ಏರ್ಪೋರ್ಟ್ ರಸ್ತೆ ದಟ್ಟಣೆ ತಡೆಗೆ 3 ಹಂತದ ಯೋಜನೆ; ಮಹಾಲಕ್ಷ್ಮೀ ಜಂಕ್ಷನ್ ಬಳಿ ಮೇಲ್ಸೇತುವೆ
ಬಿಡಿಎ ಕಚೇರಿಯಿಂದ ಮಹಾಲಕ್ಷ್ಮೀ ಜಂಕ್ಷನ್‌ವರೆಗೆ ಸಂಚಾರ ದಟ್ಟಣೆ ಉಂಟಾಗುತ್ತದೆ.
Team Udayavani, Oct 7, 2022, 1:14 PM IST
ಬೆಂಗಳೂರು: ವಿಮಾನ ನಿಲ್ದಾಣಕ್ಕೆ ತೆರಳುವ ವಾಹನಗಳಿಗೆ ಎದುರಾಗುವ ಸಂಚಾರ ದಟ್ಟಣೆ ನಿವಾರಿಸಲು ಯೂನಿಫಾರ್ಮ್ ಕ್ಯಾರೇಜ್ ವಿಡ್ತ್ ಸೇರಿ 3 ಹಂತದ ಯೋಜನೆ ಅನುಷ್ಠಾನಗೊಳಿಸಲು ಬಿಬಿಎಂಪಿ ಮುಂದಾಗಿದೆ.
ನಗರದ ಕೇಂದ್ರ ಭಾಗವಾದ ಚಾಲುಕ್ಯ ವೃತ್ತ ಮಾರ್ಗವಾಗಿ ಪ್ರತಿದಿನ ಲಕ್ಷಾಂತರ ವಾಹನಗಳು ವಿಮಾನನಿಲ್ದಾಣಕ್ಕೆ ತೆರಳುತ್ತವೆ. ಹೀಗೆ ತೆರಳುವ ವಾಹನಗಳು ಚಾಲುಕ್ಯ ವೃತ್ತ, ಮಹಾಲಕ್ಷ್ಮೀ ಜಂಕ್ಷನ್ (ಕಾವೇರಿ ಜಂಕ್ಷನ್), ಮೇಖ್ರಿ ವೃತ್ತ, ಹೆಬ್ಬಾಳ ಮೇಲ್ಸೇತುವೆ ಬಳಿಯಲ್ಲಿ ಸಂಚಾರ ದಟ್ಟಣೆಗೆ ಸಿಲುಕುತ್ತಿವೆ.
ಈ ಸಮಸ್ಯೆಗೆ ಪರಿಹಾರ ಎನ್ನುವಂತೆ ಬಿಬಿಎಂಪಿ ಚಾಲುಕ್ಯ ವೃತ್ತದಿಂದ ಹೆಬ್ಬಾಳ ಮೇಲ್ಸೇತುವೆವರೆಗೆ ಹೊಸ ಮೇಲ್ಸೇತುವೆ ನಿರ್ಮಾಣಕ್ಕೆ ಯೋಜನೆ ರೂಪಿಸುತ್ತಿದೆ. ಅದರ ಜತೆಜತೆಗೆ 3 ಹಂತದ ಯೋಜನೆಗಳನ್ನು ಅನುಷ್ಠಾನಗೊಳಿಸುವುದಕ್ಕೂ ಸಿದ್ಧತೆ ನಡೆಸುತ್ತಿದೆ. ಒಂದು ವೇಳೆ ಮೇಲ್ಸೇತುವೆ ಯೋಜನೆ ಅನುಷ್ಠಾನ ಕಾರ್ಯಸಾಧುವಲ್ಲದಿದ್ದರೆ 3 ಹಂತದ ಯೋಜನೆ ಅನುಷ್ಠಾನಗೊಳಿಸಲು ಬಿಬಿಎಂಪಿ ನಿರ್ಧರಿಸಿದೆ.
ಬಿಬಿಎಂಪಿ ಅಧಿಕಾರಿಗಳು ಚರ್ಚಿಸಿದಂತೆ ಚಾಲುಕ್ಯ ವೃತ್ತದಿಂದ ಹೆಬ್ಟಾಳ ಮೇಲ್ಸೇತುವೆ ಬಳಿಯ ಎಸ್ಟೀಂ ಮಾಲ್‌ವರೆಗೆ ಯೂನಿಫಾರ್ಮ್ ಕ್ಯಾರೇಜ್ ವಿಡ್¤ ಹೆಸರಿನಲ್ಲಿ ಒಂದೇ ಅಗಲದ ರಸ್ತೆ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಚಾಲುಕ್ಯ ವೃತ್ತ ದಿಂದ ಎಸ್ಟೀಂ ಮಾಲ್‌ವರೆಗಿನ 7.1 ಕಿ.ಮೀ. ಉದ್ದದ ರಸ್ತೆಯನ್ನು ಒಂದೇ ಅಗಲವಾಗಿರುವಂತೆ ಮಾಡ ಲಾಗುತ್ತದೆ. ಎರಡೂ ಬದಿಯ ರಸ್ತೆಯು 3 ಪಥ ವಾಗಿರಲಿದ್ದು, ಅದರಿಂದ ವಾಹನಗಳು ಸರಾಗ ವಾಗಿ ಸಂಚರಿಸಬಹುದಾಗಿದೆ. ಈವರೆಗೆ ಬಾಟೆಲ್ ನೆಕ್ ಸ್ಥಳಗಳಲ್ಲಿ ವಾಹನದ ವೇಗ ತಗ್ಗುವುದನ್ನು ತಡೆಯಬಹುದಾಗಿದೆ.
ಯೂನಿಫಾಮ್ ಕ್ಯಾರೇಜ್ ವಿಡ್ತ್ ಸಮರ್ಪಕವಾಗಿ ಜಾರಿಯಾಗಲು ಬಾಟೆಲ್ ನೆಕ್ ಜಾಗಗಳಲ್ಲಿ ರಸ್ತೆ ಅಗಲೀಕರಣ ಮಾಡಲಾಗುತ್ತದೆ. ಅದಕ್ಕಾಗಿ ಎಷ್ಟು ಭೂಮಿ ಸ್ವಾಧೀನಪಡಿಸಿಕೊಳ್ಳಬೇಕು ಎಂಬುದನ್ನು ಅಧಿಕಾರಿಗಳು ಚರ್ಚಿಸುತ್ತಿದ್ದಾರೆ. ಅದರ ಜತೆಗೆ ರಸ್ತೆ ಅಗಲೀಕರಣ ಸಂದರ್ಭದಲ್ಲಿ ಚಾಲುಕ್ಯ ವೃತ್ತದಿಂದ ಎಸ್ಟೀಂ ಮಾಲ್‌ವರೆಗೆ ವೈಟ್‌ಟಾಪಿಂಗ್ ರಸ್ತೆ ನಿರ್ಮಿಸಲಾಗುತ್ತದೆ.
ಮಹಾಲಕ್ಷ್ಮೀ ಜಂಕ್ಷನ್ ಬಳಿ ಮೇಲ್ಸೇತುವೆ: ಸುಗಮ ವಾಹನ ಸಂಚಾರ ವ್ಯವಸ್ಥೆ ಕಲ್ಪಿಸಲು ಸಂಚಾರ ದಟ್ಟಣೆ ಹೆಚ್ಚಾಗಿ ಉಂಟಾಗುವ ಸದಾಶಿವನಗರ ಕಡೆ ತೆರಳುವ ಮಹಾಲಕ್ಷ್ಮೀ ಜಂಕ್ಷನ್ ಬಳಿ ಗ್ರೇಡ್ ಸಪರೇಟರ್ (ಮೇಲ್ಸೇ ತುವೆ) ನಿರ್ಮಿಸಲಾಗುತ್ತದೆ. ಸದ್ಯ ಮಹಾಲಕ್ಷ್ಮೀ ಜಂಕ್ಷನ್ ಬಳಿ ವಾಹನಗಳು ಮ್ಯಾಜಿಕ ಬಾಕ್ಸ್ ಕೆಳಸೇತುವೆಯ ಮೇಲ್ಭಾಗದ ಸಣ್ಣ ಮೇಲ್ಸೇತುವೆ ಸುತ್ತುವರಿದು ಸಂಚರಿಸಬೇಕು. ಇದರಿಂದಾಗಿ ಬಿಡಿಎ ಕಚೇರಿಯಿಂದ ಮಹಾಲಕ್ಷ್ಮೀ ಜಂಕ್ಷನ್‌ವರೆಗೆ ಸಂಚಾರ ದಟ್ಟಣೆ ಉಂಟಾಗುತ್ತದೆ. ಮೇಲ್ಸೇತುವೆ ನಿರ್ಮಾಣದಿಂದಾಗಿ ವಾಹನ ಸರಾಗವಾಗಿ ಸಾಗಲಿದೆ.
ಬಿಡಿಎ ಮೇಲ್ಸೇತುವೆ ಅಗಲೀಕರಣ: ಬಿಡಿಎ ಕಚೇರಿ ಎದುರು ನಿರ್ಮಿಸಿರುವ ಗ್ರೇಡ್ ಸಪರೇಟರ್ ಮೇಲ್ಸೇತುವೆಯು ಕಿರಿದಾಗಿದೆ. ಚಾಲುಕ್ಯ ವೃತ್ತದಿಂದ ಸರಾಗವಾಗಿ ಸಾಗಿ ಬರುವ ವಾಹನಗಳು ಬಿಡಿಎ ಕಚೇರಿ ಎದುರಿನ ಮೇಲ್ಸೇತುವೆ ಬಳಿ ನಿಧಾನವಾಗಿ ಸಾಗುವಂತಾಗುತ್ತಿದೆ. ಇದರಿಂದಾಗಿ ಸಂಚಾರ ದಟ್ಟಣೆ ಹೆಚ್ಚುತ್ತಿದೆ. ಅದನ್ನು ನಿವಾರಿಸಲು ಈಗಿರುವ ಎರಡೂ ಬದಿಯಲ್ಲಿನ ಎರಡು ಪಥದ ಮೇಲ್ಸೇತುವೆಯನ್ನು ಅಗಲೀಕರಿಸಿ ತಲಾ 3 ಪಥದ ಮೇಲ್ಸೇತುವೆ ನಿರ್ಮಿಸಲಾಗುತ್ತದೆ. ಅದರ ಜತೆಗೆ ವಿಂಡ್ಸರ್ ಮ್ಯಾನರ್ ಬಳಿಯ ರೈಲ್ವೆ ಕೆಳಸೇತುವೆಗೆ ಹೊಸದಾಗಿ ಒಂದು ವೆಂಟ್ ಅಳವಡಿಸಿ ಅಲ್ಲಿ ರಸ್ತೆ ನಿರ್ಮಿಸಲೂ ಬಿಬಿಎಂಪಿ ಯೋಜಿಸಿದೆ.
15 ದಿನಗಳಲ್ಲಿ ಸಮಗ್ರ ಯೋಜನಾ ವರದಿ
ಈ ಯೋಜನೆಗಳ ಕುರಿತಂತೆ ಅಂತರ ಇಲಾಖೆಗಳ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿದೆ. ಈ ಕುರಿತಂತೆ ಬಿಬಿಎಂಪಿ ಖಾಸಗಿ ಸಂಸ್ಥೆ ಮೂಲಕ ಸಮ ಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುತ್ತಿದೆ. ಇನ್ನೊಂದು 15 ದಿನಗಳಲ್ಲಿ ಡಿಪಿಆರ್ ಸಿದ್ಧವಾಗಲಿದ್ದು, ಅದನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಜತೆಗೆ ಚಾಲುಕ್ಯ ವೃತ್ತದಿಂದ ಹೆಬ್ಟಾಳವರೆಗೆ ಮೇಲ್ಸೇತುವೆ ನಿರ್ಮಾಣಕ್ಕೆ ತಗಲುವ ವೆಚ್ಚ ಮತ್ತು ಯೋಜನೆ ಅನುಷ್ಠಾನಕ್ಕೆ ಎದುರಾಗುವ ಸಮಸ್ಯೆ ಹಾಗೂ 3 ಹಂತದ ಯೋಜನೆಯ ವೆಚ್ಚ ಮತ್ತು ಸಮಸ್ಯೆಯನ್ನು ತುಲನೆ ಮಾಡಿ ನಂತರ ಯಾವ ಯೋಜನೆ ಅನುಷ್ಠಾನಗೊಳಿಸಬೇಕು ಎಂಬ ಬಗ್ಗೆ ಸರ್ಕಾರ ನಿರ್ಧರಿಸಿ ಬಿಬಿಎಂಪಿಗೆ ಸೂಚಿಸಲಿದೆ.
ವಿಮಾನ ನಿಲ್ದಾಣಕ್ಕೆ ತೆರಳುವ ವಾಹನಗಳಿಗೆ ಎದುರಾಗುವ ಸಂಚಾರ ದಟ್ಟಣೆ ನಿವಾರಣೆಗೆ 3 ಹಂತದ ಯೋಜನೆ ರೂಪಿಸಲಾಗುತ್ತಿದೆ. ಚಾಲುಕ್ಯ ವೃತ್ತದಿಂದ ಎಸ್ಟಿಂ ಮಾಲ್ ವರೆಗೆ ಯೂನಿಫಾರ್ಮ್ ಕ್ಯಾರೇಜ್ ವಿಡ್ತ್ ರಸ್ತೆ ನಿರ್ಮಾಣ, ಮಹಾಲಕ್ಷ್ಮೀ ಜಂಕ್ಷನ್‌ನಲ್ಲಿ ಮೇಲ್ಸೇತುವೆ ನಿರ್ಮಾಣ ಹಾಗೂ ಬಿಡಿಎ ಕಚೇರಿ ಎದುರಿನ ಮೇಲ್ಸೇತುವೆ ಅಗಲೀಕರಣಕ್ಕೆ ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ.
●ಪ್ರಹ್ಲಾದ್, ಬಿಬಿಎಂಪಿ ಪ್ರಧಾನ
ಎಂಜಿನಿಯರ್
ಗಿರೀಶ್ ಗರಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್
Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ
Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?
Bengaluru: ಕ್ಯಾಬ್ ಡಿಕ್ಕಿ;ಬುಲೆಟ್‌ನಲ್ಲಿ ತೆರಳುತ್ತಿದ್ದ ಸಾಫ್ಟ್ವೇರ್ ಎಂಜಿನಿಯರ್ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
IRCTC Down: ತಾಂತ್ರಿಕ ದೋಷ- ರೈಲು ಟಿಕೆಟ್ ಬುಕ್ಕಿಂಗ್ ಸಮಸ್ಯೆ-ಪ್ರಯಾಣಿಕರ ಆಕ್ರೋಶ
Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…
Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Tragic: ಮದುವೆ ಹರಕೆ ಹೊತ್ತು ಘಾಟಿ ದೇಗುಲಕ್ಕೆ ಬಂದಿದ್ದ ಯುವತಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.