Kundapura 20 ವರ್ಷ ಹಳೆಯ ಚಿನ್ನದ ವಿವಾದ: ಆರೋಪ, ಪ್ರತ್ಯಾರೋಪ; ದೂರು, ಪ್ರತಿದೂರು
Team Udayavani, Aug 22, 2024, 1:14 AM IST
ಕುಂದಾಪುರ: 20 ವರ್ಷಗಳ ಹಿಂದೆ ಅಂತ್ಯಕ್ರಿಯೆ ಸಲುವಾಗಿ ಚಿನ್ನದ ಸರವೊಂದನ್ನು ಅಡವಿಡಲಾಗಿದೆ ಎಂಬ ವಿಚಾರದಲ್ಲಿ ವಾದ ವಿವಾದ ಆರೋಪ ಪ್ರತ್ಯಾರೋಪ ನಡೆದು ಹಲ್ಲೆ ಹಂತದವೆರೆಗೆ ತಲುಪಿ ಎರಡೂ ಕಡೆಯಿಂದ ಪ್ರಕರಣ ದಾಖಲಾಗಿದೆ.
ಗುಲ್ವಾಡಿ ಗ್ರಾಮದ ಮಣಿಕಂಠ (30) ಅವರ ದೂರಿಕೊಂಡಂತೆ ತಾಯಿ ಜ್ಯೋತಿ ಅವರು 20 ವರ್ಷಗಳ ಹಿಂದೆ ಮೃತರಾಗಿದ್ದು, ಅವರ ಅಂತ್ಯಕ್ರಿಯೆಯನ್ನು ಮಕ್ಕಳು ನಡೆಸಿದ್ದರು. ತಂದೆಗೆ ಕುಡಿತದ ಚಟವಿರುವುದರಿಂದ ಜ್ಯೋತಿ ಅವರ 2 ಪವನ್ ತೂಕದ ಚಿನ್ನದ ಕರಿಮಣಿ ಸರವನ್ನು ದೊಡ್ಡಮ್ಮ ಗಿರಿಜಾ ಅವರಲ್ಲಿ ಇಟ್ಟು ಕೊಳ್ಳಲು ಕೊಟ್ಟಿದ್ದು , ಗಿರಿಜಾ ಸಾಲ ಪಡೆಯುವ ಉದ್ದೇಶದಿಂದ ಸೊಸೈಟಿಯಲ್ಲಿ ಅಡವಿಟ್ಟಿದ್ದು ಇದುವರೆಗೂ ಬಿಡಿಸಿ ಕೊಟ್ಟಿಲ್ಲ. 6 ತಿಂಗಳ ಒಳಗಾಗಿ ಬಿಡಿಸಿ ಕೊಡುವುದಾಗಿ ತಿಳಿಸಿದ್ದು, ಚಿಕ್ಕಮ್ಮನ ಮಗ ಅಭಿಷೇಕನ ಮನೆಗೆ ತನ್ನ ತಮ್ಮ ಸುಬ್ರಹ್ಮಣ್ಯನ ಜತೆ ಹೋದಾಗ ರಘು, ಅಭಿಷೇಕ್, ಸಾಧು ಹಾಗೂ ಕನಕ ಅವರು ಹಲ್ಲೆ ನಡೆಸಿ ಬೈದಿದ್ದಾರೆ ಎಂದು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದೇ ಪ್ರಕರಣ ಸಂಬಂಧ ಗುಲ್ವಾಡಿ ಗ್ರಾಮದ ಕನಕ (47) ದೂರು ನೀಡಿದ್ದು ಅಕ್ಕ ಜ್ಯೋತಿ ಅವರ ಅಂತ್ಯಕ್ರಿಯೆಗೆ ಹಣವಿಲ್ಲದಿದ್ದಾಗ ಹಿರಿಯ ಅಕ್ಕ ಗಿರಿಜಾ 1 ಪವನ್ ಚಿನ್ನದ ಸರ ಮಾರಾಟ ಮಾಡಿ ಜ್ಯೋತಿ ಅವರ ಅಂತ್ಯಕ್ರಿಯೆ ಮಾಡಿದ್ದಾರೆ.
ಜ್ಯೋತಿ ಅವರ ಮಕ್ಕಳಾದ ಮಣಿಕಂಠ ಮತ್ತು ಸುಬ್ರಹ್ಮಣ್ಯ ತಾಯಿಯ ಸರವನ್ನು ದೊಡ್ಡಮ್ಮನಾದ ಗಿರಿಜಾ ಅವರಿಂದ ವಾಪಾಸು ತೆಗೆಸಿಕೊಡುವಂತೆ ತನ್ನಲ್ಲಿ ಕೇಳಿದಾಗ ಅದಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂದಾಗ ಆರೋಪಿತರಾದ ಮಣಿಕಂಠ, ಸುಬ್ರಹ್ಮಣ್ಯ, ನಾಗೇಶ್ ಮತ್ತು ಮಹೇಂದ್ರ ಅವರು ತಮ್ಮ ಮಗ ಅಭಿಷೇಕನಿಗೆ, ತಂಗಿ ಸಾಧು ಅವರಿಗೆ ಹಲ್ಲೆ ನಡೆಸಿದ್ದಾಗಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.