Tomato: 21 ಲಕ್ಷ ರೂ. ಮೌಲ್ಯದ ಟೊಮಾಟೊ ತುಂಬಿದ್ದ ಲಾರಿ ನಾಪತ್ತೆ
Team Udayavani, Jul 30, 2023, 8:04 PM IST
ಕೋಲಾರ: ನಗರದ ಎಪಿಎಂಸಿ ಮಾರುಕಟ್ಟೆಯಿಂದ ಸುಮಾರು 21 ಲಕ್ಷ ರೂ. ಮೌಲ್ಯದ ಟೊಮಾಟೊ ತುಂಬಿದ್ದ ಲಾರಿ ವರ್ತಕರ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದು, ಈ ಸಂಬಂಧ ಎಪಿಎಂಸಿ ಮಾರುಕಟ್ಟೆಯ ವರ್ತಕರು ಕೋಲಾರ ನಗರ ಪೊಲೀಸ್ ಠಾಣೆಗೆ ದೂರು ನೀಡಿರುವ ಘಟನೆ ಬೆಳಕಿಗೆ ಬಂದಿದೆ.
ಕೋಲಾರ ಎಪಿಎಂಸಿ ಮಾರುಕಟ್ಟೆಯ ಎಜಿ ಟ್ರೇಡರ್ಸ್‌ನ ಸಕ್ಲೇನ್ ಹಾಗೂ ಎಸ್.ವಿ.ಟಿ ಟ್ರೇಡರ್ಸ್‌ನ ಮುನಿರೆಡ್ಡಿ ಎಂಬುವರು ಸುಮಾರು 21 ಲಕ್ಷ ರೂ. ಮೌಲ್ಯದ ಸುಮಾರು 750 ಕ್ರೇಟ್ ಟೊಮಾಟೊವನ್ನು ಜುಲೈ27ರಂದು ರಾಜಾಸ್ಥಾನದ ಜೈಪುರ್‌ಗೆ ಮೆಹತ್ ಟ್ರಾನ್ಸ್‌ಪೊàರ್ಟ್‌ಗೆ ಸೇರಿದ ಲಾರಿಯ ಮೂಲಕ ಕಳಿಸಿದ್ದರು.
ಆದರೆ ಶನಿವಾರ ರಾತ್ರಿಯಿಂದಲೂ ಲಾರಿ ಹಾಗೂ ಲಾರಿ ಚಾಲಕ ಇಬ್ಬರೂ ಸಂಪರ್ಕಕ್ಕೆ ಸಿಗುತ್ತಿಲ್ಲ, ಇನ್ನು ಮೆಹತ್ ಟ್ರಾನ್ಸ್‌ಪೊರ್ಟ್ ಮಾಲೀಕ ಸಾದಿಕ್ ಅವರಿಗೂ ಕೂಡಾ ಲಾರಿ ಸಂಪರ್ಕಕ್ಕೆ ಸಿಗುತ್ತಿಲ್ಲವಂತೆ ಲಾರಿ ನಾಪತ್ತೆಯಾಗಿರುವ ಕುರಿತು ಇದೀಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೋಲಾರ ಎಪಿಎಂಸಿ ಮಾರುಕಟ್ಟೆ ಏಷ್ಯಾದಲ್ಲೇ ಎರಡನೇ ಅತಿದೊಡ್ಡ ಮಾರುಕಟ್ಟೆ ಎಂಬ ಹೆಗ್ಗಳಿಗೆ ಹೊಂದಿರುವ ಮಾರುಕಟ್ಟೆ ಇಲ್ಲಿಂದ ದೇಶದ ಹಲವು ರಾಜ್ಯಗಳಿಗೆ ಟೊಮೇಟೋ ರಫ್ತು ಮಾಡಲಾಗುತ್ತದೆ. ಅದರಲ್ಲೂ ಈಗಂತೂ ಟೊಮೇಟೋ ಗೆ ಚಿನ್ನದ ಬೆಲೆ ಇದೆ ಅದಕ್ಕಾಗಿಯೇ ಕೋಲಾರದ ಎಪಿಎಂಸಿ ಮಾರುಕಟ್ಟೆಗೂ ಈಗಾಗಲೇ ಹೆಚ್ಚಿನ ಪೊಲೀಸ್ ಭದ್ರತೆ ಮಾಡಿದ್ದಾರೆ, ಮಂಡಿ ಮಾಲೀಕರು ಖಾಸಗಿ ಭದ್ರತೆ ಜೊತೆಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡಿಕೊಂಡಿದ್ದಾರೆ.
ಇಷ್ಟೆಲ್ಲಾ ಭದ್ರತೆ ಇಲ್ಲಿ ಮಾಡಿಕೊಂಡಿದ್ದು ನಂಬಿಕೆ ಮೇಲೆ ಕೋಲಾರದ ಎಪಿಎಂಸಿ ಮಾರುಕಟ್ಟೆಯಿಂದ ರಾಜಾಸ್ಥಾನದ ಜೈಪುರ್‌ಗೆ ಎಂಟು ಚಕ್ರದ ಲಾರಿ ಸಂಖ್ಯೆ ಆರ್‌ಜೆ¬04- ಜಿಸಿ¬3756 ಲಾರಿಯಲ್ಲಿ ಡ್ರೈವರ್ ಅನ್ವರ್ ಎಂಬುವರೊಂದಿಗೆ ಕೋಲಾರ ನಗರದ ಮೆಹತ್ ಟ್ರಾನ್ಸ್‌ಪೊರ್ಟ್ ಮುಖಾಂತರ ಕಳಿಸಲಾಗಿತ್ತು,ಕಳೆದ ರಾತ್ರಿ ಅಲ್ಲಿಗೆ ಟೊಮೇಟೋ ತಲುಪಬೇಕಿತ್ತು ಆದರೆ ನಿನ್ನೆ ಮದ್ಯಾಹ್ನದ ವರೆಗೂ ಸಂಪರ್ಕದಲ್ಲಿದ್ದ ಲಾರಿ ಡ್ರೈವರ್ ಅನ್ವರ್ ರಾತ್ರಿಯಿಂದೀಚೆಗೆ ಸಂಪರ್ಕಕ್ಕೆ ಸಿಗುತ್ತಿಲ್ಲ,
ಲಾರಿ ಇನ್ನು ಅಪಘಾತವಾಗಿದ್ದರೆ ಅಥವಾ ಬೇರೆ ಏನಾದ್ರೂ ಸಮಸ್ಯೆ ಆಗಿದ್ದರೆ ನಮಗೆ ಮಾಹಿತಿ ಬರುತ್ತಿತ್ತು, ಆದರೆ ಇಲ್ಲಿ ಲಾರಿ ಚಾಲಕ ಟೊಮೇಟೋ ಕಳ್ಳತನ ಮಾಡಿರುವ ಅನುಮಾನವಿದೆ ಅನ್ನೋದು ವ್ಯಾಪಾರಸ್ಥರ ಮಾತು.
ಅಲ್ಲದೆ ಟೊಮೇಟೋ ಹೆಚ್ಚು ದಿನ ಇರೋದಿಲ್ಲ ಕೊಳೆತು ಹೋಗುವ ಸಾಧ್ಯತೆ ಹಾಗಾಗಿ ಸಮಯಕ್ಕೆ ಸರಿಯಾಗಿ ವ್ಯಾಪಾರಸ್ಥರಿಗೆ ತಲುಪಿಸುವುದು ನಮ್ಮ ಜವಾಬ್ದಾರಿ ಹಾಗೊಂದು ವೇಳೆ ಟೊಮೇಟೋ ತಲುಪದಿದ್ದರೆ ರೈತರಿಗೆ ನಾವು ನಮ್ಮ ಕೈಯಾರೆ ಹಣ ಕೊಡಬೇಕಾಗುತ್ತದೆ ಎಂದು ವ್ಯಾಪಾರಿ ಮುನಿರೆಡ್ಡಿ ಆತಂಕ ವ್ಯಕ್ತಪಡಿಸಿದ್ದಾರೆ.
ಎಸ್ಕಾರ್ಟ್ ಕಳಿಸಬೇಕಾಗಬಹುದು-ಶ್ರೀನಾಥ್
ಈ ಕುರಿತು ಟೊಮೇಟೋ ಮಂಡಿ ಮಾಲೀಕ ಸಿಎಂಆರ್ ಶ್ರೀನಾಥ್ ಮಾಹಿತಿ ನೀಡಿ, ಒಟ್ಟಾರೆ ಟೊಮೇಟೋ ಚಿನ್ನದ ಬೆಲೆ ಬಂದಿದೆ, ದೇಶ ವಿದೇಶಗಳಲ್ಲೂ ಟೊಮೇಟೋ ಹೆಚ್ಚಿನ ಬೇಡಿಕೆ ಇದೆ ಹಾಗಾಗಿ ಟೊಮೇಟೋ ವನ್ನು ಮಾರಾಟ ಮಾಡೋದು ಕಷ್ಟದ ಕೆಲಸವಲ್ಲ ಹಾಗಾಗಿಯೇ ಕೋಲಾರದಿಂದ ರಾಜಾಸ್ಥಾನಕ್ಕೆ ತಲುಪಬೇಕಿದ್ದ ಟೊಮೇಟೋ ಕೂಡಾ ಕಳ್ಳತನದಿಂದ ಮಾರಾಟ ಮಾಡಿರುವ ಸಾಧ್ಯತೆ ಇದೆ, ಸದ್ಯ ಇನ್ನು ಇದೇ ರೀತಿ ಟೊಮೇಟೋ ಬೆಲೆ ಮುಂದುವರಿದಿದ್ದೇ ಆದರೆ ಎಸ್ಕಾರ್ಟ್ ಮೂಲಕ ಟೊಮೇಟೋ ಕಳಿಸಬೇಕಾದ ಸ್ಥಿತಿ ಬಂದರೂ ಆಶ್ಚರ್ಯ ಪಡಬೇಕಾಗಿಲ್ಲ ಎಂದರು.
ಕಳ್ಳನೊಬ್ಬ ಟೊಮೇಟೋ ತುಂಬಿದ್ದ ಬಾಕ್ಸ್ ಒಂದನ್ನು ಕಳ್ಳತನ ಮಾಡಿದ್ದ ಘಟನೆ ನಡೆದಿತ್ತು, ಈ ಘಟನೆ ಮಾಸುವ ಮೊದಲೇ 21 ಲಕ್ಷ ಮೌಲ್ಯದ ಟೊಮೇಟೋ ಲಾರಿಯೇ ನಾಪತ್ತೆಯಾಗಿರುವುದು ವ್ಯಾಪಾರಿಗಳ ಆತಂಕಕ್ಕೆ ಕಾರಣವಾಗಿದೆ.
ಲಾರಿಯಲ್ಲಿ ಸರಾಸರಿ 21 ಲಕ್ಷ ಮೌಲ್ಯದ ಟೊಮ್ಯಾಟೋ ಇತ್ತು ಆದರೆ ಇಲ್ಲಿ ಟೊಮೇಟೋ ನಿಜಕ್ಕೂ ಕಳ್ಳತನವಾಗಿರುವ ಸಾಧ್ಯತೆ ಇದ್ದು ಕೂಡಲೇ ನಮಗೆ ಪೊಲೀಸರು ತನಿಖೆ ನಡೆಸಿ ನ್ಯಾಯ ಕೊಡಿಸಬೇಕು ಅನ್ನೋದು ಟೊಮ್ಯಾಟೋ ಕಳೆದುಕೊಂಡಿರುವ ವ್ಯಾಪಾರಸ್ಥರ ಮನವಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.