ಬಿಜೆಪಿಗೆ 3,623 ಕೋಟಿ ರೂ. ಆದಾಯ! ಚುನಾವಣಾ ಬಾಂಡ್ ಮೂಲಕವೇ 2,555 ಕೋಟಿ ರೂ. ಗಳಿಕೆ
Team Udayavani, Aug 10, 2021, 7:29 PM IST
ನವದೆಹಲಿ: ಆಡಳಿತಾರೂಢ ಬಿಜೆಪಿಯು, 2019-20ರಲ್ಲಿ ತನಗೆ 3,623 ಕೋಟಿ ರೂ.ಗಳಿಗೂ ಮಿಗಿಲಾದ ಆದಾಯ ಬಂದಿರುವುದಾಗಿ ಪ್ರಕಟಿಸಿದ್ದು, ಇದರಲ್ಲಿ 2,555 ಕೋಟಿ ರೂ. ಹಣ ಚುನಾವಣಾ ಬಾಂಡ್‌ಗಳ ಮೂಲಕ ಬಂದಿದೆ ಎಂದು ಹೇಳಿದೆ.
ಕೇಂದ್ರ ಚುನಾವಣಾ ಆಯೋಗಕ್ಕೆ (ಇಸಿ) ಸಲ್ಲಿಸಿರುವ ವರದಿಯಲ್ಲಿ ಈ ವಿಷಯವನ್ನು ಉಲ್ಲೇಖೀಸಿರುವ ಬಿಜೆಪಿ, 2019-20ರಲ್ಲಿ ತನಗೆ 3623,28,06,093 ರೂ.ಗಳಷ್ಟು ಆದಾಯ ಬಂದಿದೆ. ಅದರಲ್ಲಿ, 2555,00,01,000 ರೂ.ಗಳಷ್ಟು ಹಣ ಚುನಾವಣಾ ಬಾಂಡ್‌ಗಳ ಮೂಲಕ ಸಂಗ್ರಹವಾಗಿರುವುದಾಗಿ ತಿಳಿಸಿದೆ.
“ಈ ಆದಾಯದಲ್ಲಿ, 1651,02,25,425 ರೂ.ಗಳಷ್ಟು ಖರ್ಚಾಗಿದ್ದು, 2019ರ ಚುನಾವಣೆಯಲ್ಲಿ ಪಕ್ಷದ ಪ್ರಚಾರಕ್ಕಾಗಿಯೇ 1,352 ಕೋಟಿ ರೂ. ವ್ಯಯ ಮಾಡಲಾಗಿದೆ. ಇನ್ನು, ಮಾಧ್ಯಮಗಳಲ್ಲಿ ಚುನಾವಣಾ ಜಾಹೀರಾತಿಗಾಗಿ 400 ಕೋಟಿ ರೂ. ಖರ್ಚು ಮಾಡಲಾಗಿದೆ’ ಎಂದು ಬಿಜೆಪಿ ವಿವರಿಸಿದೆ.
ಇದನ್ನೂ ಓದಿ :ಜಪಾನ್ ಕಂಪನಿ ತೆಕ್ಕೆಗೆ ಉಡುಪಿಯ ‘ರೋಬೋಸಾಫ್ಟ್’ : 805 ಕೋಟಿ ರೂ.ಗೆ ಮಾರಾಟ
ಮತ್ತೂಂದೆಡೆ, 2019-20ರಲ್ಲಿ ಬಿಜೆಪಿಗೆ ದೇಣಿಗೆ ರೂಪದಲ್ಲಿರುವ ಚುನಾವಣಾ ಬಾಂಡ್‌ಗಳಲ್ಲಿ, ಶೇ. 76ರಷ್ಟು ಮಾರಾಟವಾಗಿದ್ದು, ಪ್ರಮುಖ ವಿಪಕ್ಷವಾದ ಕಾಂಗ್ರೆಸ್‌ನ ಚುನಾವಣಾ ಬಾಂಡ್‌ಗಳಲ್ಲಿ ಶೇ. 9ರಷ್ಟು ಮಾತ್ರ ಮಾರಾಟವಾಗಿದೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್ಗಳಲ್ಲಿ 31 ಬಾರಿ ಕಪಾಳ ಮೋಕ್ಷ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.