3 ಲಕ್ಷ ಗಡಿ ದಾಟಿದ ಸೋಂಕು ಪ್ರಕರಣಗಳು; ಸಾವಿನ ಸಂಖ್ಯೆ 5 ಸಾವಿರಕ್ಕೆ ಏರಿಕೆ
Team Udayavani, Aug 26, 2020, 10:13 PM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯದಲ್ಲಿ ಬುಧವಾರ ಒಟ್ಟು ಕೋವಿಡ್ ಸೋಂಕು ಪ್ರಕರಣಗಳು ಮೂರು ಲಕ್ಷದ ಗಡಿ ದಾಟಿದ್ದು, ಸಾವಿನ ಸಂಖ್ಯೆ ಐದು ಸಾವಿರ ಗಡಿ ದಾಟಿದೆ. ಇದರೊಂದಿಗೆ ಬುಧವಾರ ಹೊಸದಾಗಿ 8,580 ಮಂದಿಗೆ ಸೋಂಕು ತಗಲಿದ್ದು. 7,249 ಮಂದಿ ಗುಣಮುಖರಾಗಿದ್ದಾರೆ. ಜತೆಗೆ 133 ಮಂದಿ ಸಾವಿಗೀಡಾಗಿದ್ದಾರೆ.
ರಾಜ್ಯದ ಒಟ್ಟಾರೆ ಸೋಂಕು ಪ್ರಕರಣಗಳು 3,00,406ಕ್ಕೆ, ಸೋಂಕಿಗೆ ಬಲಿಯಾದವರ ಸಂಖ್ಯೆ 5,091ಕ್ಕೆ ಹಾಗೂ ಗುಣಮುಖರಾದವರ ಸಂಖ್ಯೆ 2,11,688ಕ್ಕೆ ಏರಿದೆ. ಸದ್ಯ 83,608 ಮಂದಿ ಚಿಕಿತ್ಸೆಯಲ್ಲಿದ್ದು, ಈ ಪೈಕಿ 760 ಮಂದಿ ತುರ್ತು ನಿಗಾ ಘಟಕದಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ರಾಜ್ಯದ ಸೋಂಕು ಪ್ರಕರಣಗಳು ಜುಲೈ 27ರಂದು ಒಂದು ಲಕ್ಷ, ಆಗಸ್ಟ್ 13ರಂದು ಎರಡು ಲಕ್ಷ ಗಡಿ ದಾಟಿದ್ದವು. ಆ ಬಳಿಕ ನಿತ್ಯ ಸರಾಸರಿ 7,500 ಮಂದಿಗೆ ಸೋಂಕು ದೃಢಪಟ್ಟಿದೆ. ರಾಜ್ಯಕ್ಕೆ ಸೋಂಕು ಕಾಲಿಟ್ಟು 140ನೇ ದಿನಕ್ಕೆ ಒಂದು ಲಕ್ಷ ಪ್ರಕರಣಗಳು ವರದಿಯಾಗಿದ್ದವು. ಆಗಸ್ಟ್ನಲ್ಲಿ ಸೋಂಕು ತೀವ್ರಗೊಂಡ ಹಿನ್ನೆಲೆಯಲ್ಲಿ ಕೇವಲ 17 ದಿನಗಳಲ್ಲಿ ಎರಡು ಲಕ್ಷಕ್ಕೇರಿತ್ತು. ಬಳಿಕ ಕೇವಲ 13 ದಿನಗಳಲ್ಲಿ ಮೂರು ಲಕ್ಷಕ್ಕೇರಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.