![Udupi ಕ್ಷೇತ್ರದ ಯೋಜನೆಗಳಿಗೆ ವಿಶೇಷ ಅನುದಾನಕ್ಕೆ ಸಿಎಂಗೆ ಯಶ್‌ಪಾಲ್ ಸುವರ್ಣ ಮನವಿ](https://www.udayavani.com/wp-content/uploads/2025/02/mla-415x304.jpg)
![Udupi ಕ್ಷೇತ್ರದ ಯೋಜನೆಗಳಿಗೆ ವಿಶೇಷ ಅನುದಾನಕ್ಕೆ ಸಿಎಂಗೆ ಯಶ್‌ಪಾಲ್ ಸುವರ್ಣ ಮನವಿ](https://www.udayavani.com/wp-content/uploads/2025/02/mla-415x304.jpg)
Team Udayavani, May 19, 2020, 4:49 AM IST
ಕನ್ನಡದಲ್ಲಿ ಈಗ ಸಾಕಷ್ಟು ರೌಡಿಸಂ ಸಿನಿಮಾಗಳು ಬರುತ್ತಿವೆ. ಪ್ರತಿಯೊಬ್ಬ ನಿರ್ದೇಶಕನೂ ಹೊಸದಾಗಿ ಏನಾದರೂ ಕಟ್ಟಿಕೊಡಬೇಕೆಂದು ಪ್ರಯತ್ನಿಸುತ್ತಾನೆ. ಆದರೆ 25 ವರ್ಷಗಳ ಹಿಂದೆ ನಿಜಕ್ಕೂ ಹೊಸದು, ವಿಭಿನ್ನ ಎಂಬಂತೆ ಪ್ರೇಕ್ಷಕರ ಮುಂದೆ ಬಂದ ಚಿತ್ರ ಓಂ. ಉಪೇಂದ್ರ ನಿರ್ದೇಶನದಲ್ಲಿ ಶಿವರಾಜ್‌ಕುಮಾರ್ ನಾಯಕರಾಗಿ ನಟಿಸಿದ ಈ ಸಿನಿಮಾ ಹೊಸ ಮೈಲಿಗಲ್ಲನ್ನು ಸೃಷ್ಟಿಸಿದ್ದಂತು ಸುಳ್ಳಲ್ಲ.
ಪ್ರೀತಿ ಹಾಗೂ ರೌಡಿಸಂ ಅನ್ನು ಹಿನ್ನೆಲೆಯಾಗಿಟ್ಟುಕೊಂಡು ಈಂ ಸಿನಿಮಾವನ್ನು ಉಪೇಂದ್ರ ಅದ್ಬೂತವಾಗಿ ಕಟ್ಟಿಕೊಟ್ಟಿದ್ದರು. ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದಲ್ಲದೇ, ಎವರ್ಗ್ರೀನ್ ಸಿನಿಮಾ ಎನಿಸಿಕೊಂಡಿತು. ಈ ಗ ಯಾಕೆ ಓಂ ಚಿತ್ರದ ಮಾತು ಎಂದು ನೀವು ಕೇಳಬಹುದು. ಅದಕ್ಕೆ ಕಾರಣ ಈ ಸಿನಿಮಾ ಈ 25ರ ಹೊಸ್ತಿಲಿನಲ್ಲಿದೆ. ಹೌದು, ಓಂ ಚಿತ್ರ ಬಿಡುಗಡೆಯಾಗಿ ಇಂದಿಗೆ 25 ವರ್ಷ. 1995 ಮೇ 19ರಂದು ಚಿತ್ರ ತೆರೆಕಂಡಿತ್ತು.
ಇದನ್ನು ಸಂಭ್ರಮಿಸಲು ಅಭಿಮಾನಿಗಳು ಸಜ್ಜಾಗಿದ್ದಾ ರೆ. ಹಾಗಂತ ಯಾವುದೇ ಕಾರ್ಯಕ್ರಮ ಮಾಡಿಯಲ್ಲ. ಬದಲಾಗಿ ಸೋಶಿಯಲ್ ಮೀಡಿಯಾದಲ್ಲಿ ಆ ಚಿತ್ರ¨ ಪೋಸ್ಟರ್ ಹಾಗೂ ಚಿತ್ರದ ಕುರಿತಾದ ಬರಹಗಳ ಮೂಲಕ ಸಂಭ್ರಮಿಸುತ್ತಿದ್ದಾ ರೆ. ಓಂ ಚಿತ್ರ ಕನ್ನಡ ಚಿತ್ರರಂಗದಲ್ಲಿನ ರೌಡಿಸಂ ಸಿನಿಮಾಗಳಿಗೆ ಹೊಸ ಭಾಷ್ಯ ಬರೆದ ಚಿತ್ರವೆಂದರೆ ತಪ್ಪಲ್ಲ. ಇಡೀ ಸಿನಿಮಾವನ್ನು ಕಟ್ಟಿಕೊಟ್ಟ ರೀತಿ ಬಗ್ಗೆ ಮೆಚ್ಚುಗೆ ವ್ಯಕ್ತವಾಗುವ ಜೊತೆಗೆ ಮಾಸ್ ಪ್ರಿಯರನ್ನು ಸೆಳೆದ ಚಿತ್ರವಿದು.
ಮೊದಲೇ ಹೇಳಿದಂತೆ ಇದು ರೌಡಿಸಂ ಹಿನ್ನೆಲೆಯ ಚಿತ್ರವಾದ್ದರಿಂದ ಆಗಿನ ಕಾಲದ ರಿಯಲ್ ರೌಡಿಗಳನ್ನು ಕೂಡಾ ಇಲ್ಲಿ ಬಳಸಿಕೊಳ್ಳಲಾಗಿತ್ತು. ಚಿತ್ರದಲ್ಲಿ ಪ್ರೇಮ ನಾಯಕಿಯಾಗಿ ನಟಿಸಿದ್ದಾ ರೆ. ಈ ಚಿತ್ರವನ್ನು ವಜ್ರೆàಶ್ವರಿ ಸಂಸ್ಥೆ ನಿರ್ಮಿಸಿದೆ. ಆ ಚಿತ್ರದ ಬಳಿಕ ಉಪೇಂದ್ರ ಹಾಗೂ ಶಿವರಾಜಕುಮಾರ್ ಜೊತೆಯಾಗಿ ಅಂದರೆ ಉಪೇಂದ್ರ ನಿರ್ದೇಶನ ದಲ್ಲಿ ಶಿವಣ್ಣ ಸಿನಿಮಾ ಮಾಡಬೇಕೆಂದು ಅಭಿಮಾನಿಗಳು ಒತ್ತಾಯಿಸುತ್ತಲೇ ಬರುತ್ತಿದ್ದಾ ರೆ. ಅದು ಇನ್ನೂ ಈಡೇರಿಲ್ಲ. ಓಂ ಸಿನಿಮಾದ ಕಾಮನ್ ಡಿಪಿ ಹಾಕಿ ಸಂಭ್ರಮಿಸುತ್ತಿದ್ದಾರೆ.
ಓಂ ಮರೆಯುವಂತಿಲ್ಲ: ಓಂ ಸಿನಿಮಾದ ಬಗ್ಗೆ ಮಾತನಾಡುವ ಶಿವರಾಜ್ ಕುಮಾರ್, ಆ ಸಿನಿಮಾವನ್ನು ಯಾವತ್ತಿಗೂ ಮರೆಯುವಂತಿಲ್ಲ. ನ ನ್ನ ಕೆರಿಯರ್‌ನಲ್ಲಿ ವಿಭಿ® ° ಹಾಗೂ ಬಹುಮುಖ್ಯ. ಮೊನ್ನೆ ಮೊನ್ನೆ ಸಿನಿಮಾ ಚಿತ್ರೀಕರಣ ಮಾಡಿದಂತಿದೆ. ಉಪೇಂದ್ರ ಜೊತೆ ಕೆಲಸ ಮಾಡಿದ್ದು ತುಂಬಾ ಖುಷಿಕೊಟ್ಟಿದೆ. ಅವರು ತುಂಬಾ ಟ್ಯಾಲೆಂಟೆಡ್. ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಅದನ್ನು ನೋಡಿದಾಗ ಖುಷಿಯಾಗುತ್ತದೆ.
ಓಂ ನೆನಪು ಯಾವತ್ತಿಗೂ ಎವರ್‌ಗ್ರೀನ್ ಆಗಿರುತ್ತದೆ ಎನ್ನುವುದು ಶಿವಣ್ಣ ಮಾತು. ಸದ್ಯ ಲಾಕ್ ಡೌನ್‌ನಿಂದಾಗಿ ಶಿವಣ್ಣ ಮನೆ ಯಲ್ಲಿದ್ದಾ ರೆ. ಶಿವರಾಜ್ ಕುಮಾರ್ ಈ ಲಾಕ್ ಡೌನ್‌ನಲ್ಲಿ ಮತ್ತಷ್ಟು ಫಿಟ್ ಆಗಲಿದ್ದಾ ರೆ. ಅದಕ್ಕೆ ಕಾರಣ ಅವರ ವರ್ಕೌಟ್ ಸಮಯ. ಹೌದು, ಲಾಕ್‌ಡೌನ್‌ನಲ್ಲಿ ಸಮಯ ಕಳೆಯಲು ಶಿವಣ್ಣ ಜಿಮ್ ಅವಧಿಯನ್ನು ಹೆಚ್ಚು ಮಾಡಿದ್ದಾರೆ. ಬೆಳಗ್ಗೆ ಎರಡೂವರೆ ಗಂಟೆ ಹಾಗೂ ಸಂಜೆ ಒಂದೂವರೆ ಗಂಟೆ ಜಿಮ್ ಮಾಡುತ್ತಿದ್ದಾರೆ. ಈ ಮೂಲಕ ಮತ್ತಷ್ಟು ಫಿಟ್ ಆಗುತ್ತಿದ್ದಾರೆ.
Kundapura: ಸರ್ವಿಸ್ ರಸ್ತೆಗೂ ಸಿಗಲಿ ಡಾಮರು ಭಾಗ್ಯ!
Railway track case: ಮಕ್ಕಳೆಂದು ಸುಮ್ಮನಿರದೆ ಹುನ್ನಾರ ಬಯಲಿಗೆಳೆಯಬೇಕು: ಸಂಸದ ಕೋಟ
Udupi ಕ್ಷೇತ್ರದ ಯೋಜನೆಗಳಿಗೆ ವಿಶೇಷ ಅನುದಾನಕ್ಕೆ ಸಿಎಂಗೆ ಶಾಸಕ ಯಶ್‌ಪಾಲ್ ಮನವಿ
ಪರಶುರಾಮ ಮೂರ್ತಿ ವಿವಾದ; ಅಷ್ಟಮಂಗಲ ಪ್ರಶ್ನೆ ನಡೆಸಲು ಸಲಹೆ: ಮುನಿಯಾಲು ಉದಯ ಕುಮಾರ್ ಶೆಟ್ಟಿ
Amaravathi Police Station Movie: ಅಮರಾವತಿಯಿಂದ ಟೀಸರ್ ಬಂತು
You seem to have an Ad Blocker on.
To continue reading, please turn it off or whitelist Udayavani.