ಕರಾಚಿ ಟೆಸ್ಟ್ ಪಂದ್ಯ: ಐನೂರರ ಗಡಿ ದಾಟಿದ ಆಸ್ಟ್ರೇಲಿಯ
Team Udayavani, Mar 13, 2022, 11:30 PM IST
ಕರಾಚಿ: ಆತಿಥೇಯ ಪಾಕಿಸ್ಥಾನದ ಬೌಲರ್‌ಗಳ ಮೇಲೆ ಸವಾರಿ ಮಾಡಿದ ಆಸ್ಟ್ರೇಲಿಯ ಕರಾಚಿ ಟೆಸ್ಟ್ ಪಂದ್ಯದಲ್ಲಿ ಐನೂರರ ಗಡಿ ದಾಟಿದೆ. 8 ವಿಕೆಟಿಗೆ 505 ರನ್ ಬಾರಿಸಿ ದ್ವಿತೀಯ ದಿನದಾಟ ಮುಗಿಸಿದೆ.
ಆಸ್ಟ್ರೇಲಿಯ ಮೊದಲ ದಿನದಾಟದಲ್ಲಿ 3 ವಿಕೆಟಿಗೆ 251 ರನ್ ಗಳಿಸಿತ್ತು. ಆಗ ಉಸ್ಮಾನ್ ಖ್ವಾಜಾ 127 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದರು. ಇದನ್ನು 160ರ ತನಕ ವಿಸ್ತರಿಸಿದರು. 369 ಎಸೆತಗಳ ಈ ಮ್ಯಾರಥಾನ್ ಆಟದ ವೇಳೆ ಅವರು 15 ಬೌಂಡರಿ, ಒಂದು ಸಿಕ್ಸರ್ ಹೊಡೆದರು.
ಆಸೀಸ್ ಸರದಿಯಲ್ಲಿ ಮಿಂಚಿದ ಮತ್ತೋರ್ವ ಆಟಗಾರ, ಕೀಪರ್ ಅಲೆಕ್ಸ್ ಕ್ಯಾರಿ. ಇವರದು ಬಿರುಸಿನ ಆಟವಾಗಿತ್ತು. ಆದರೆ 7 ರನ್ ಕೊರತೆಯಿಂದ ಶತಕ ತಪ್ಪಿಸಿಕೊಂಡರು. 93 ರನ್ 159 ಎಸೆತಗಳಿಂದ ಬಂತು. ಸಿಡಿಸಿದ್ದು 7 ಬೌಂಡರಿ, 2 ಸಿಕ್ಸರ್. ನೈಟ್ ವಾಚ್‌ಮನ್ ನಥನ್ ಲಿಯೋನ್ 38 ರನ್ ಹೊಡೆದರು.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯ-8 ವಿಕೆಟಿಗೆ 505 (ಖ್ವಾಜಾ 160, ಕ್ಯಾರಿ 93, ಸ್ಮಿತ್ 72, ಫಾಹಿಮ್ ಅಶ್ರಫ್ 55ಕ್ಕೆ 2, ಸಾಜಿದ್ ಖಾನ್ 151ಕ್ಕೆ 2).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.