Finance: 2,000 ರೂ.ನೋಟು ಶೇ.97ರಷ್ಟು ವಾಪಸ್
Team Udayavani, Nov 2, 2023, 12:49 AM IST
ಮುಂಬಯಿ: 2,000 ಮುಖಬೆಲೆಯ ನೋಟುಗಳ ಪೈಕಿ ಶೇ.97ರಷ್ಟು ನೋಟುಗಳು ಈಗಾಗಲೇ ಬ್ಯಾಂಕ್ಗಳಿಗೆ ಜಮೆಯಾಗಿದ್ದು, ಉಳಿದಂತೆ 10,000 ಕೋಟಿ ರೂ.ಮೌಲ್ಯದ ನೋಟುಗಳು ಮಾತ್ರ ಇನ್ನೂ ಸಾರ್ವಜನಿಕರ ಬಳಿ ಇದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ)ತಿಳಿಸಿದೆ.
ಮೇ19ರಂದು 2,000 ಮುಖಬೆಲೆಯ ನೋಟುಗಳ ಚಲಾವಣೆಯನ್ನು ಹಿಂಪಡೆಯುವುದಾಗಿ ಆರ್ಬಿಐ ಘೋಷಿಸಿದ ಸಂದರ್ಭದಲ್ಲಿ ಚಲಾವಣೆಯಲ್ಲಿದ್ದ 2,000 ಮುಖಬೆಲೆಯ ನೋಟುಗಳ ಮೌಲ್ಯ 3.56 ಲಕ್ಷ ಕೋಟಿ ರೂ.ಗಳಾಗಿತ್ತು. ಅಂದಿನಿಂದ ಅ.31ರ ವರೆಗೆ ಒಟ್ಟು ಶೇ.97ರಷ್ಟು ನೋಟುಗಳನ್ನು ಹಿಂಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾರ್ವಜನಿಕರಿಗೆ ನೋಟುಗಳನ್ನು ಹಿಂದಿರುಗಿಸಲು ಆರ್ಬಿಐ ಈ ಹಿಂದೆಯೂ ಹಲವು ಬಾರಿ ಗಡುವು ನೀಡಿತ್ತು. ಆದಾಗ್ಯೂ, ಇನ್ನೂ ಶೇ.3ರಷ್ಟು ನೋಟುಗಳು ಹಿಂದಿರುಗುವುದು ಬಾಕಿ ಉಳಿದಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.