Water: ಆರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ 392 ಕೋ. ರೂ.ಮಂಜೂರು
Team Udayavani, Jan 21, 2024, 11:27 PM IST
ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮತ್ತು ಉಳ್ಳಾಲ ಸಹಿತ ಆರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗಾಗಿ 392 ಕೋಟಿ ರೂ. ಗೂ ಮಿಕ್ಕಿ ಮೊತ್ತ ಮಂಜೂರು ಮಾಡಿರುವ ಸರಕಾರ, ಈ ಮೂಲಕ 171 ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಆಗಲಿದೆ.
ಉದ್ದೇಶಿತ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ 3.27 ಲಕ್ಷಕ್ಕೂ ಹೆಚ್ಚು ಜನರಿಗೆ ನೀರಿನ ಸಂಪರ್ಕ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ 392 ಕೋಟಿ ರೂ. ಮಂಜೂರು ಮಾಡಲಾಗಿದೆ. ಇದರಿಂದ 171 ಗ್ರಾಮಗಳಿಗೆ ಪ್ರಯೋಜನ ಆಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಯೋಜನೆಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮತ್ತು ಉಳ್ಳಾಲದ 26 ಗ್ರಾಮಗಳಲ್ಲಿ 1.60 ಲಕ್ಷ ಜನರಿಗೆ 254 ಕೋಟಿ ರೂ. ವೆಚ್ಚದಲ್ಲಿ ನೀರಿನ ಸಂಪರ್ಕ ಕಲ್ಪಿಸಲಾಗುತ್ತಿದೆ. ಮೈಸೂರಿನ ಎಚ್.ಡಿ. ಕೋಟೆ ತಾಲೂಕಿನ ಅಂತರಸಂತೆಯ 64 ಗ್ರಾಮಗಳಿಗೆ 101.73 ಕೋ.ರೂ. ವೆಚ್ಚದಲ್ಲಿ ನೀರಿನ ಸಂಪರ್ಕ ಕಲ್ಪಿಸಲಾಗಿದ್ದು, 67,527 ಜನರಿಗೆ ಅನುಕೂಲ ಆಗಲಿದೆ. ದೊಡ್ಡೇಬಾಗಿಲಿನ 25 ಗ್ರಾಮಗಳಿಗೆ 34 ಕೋ. ರೂ. ವೆಚ್ಚದಲ್ಲಿ ನೀರಿನ ಸಂಪರ್ಕ ಕಲ್ಪಿಸಲಾಗುತ್ತಿದ್ದು, 27,691 ಜನರಿಗೆ ಅನುಕೂಲ ಆಗಲಿದೆ. ಇದೇ ಜಿಲ್ಲೆಯ ಹಂಪಾಪುರದ 36 ಗ್ರಾಮಗಳಿಗೆ 65 ಲಕ್ಷ ಮೊತ್ತದಲ್ಲಿ 41,561 ಜನರಿಗೆ ನೀರಿನ ಸಂಪರ್ಕ ಒದಗಿಸಲಾಗುತ್ತಿದೆ. ಹಾವೇರಿಯ ನೆಗಳೂರಿನ 4 ಗ್ರಾಮಗಳಿಗೆ 18 ಕೋ.ರೂ. ವೆಚ್ಚದಲ್ಲಿ ನೀರಿನ ಸಂಪರ್ಕ ಕಲ್ಪಿಸಲಾಗುತ್ತಿದ್ದು, 14,676 ಜನರಿಗೆ ಅನುಕೂಲ ಆಗಲಿದೆ. ಇದೇ ಜಿಲ್ಲೆಯ ಕುಡ್ಲದ 6 ಗ್ರಾಮಗಳ 14,917 ಜನ ಕುಡಿಯುವ ನೀರಿನ ಸಂಪರ್ಕ ಪಡೆಯಲಿದ್ದಾರೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.