ಆರು ಭಾಷೆಗಳಲ್ಲಿ 3ಡಿ ಚಿತ್ರ
Team Udayavani, May 27, 2020, 4:04 AM IST
3ಈ ಸಿನಿಮಾವೊಂದು ಆರು ಭಾಷೆಗಳಲ್ಲಿ ಬಿಡುಗಡೆಗೆ ಸಿದ್ಧಛಿವಾಗುತ್ತಿದೆ. ಅದೇ ಸಾಲ್ಮನ್. ಶಲೀಲ್ ಕಲೂರ್ ಈ ಚಿತ್ರದ ನಿರ್ದೇಶಕರು. ಇದೊಂದು ರೊಮ್ಯಾಂಟಿಕ್ ಸಸ್ಪೆನ್ಸ್ ಚಿತ್ರವಾಗಿದ್ದು, ಬಹುತೇಕ ಭಾಗದ ಚಿತ್ರೀಕರಣವು ಆಕರ್ಷಕ ತಾಣಗಳಾದ ಕುಲು-ಮನಾಲಿ, ರಾಮೋಜಿರಾವ್ ಫಿಲಂಸಿಟಿ ಅಲ್ಲದೇ, ದುಬೈ, ಮಲೇಷ್ಯಾ ಮುಂತಾದ ಕಡೆ ಪೂರ್ಣಗೊಂಡಿದೆ.
ಈ ಚಿತ್ರವು ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಹಿಂದಿ ಮತ್ತು ಮರಾಠಿ ಭಾಷೆಗಳಲ್ಲೂ ತೆರೆಕಾಣಲಿದೆ. ಎಂ.ಜೆ.ಎಸ್.ಮೀಡಿಯಾ ಬ್ಯಾನರ್ ಈ ಚಿತ್ತವನ್ನು ಸುಮಾರು 12 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿದ್ದು, ಡಾ.ಟಿ.ಎನ್.ವಿನೀತ್ ಭಟ್, ಶಾಜು ಥಾಮಸ್, ಜೋಸ್.ಡಿ.ಪೇಕಾಟ್ಟಿಲ್ ಮತ್ತು ಜಾಯಿಸ್.ಟಿ.ಪೇಕಾಟ್ಟಿಲ್ ಇದರ ನಿರ್ಮಾಪಕರಾಗಿದ್ದಾರೆ.
ಹುಟ್ಟಿದ ತಕ್ಷಣವೇ ಅನಾಥವಾಗುವ ವೈಶಿಷ್ಯತೆಯನ್ನು ಹೊಂದಿರುವ ಸಾಲ್ಮನ್ ಮೀನಿನ ಹೆಸರನ್ನು ಈ ಚಿತ್ರಕ್ಕೆ ಇಡಲಾಗಿದ್ದು, ಅದು ತನ್ನ ಬದುಕಿನಲ್ಲಿ ಎದುರಾಗುವ ಪ್ರತಿಕೂಲ ಪರಿಸ್ಥಿತಿಗಳನ್ನು ದಾಟಿ ಹಲವಾರು ಉಪಖಂಡ ಪ್ರದೇಶಗಳನ್ನು ಹೇಗೆ ಸೇರುತ್ತದೆಯೋ, ಅದೇರೀತಿ ಕಥಾನಾಯಕನ ಜೀವನದ ಸುತ್ತ ನಡೆಯುವ ಸಸ್ಪೆನ್ಸ್ ಥ್ರಿಲ್ಲರ್ ಘಟನಾವಳಿಗಳೇ ಈ ಸಿನೇಮಾದ ಕಥಾವಸ್ತುವಾಗಿದೆ. ದುಬೈನಲ್ಲಿ ತನ್ನ ಕುಟುಂಬ ಸಮೇತ ನೆಲೆಸಿ ಒಮ್ಮೆ ಹುಟ್ಟೂರಿಗೆ ಆಗಮಿಸಿದ ವೇಳೆ ಅನಿರೀಕ್ಷಿತವಾಗಿ ನಡೆಯುವ ದಾರುಣ ಸಾವು,
ಆ ಬಳಿಕ ಅನಾವರಣಗೊಳ್ಳುವ ಆತ್ಮದ ಹಿನ್ನೆಲೆಯು ಈ ಸಿನೆಮಾದ ಕಥಾಹಂದರವಾಗಿದೆ. ಖ್ಯಾತ ಗಾಯಕರಾದ ಜೇಸುದಾಸ್ ಅವರ ಪುತ್ರ ವಿಜಯ್ ಜೇಸುದಾಸ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ರಾಹುಲ್ ಮೆನನ್ ಕ್ಯಾಮರಾ ನಿರ್ವಹಿಸಿದ್ದು, ಜೀಮೋನ್ ಪಲ್ಲೇಲಿ ತ್ರೀ ಡಿ ಸ್ಟೀರಿಯೋಸ್ಕಾಪಿಕ್ ಜವಾಬ್ದಾರಿಯನ್ನೂ ಹೊತ್ತಿದ್ದು, ಈ ಚಿತ್ರವು ಸದ್ಯದಲ್ಲೇ ಬಿಡುಗಡೆಗೆ ಸಿದ್ಧವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
Life Partner ಹೇಗಿರಬೇಕು: ನಟಿ ರಶ್ಮಿಕಾ ಮಂದಣ್ಣ ಮನದ ಮಾತು
Oscars 2025; ರೇಸ್‌ನಿಂದ ಹೊರಬಿದ್ದ ಲಾಪತಾ ಲೇಡೀಸ್: 15ರ ಕಿರುಪಟ್ಟಿಯ ಭಾಗವಾಗಿಲ್ಲ
Kidnap ಬಲೆಯಿಂದ ಸ್ವಲ್ಪದರಲ್ಲೇ ಪಾರಾದ ನಟ ಶಕ್ತಿ ಕಪೂರ್!
MUST WATCH
ಹೊಸ ಸೇರ್ಪಡೆ
Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Surathkal: ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಮುಲ್ಕಿ ಕಂದಾಯ ನಿರೀಕ್ಷಕ
Mudbidri: ಸರಕಾರಿ ಬಸ್ಸಿಗಿಲ್ಲ ನಿಲ್ದಾಣ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.