಬರುತ್ತದೆ. ಇನ್ನೇನು ಫ‌ಸಲು ಬಂತು ಎನ್ನುವಾಗ ರೋಗಗಳು ಬಂದು ತೆಂಗಿನ ಮರಗಳು ನಾಶವಾಗುತ್ತಿವೆ. ದೇಶಕ್ಕೆ ಅನ್ನ ಕೊಡುವ ಹಾಗೂ ತೆರಿಗೆ ಕಟ್ಟುವ ರೈತನ ಬಗ್ಗೆ ಸರಕಾರ ಉದಾಸೀನತೆ ತೋರುತ್ತಿದೆ. ಈ ಬಾರಿಯ ಪ್ರಣಾಳಿಕೆಗಳಲ್ಲಿ ರಾಜಕೀಯ ಪಕ್ಷಗಳು ತೆಂಗು ಬೆಳೆಗಾರರ ಬಗ್ಗೆ ಪ್ರಸ್ತಾವಿಸಲಿ.

ಪ್ರಮುಖ ಹಕ್ಕೊತ್ತಾಯಗಳು
ಒಂದು ಕ್ವಿಂಟಾಲ್‌ ಕೊಬ್ಬರಿ ಬೆಳೆಯಲು 16,000ರೂ.ಕ್ಕೂ ಹೆಚ್ಚು ಖರ್ಚು ಬರುತ್ತಿದೆ. ತೆಂಗು ಬೆಳೆಗಾರರಿಗೆ ವೈಜ್ಞಾನಿಕ ಬೆಂಬಲ ಬೆಲೆ ನಿಗದಿಮಾಡಬೇಕು ಎಂದು ನೀಡಿರುವ ವರದಿ ಜಾರಿಗೆ ತರಬೇಕು.  ತೆಂಗಿನ ಕಾಯಿಗಳಿಂದ ಉತ್ತಮ ಗುಣಮಟ್ಟದ ಕೊಬ್ಬರಿ ತಯಾರಿ ಆಗಿರುವ ಬಗ್ಗೆ ತೋಟಗಾರಿಕ ವಿಜಾnನಿಗಳಿಂದ ಉತ್ತಮ ತರಬೇತಿ, ಪೋ›ತ್ಸಾಹ ನೀಡಬೇಕು.  ಕೊಬ್ಬರಿ ಬೆಲೆ ಯಾವಾಗಲೂ ಸಾಕಷ್ಟು ಏರಿಳಿತ ಇರುವುದರಿಂದ ಲಾಭದಾಯಕ ಬೆಂಬಲ ಬೆಲೆ ನೀಡಿ ಎಪಿಎಂಸಿ ಮಾರುಕಟ್ಟೆಗಳಲ್ಲಿ ಸರಕಾರ ನಫೆಡ್‌ ಖರೀದಿ ಕೇಂದ್ರಗಳನ್ನು ಸದಾಕಾಲ ತೆರೆದು ಬೆಂಬಲ ಬೆಲೆ ಹಾಗೂ ಪೋ›ತ್ಸಾಹ ಬೆಲೆ ನೀಡಿ ಕೊಬ್ಬರಿ ಖರೀದಿಸಬೇಕು.  ತೆಂಗಿನ ಕಾಯಿ ಹಾಗೂ ಕೊಬ್ಬರಿಯಿಂದ ಹೆಚ್ಚು ಉಪ ಉತ್ಪನ್ನಗಳನ್ನು ಯುವ ರೈತರು ತಯಾರಿಸಲು ತರಬೇತಿ, ಮಾರುಕಟ್ಟೆ ಒದಗಿಸಲು ಸರಕಾರ ಮುಂದಾಗಬೇಕು.  ಎಳನೀರನ್ನು ವಿವಿಧ ತಂಪು ಪಾನೀಯಗಳ ರೀತಿ ಮಾರಾಟ ಮಾಡುವಂತಹ ತಾಂತ್ರಿಕತೆ ಒದಗಿಸುವ ಕೆಲಸವನ್ನು ತೋಟಗಾರಿಕೆ ಮೂಲಕ ಒದಗಿಸುವ ಬಗ್ಗೆ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಸೇರಿಸಿ ಜಾರಿಗೆ ತರಬೇಕು.  ಕೊಬ್ಬರಿ ಎಣ್ಣೆ ಆರೋಗ್ಯಕ್ಕೆ ಹೆಚ್ಚು ಅನುಕೂಲ­ವಿರುವುದರಿಂದ ಸರಕಾರ ಎಲ್ಲೆಡೆ ಕೊಬ್ಬರಿ ಎಣ್ಣೆ ಬಳಸಲು ಹೆಚ್ಚು ಜಾಗೃತಿ, ಮಾರುಕಟ್ಟೆ ಒದಗಿಸಿ ತೆಂಗು ಬೆಳೆಗಾರರ ನೆರವಿಗೆ ನಿಲ್ಲಬೇಕು.

ಟಾಪ್ ನ್ಯೂಸ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Test Cricket; After Rohit, now Virat..: What is in ‘that’ message sent by BCCI?

Test Cricket; ರೋಹಿತ್‌ ಆಯ್ತು, ಈಗ ವಿರಾಟ್..:‌ ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?

Gangolli: ಪಂಚಾಯತ್‌ನೊಳಗೆ ನಮಾಜ್‌; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ

Gangolli: ಪಂಚಾಯತ್‌ನೊಳಗೆ ನಮಾಜ್‌; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ

Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ

Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ

ನಾನು ಶೀಶಮಹಲ್‌ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್

ನಾನು ಶೀಶಮಹಲ್‌ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್

11-venur

Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ

9

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!

ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!

dk shivakumar

CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್

dk shivakumar siddaramaiah rahul gandhi

ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!

Ramanath-rai

ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ

1-wwe

ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್‌ ಕಾರಣವೇ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಗದಗ: ಮಾವು ಬಂಪರ್‌ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ

ಗದಗ: ಮಾವು ಬಂಪರ್‌ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Test Cricket; After Rohit, now Virat..: What is in ‘that’ message sent by BCCI?

Test Cricket; ರೋಹಿತ್‌ ಆಯ್ತು, ಈಗ ವಿರಾಟ್..:‌ ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?

Gangolli: ಪಂಚಾಯತ್‌ನೊಳಗೆ ನಮಾಜ್‌; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ

Gangolli: ಪಂಚಾಯತ್‌ನೊಳಗೆ ನಮಾಜ್‌; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ

Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ

Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.