Tender ಕರೆಯದೆ ಎಐ ಕಂಪೆನಿಗೆ ಪ್ರತಿ ತಿಂಗಳಿಗೆ 3 ಕೋಟಿ ರೂ. ಪಾವತಿ!
Team Udayavani, Jul 18, 2024, 7:10 AM IST
ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರ, ವಕ್ಫ್ ಮಂಡಳಿಯ ಅಕ್ರಮದ ಪ್ರಕರಣಗಳು ಹಸಿಯಾಗಿರುವಾಗಲೇ ಇಂಧನ ಇಲಾಖೆಯಲ್ಲಿ ಯಾವುದೇ ಟೆಂಡರ್ ಆಹ್ವಾನಿಸದೆ ವಿದ್ಯುತ್ ಹೊರೆ ಮುನ್ಸೂಚನೆ ನಿರ್ವಹಣ ಕಾರ್ಯವನ್ನು ಖಾಸಗಿ ಕಂಪೆನಿಯೊಂದಕ್ಕೆ ಗುತ್ತಿಗೆ ನೀಡಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಕ್ಯುನೆಕ್ಸ್ಟ್ ಎಂಬ ಕಂಪೆನಿಗೆ ಪ್ರಾಯೋಗಿಕವಾಗಿ ವಹಿಸಲಾಗಿದೆ. ಅದು ಕೃತಕ ಬುದ್ಧಿಮತ್ತೆಯಿಂದ ವಿದ್ಯುತ್ ಹೊರೆ ಪ್ರಮಾಣದ ಮುನ್ಸೂಚನೆ ನಿರ್ವಹಣೆ ಮಾಡಲಿದೆ. ಇದಕ್ಕೆ ಪ್ರತಿಯಾಗಿ ಇಲಾಖೆಗೆ ಆಗುವ ನಿವ್ವಳ ಉಳಿತಾಯದಲ್ಲಿ ಪ್ರತಿ ತಿಂಗಳು ಇಂತಿಷ್ಟು ಪಾಲನ್ನು ಗುತ್ತಿಗೆ ಪಡೆದ ಕಂಪೆನಿಗೆ ಪಾವತಿಸಲಾಗುತ್ತದೆ. ಆ ಮೊತ್ತವು ಮಾಸಿಕ ಕನಿಷ್ಠ 50 ಲಕ್ಷದಿಂದ ಗರಿಷ್ಠ 3 ಕೋಟಿ ರೂ. ಆಗಿದೆ. ನಷ್ಟ ಉಂಟಾದರೆ ದಂಡ ವಿಧಿಸುವ ಬಗ್ಗೆಯೂ ಉಲ್ಲೇಖೀಸಿಲ್ಲ.
ಸಾಮಾನ್ಯವಾಗಿ ಟೆಂಡರ್ ಮೊತ್ತದ 5 ಲಕ್ಷ ಮೀರಿದ ಮೊತ್ತದ ಯಾವುದೇ ಯೋಜನೆಗೆ ಕೆಟಿಟಿಪಿ ಕಾಯ್ದೆ ಪ್ರಕಾರ ಕಡ್ಡಾಯವಾಗಿ ಟೆಂಡರ್ ಕರೆಯಬೇಕು. ಆದರೆ ವಿದ್ಯುತ್ ನಿರ್ವಹಣೆಗಾಗಿ ಎಐ ಚಾಲಿತ ಕ್ರಿಯಾತ್ಮಕ ನಿರ್ಧಾರ ಬೆಂಬಲಿತ ವ್ಯವಸ್ಥೆ ಯೋಜನೆಗೆ ಟೆಂಡರ್ ಆಹ್ವಾನಿಸಿಲ್ಲ. ಬದಲಿಗೆ ಇಲಾಖೆಯಲ್ಲಿನ ನಾಲ್ವರು ಅಧಿಕಾರಿಗಳನ್ನು ಒಳಗೊಂಡ ಸಮಿತಿಯೇ ಪರಿಶೀಲನೆ ಮಾಡಿ ಕ್ಯುನೆಕ್ಸ್ಟ್ ಎಂಬ ಕಂಪನಿಗೆ ಗುತ್ತಿಗೆ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
ಸಿಎಂ ಗೆ ರೈತರ ಬಗ್ಗೆ ಕಾಳಜಿ ಇದ್ದರೆ ವಕ್ಫ್ ಗೆಜೆಟ್ ನೋಟಿಫಿಕೇಶನ್ ರದ್ದು ಮಾಡಲಿ: ಬೊಮ್ಮಾಯಿ
ಹಾಸನಾಂಬೆ ದರ್ಶನಕ್ಕೆ ವಿಧ್ಯುಕ್ತ ತೆರೆ; 9 ದಿನದಲ್ಲಿ 19 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದರ್ಶನ
Director Guruprasad: ಖ್ಯಾತ ಸ್ಯಾಂಡಲ್‌ವುಡ್ ನಿರ್ದೇಶಕ ಗುರುಪ್ರಸಾದ್ ಆ*ತ್ಮಹತ್ಯೆ
Vijayapura: ವಕ್ಫ್ ವಿವಾದ… ನಾಳೆಯಿಂದ ಅಹೋರಾತ್ರಿ ಧರಣಿ ಆರಂಭ: ಶಾಸಕ ಯತ್ನಾಳ
MUST WATCH
ಹೊಸ ಸೇರ್ಪಡೆ
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!
BBK11: ಬಿಗ್‌ಬಾಸ್ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ
Srinagar; ಉಗ್ರ ವಿರೋಧಿ ಕಾರ್ಯಾಚರಣೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬಿಸ್ಕೆಟ್‌ಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.