Mangaluru”ಯುವ ಸಮಾಜದ ಸೇವೆ ದೇಶಕ್ಕೆ ಅದ್ವಿತೀಯ ಕೊಡುಗೆ’
ಮಾಹೆ ಮಂಗಳೂರು ಕ್ಯಾಂಪಸ್‌ನ 31ನೇ ಆವೃತ್ತಿಯ ಘಟಿಕೋತ್ಸವ
Team Udayavani, May 18, 2024, 1:26 AM IST
ಮಂಗಳೂರು: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಮಂಗಳೂರು ಕ್ಯಾಂಪಸ್‌ನ 31ನೇ ಆವೃತ್ತಿಯ ಘಟಿಕೋತ್ಸವ ಡಾ| ಟಿಎಂಎ ಪೈ ಇಂಟರ್‌ನ್ಯಾಶನಲ್ ಕನ್ವೆನ್ಶನ್ ಸೆಂಟರ್‌ನಲ್ಲಿ ಶುಕ್ರವಾರ ನಡೆಯಿತು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿ.ವಿ.ಯ ಉಪಕುಲಪತಿ ಡಾ| ಎಂ.ಕೆ. ರಮೇಶ್ ಘಟಿಕೋತ್ಸವ ಭಾಷಣ ಮಾಡಿದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿರುವ ನಾವು ಮುಂದಿನ 25 ವರ್ಷದಲ್ಲಿ ಅಭಿವೃದ್ದಿ ಹೊಂದಿದ ದೇಶ ವಾಗುತ್ತೇವೆ. ಈ ಅವಧಿಯಲ್ಲಿ ಯುವ ಸಮಾಜ ದೇಶಕ್ಕೆ ನೀಡುವ ಕೊಡುಗೆಯೇ ಅತ್ಯಮೂಲ್ಯ. ಸರ್ವರ ಜತೆಗೆ ಉತ್ತಮ ಸಂಬಂಧ ಬೆಳೆಸಿಕೊಂಡು ಜನರ ಸೇವೆಯನ್ನು ದೇವರ ಸೇವೆ ಎಂದು ಪರಿಭಾವಿಸಿ ಶ್ರಮಿಸಿದಾಗ ಅದ್ವಿತೀಯ ಶಕ್ತಿ ಸಂಚಲನವಾಗುತ್ತದೆ ಎಂದರು.
ಸ್ಪರ್ಧಾತ್ಮಕ ಜಗತ್ತಿನಲ್ಲಿ ಒತ್ತಡದ ದಿನಗಳಿಂದ ಆರಾಮವನ್ನು ಪಡೆಯಲು ಸಂಗೀತ, ನೃತ್ಯ, ಪುಸ್ತಕ ಓದುವುದು ಸಹಿತ ವಿವಿಧ ಚಟುವಟಿಕೆಗಳನ್ನು ನಡೆಸಿದರೆ ಉತ್ತಮ ಎಂದವರು ಆಶಿಸಿದರು.
ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಮಾತನಾಡಿ, ಶಿಕ್ಷಣವು ಕೇವಲ ಸತ್ಯಗ ಳನ್ನು ಕಂಠಪಾಠ ಮಾಡುವುದಲ್ಲದೆ ಪ್ರಶ್ನಿಸುವ ಕುತೂ ಹಲ, ಹೊಸತನವನ್ನು ಕಂಡುಕೊಳ್ಳುವಧೈರ್ಯ ಮತ್ತು ಸೇವೆ ಮಾಡುವ ಕರುಣೆಯನ್ನು ಬೆಳೆಸುತ್ತದೆ ಎಂದರು.
ಮಾಹೆ ಮಣಿಪಾಲದ ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್ ಅವರು ಆಶಯ ಭಾಷಣ ಮಾಡಿದರು.
ಸಹ ಕುಲಪತಿಗಳಾದ ಡಾ| ನಾರಾಯಣ ಸಭಾಹಿತ್, ಡಾ| ಶರತ್ ಕೆ. ರಾವ್, ಡಾ| ಮಧು ವೀರರಾಘವನ್,ಡಾ|ಎನ್.ಎನ್. ಶರ್ಮ, ಕುಲಸಚಿವ ಡಾ| ಗಿರಿಧರ್ ಪಿ. ಕಿಣಿ, ಡಾ| ವಿನೋದ್ ವಿ. ಥಾಮಸ್ ಉಪಸ್ಥಿತರಿದ್ದರು.
ಸಹ ಕುಲಪತಿ ಡಾ| ದಿಲೀಪ್ ಜಿ. ನಾಯ್ಕ ಸ್ವಾಗತಿಸಿದರು. ಕೆಎಂಸಿ ಮಂಗಳೂರು ಡೀನ್ ಡಾ| ಉನ್ನಿಕೃಷ್ಣನ್ ಬಿ. ವಂದಿಸಿದರು. ಡಾ| ನಂದಿತಾ ಶೆಣೈ ನಿರೂಪಿಸಿದರು.
1,061 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
ಡಾ| ಎಚ್.ಎಸ್. ಬಲ್ಲಾಳ್ ಅವರು ಒಟ್ಟು 1,061 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. ಇವರಲ್ಲಿ ಪದವಿಪೂರ್ವ 784, ಸ್ನಾತಕೋತ್ತರ 160 ಮತ್ತು ಪಿಎಚ್‌ಡಿ 117 ವಿದ್ಯಾರ್ಥಿಗಳಾಗಿದ್ದಾರೆ. ವಿದ್ಯಾರ್ಥಿಗಳಾದ ಅನನ್ಯಾ ಜಾ, ದೀಕ್ಷಾ ಛಾಪರಿಯ, ಶ್ರೇಯಾ ಆರ್. ಹಾಗೂ ಹರ್ಷ ಶರ್ಮ ಅವರಿಗೆ ಡಾ| ಟಿ.ಎಂ.ಎ. ಪೈ ಚಿನ್ನದ ಪದಕ ಪುರಸ್ಕಾರವಿತ್ತು ಗೌರವಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಎಸ್‌ಟಿಪಿಗಳಲ್ಲಿ ಸಂಸ್ಕರಣೆ ಆಗದೆ ಕೊಳಚೆ ನೀರು ನೇರ ನದಿ, ಕೆರೆಗೆ!
Bajpe ಪ.ಪಂ.ನಿಂದ ಕುಡಿಯುವ ನೀರು ಪೂರೈಕೆಗೆ ಹೊಸ ಚಿಂತನೆ; ಹೊಸ ಬೋರ್‌ವೆಲ್‌ಗೆ ಸೌರ ಪಂಪ್
Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!
ಉಮ್ರಾ ಯಾತ್ರೆಗೆ ತೆರಳಿ ವಂಚನೆ : ಸಂತ್ರಸ್ತರನ್ನು ಊರಿಗೆ ಕರೆಸಿಕೊಂಡ ಮೊಯ್ದಿನ್ ಬಾವ
ಜ.6- 9: ಜೋಕಟ್ಟೆ ಲೆವೆಲ್‌ಕ್ರಾಸ್ ಬಂದ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.