India-Pak: ತಾಪಮಾನದಿಂದ ಭಾರತ-ಪಾಕ್ನ 220 ಕೋಟಿ ಮಂದಿಗೆ ಅಪಾಯ
Team Udayavani, Oct 10, 2023, 9:38 PM IST
ನವದೆಹಲಿ: ಹಾಲಿ ಶತಮಾನದ ಅಂತ್ಯದ ವೇಳೆಗೆ ಜಗತ್ತಿನ ತಾಪಮಾನದಲ್ಲಿ 1.5 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚು ಏರಿಕೆಯಾದರೆ, ಅದು ಜನರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ವಿಶೇಷವಾಗಿ ಭಾರತ ಮತ್ತು ಪಾಕಿಸ್ತಾನದ 220 ಕೋಟಿ ಮಂದಿ ಅಪಾಯಕ್ಕೆ ಸಿಲುಕಲಿದ್ದು, ಬಿಸಿಲ ಝಳದಿಂದ ಸಾವು ಅಥವಾ ಹೃದಯಾಘಾತದಿಂದ ಅಸುನೀಗುವ ಪ್ರಮಾಣ ಹೆಚ್ಚಾಗಬಹುದು.
ಪೆನ್ ಸ್ಟೇಟ್ ಕಾಲೇಜ್ ಆಫ್ ಹೆಲ್ತ್ ಆ್ಯಂಡ್ ಹ್ಯೂಮನ್ ಡೆವಲಪ್ಮೆಂಟ್, ಪರ್ಡ್ಯೂ ಯುನಿವರ್ಸಿಟಿ ಕಾಲೇಜ್ ಆಫ್ ಸೈನ್ಸಸ್, ಪರ್ಡ್ಯೂ ಇನ್ಸ್ಟಿಟ್ಯೂಟ್ ಆಫ್ ಸಸ್ಟೈನೆಬಲ್ ಫ್ಯೂಚರ್ ನಡೆಸಿದ ಅಧ್ಯಯನವು ಈ ಆಘಾತಕಾರಿ ಮಾಹಿತಿ ಹೊರಹಾಕಿದೆ. ತಾಪಮಾನ ಏರಿಕೆಯ ದುಷ್ಪರಿಣಾಮಗಳನ್ನು ತಡೆಯಲು ಮಾನವನ ದೇಹ ಹೊಂದಿರುವ ಸಾಮರ್ಥ್ಯ ಸೀಮಿತ ಪ್ರಮಾಣದ್ದಷ್ಟೇ ಎಂದೂ ವರದಿ ಹೇಳಿದೆ.
ಆ ಮಿತಿಗಿಂತ ಹೆಚ್ಚಾದರೆ ಜೀವ ಅಥವಾ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವ ಅಪಾಯವಿದೆ. ಮೂರು ಸಂಸ್ಥೆಗಳ ಅಧ್ಯಯನದ ಪ್ರಕಾರ ಜಗತ್ತಿನ ತಾಪಮಾನ ಕೈಗಾರಿಕೀರಣದ ದಿನಗಳಿಂತ ಮೊದಲು ಇದ್ದ ಮಟ್ಟಕ್ಕೆ ಇದ್ದಂತೆ 2 ಡಿಗ್ರಿ ಸೆಲ್ಸಿಯಸ್ಗೆ ಏರಿಕೆಯಾದರೆ ಚೀನಾದ ಪೂರ್ವ ಭಾಗದಲ್ಲಿರುವ 100 ಕೋಟಿ, ಸಬ್-ಸಹರನ್ ಆಫ್ರಿಕಾದಲ್ಲಿರುವ 80 ಕೋಟಿ ಮಂದಿಗೆ ಅಪಾಯ ಉಂಟಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.