42 ಸಾವು, ನಾಲ್ಕು ಲಕ್ಷ ಹೆಕ್ಟೇರ್ ಬೆಳೆ ಹಾನಿ
Team Udayavani, Aug 13, 2019, 3:09 AM IST
ಬೆಂಗಳೂರು: ರಾಜ್ಯದಲ್ಲಿನ ಪ್ರವಾಹ ಪರಿಸ್ಥಿತಿಯಿಂದ ಆ.1 ರಿಂದ 12 ರವರೆಗೆ ಪ್ರವಾಹ ಪೀಡಿತ 17 ಜಿಲ್ಲೆಗಳಲ್ಲಿ 86 ತಾಲೂಕುಗಳು ಪ್ರವಾಹಕ್ಕೆ ಸಿಲುಕಿವೆ. 42 ಜನ ಜೀವ ಕಳೆದುಕೊಂಡಿದ್ದು, 12 ಜನ ಕಾಣೆಯಾಗಿದ್ದಾರೆ. 548 ಪ್ರಾಣಿಗಳು ಜೀವ ಕಳೆದುಕೊಂಡಿವೆ. ಜನ ಜಾನುವಾರು ಹಾನಿ ಹಾಗೂ ಆಸ್ತಿಪಾಸ್ತಿಗೆ ನಷ್ಟವಾಗಿರುವ ಕುರಿತು ರಾಜ್ಯ ಸರ್ಕಾರ ಅಧಿಕೃತ ಮಾಹಿತಿ ಪ್ರಕಟಿಸಿದ್ದು, ಹದಿನೇಳು ಜಿಲ್ಲೆಗಳ 2694 ಹಳ್ಳಿಗಳು ಪ್ರವಾಹಕ್ಕೆ ಸಿಲುಕಿಕೊಂಡಿವೆ.
ಪ್ರವಾಹದಲ್ಲಿ ಸಿಲುಕಿದ್ದ 5.81 ಲಕ್ಷ ಜನರನ್ನು ರಕ್ಷಿಸಲಾ ಗಿದ್ದು, ಬೆಳಗಾವಿ ಜಿಲ್ಲೆಯೊಂದರಲ್ಲಿಯೇ 3.45 ಲಕ್ಷ ಜನರನ್ನು ರಕ್ಷಿಸಲಾಗಿದೆ. ಬಾಗಲಕೋಟೆಯಲ್ಲಿ 1 ಲಕ್ಷ ಸಂತ್ರಸ್ತರನ್ನು ರಕ್ಷಿಸಲಾಗಿದೆ. ಪ್ರವಾಹದಲ್ಲಿ ನಿರಾಶ್ರಿತರಾಗಿರುವ ಜನರಿಗೆ 1181 ಸಾಂತ್ವನ ಕೇಂದ್ರಗಳನ್ನು ತೆರೆಯಲಾಗಿದ್ದು, 3.32 ಲಕ್ಷ ಜನರು ಸಾಂತ್ವನ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ.
ಪ್ರವಾಹದಲ್ಲಿ ಸಿಲುಕಿದ್ದ 50,595 ಜಾನುವಾರುಗಳನ್ನು ರಕ್ಷಿಸಲಾಗಿದ್ದು, ಬೆಳಗಾವಿ ಜಿಲ್ಲೆಯೊಂದರಲ್ಲಿಯೇ 50,554 ಪ್ರಾಣಿಗಳನ್ನು ರಕ್ಷಿಸಲಾಗಿದ್ದು, 32,305 ಜಾನುವಾರಗಳಿಗೆ ಗೋ ಶಾಲೆಯಲ್ಲಿ ಆಶ್ರಯ ನೀಡಲಾಗಿದೆ. ಪ್ರವಾಹದಿಂದ 4 ಲಕ್ಷ 21 ಸಾವಿರ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ನಾಶವಾಗಿದ್ದು, 31,800 ಮನೆಗಳು ಜಖಂಗೊಂಡಿವೆ ಎಂದು ಕಂದಾಯ ಇಲಾಖೆ ಅಧಿಕೃತ ಪ್ರಕಟಣೆ ಹೊರಡಿಸಿದೆ.
ಸಾವಿಗೀಡಾದ ಪ್ರಾಣಿಗಳು: ಬೆಳಗಾವಿ 133, ಬಾಗಲಕೋಟೆ-29, ಉತ್ತರ ಕನ್ನಡ-31, ಶಿವಮೊಗ್ಗ-24, ಉಡುಪಿ-4, ಚಿಕ್ಕಮಗಳೂರು-2, ಗದಗ-25, ಮೈಸೂರು-4, ಧಾರವಾಡ-187, ಹಾವೇರಿ-109 ಜಾನುವಾರುಗಳು ಸಾವಿಗೀಡಾಗಿವೆ.
ತಾಲೂಕುಗಳು: ಬೆಳಗಾವಿ-10, ಬಾಗಲಕೋಟೆ-6, ವಿಜಯಪುರ-4,ರಾಯ ಚೂರು-3, ಯಾದಗಿರಿ-3, ಉತ್ತರ ಕನ್ನಡ-11, ದಕ್ಷಿಣ ಕನ್ನಡ-5, ಶಿವಮೊಗ್ಗ-7, ಉಡುಪಿ-3, ಕೊಡಗು-3, ಚಿಕ್ಕಮಗ ಳೂರು-4, ಹಾಸನ-8, ಗದಗ-3, ಮೈಸೂರು-3, ಧಾರವಾಡ-5, ಹಾವೇರಿ-6, ಕಲಬುರಗಿ-2 ತಾಲೂಕು ಗಳಿಗೆ ಹಾನಿಗೊಳಗಾಗಿವೆ.
ಹಳ್ಳಿಗಳು: ಬೆಳಗಾವಿ-365, ಬಾಗಲ ಕೋಟೆ-173, ವಿಜಯಪುರ-73, ರಾಯ ಚೂರು-29, ಯಾದಗಿರಿ-8, ಉತ್ತರ ಕನ್ನಡ-216, ದಕ್ಷಿಣ ಕನ್ನಡ-50, ಶಿವಮೊಗ್ಗ-556, ಉಡುಪಿ-4, ಕೊಡಗು-58, ಚಿಕ್ಕಮಗಳೂರು-72, ಹಾಸನ- 655, ಗದಗ-175, ಮೈಸೂರು- 51, ಧಾರವಾಡ-21, ಹಾವೇರಿ-138, ಕಲಬುರಗಿ-50 ಗ್ರಾಮಗಳು ಪ್ರವಾಹಕ್ಕೆ ಸಿಲುಕಿವೆ.
ಜನರ ರಕ್ಷಣೆ: ಬೆಳಗಾವಿ-3.45 ಲಕ್ಷ, ಬಾಗಲಕೋಟೆ-1 ಲಕ್ಷ, ವಿಜಯಪುರ- 8650, ರಾಯಚೂರು-2639, ಯಾದಗಿರಿ-318, ಉತ್ತರ ಕನ್ನಡ-3088, ದಕ್ಷಿಣ ಕನ್ನಡ-3516, ಶಿವಮೊಗ್ಗ-6200, ಕೊಡಗು-4600, ಚಿಕ್ಕಮಗಳೂರು-980, ಗದಗ-51171, ಮೈಸೂರು-4889, ಧಾರವಾಡ-35680, ಹಾವೇರಿ-14350 ಜನರನ್ನು ರಕ್ಷಿಸಲಾಗಿದೆ.
ಸಾಂತ್ವನ ಕೇಂದ್ರಗಳು: ಬೆಳಗಾವಿ-436, ಬಾಗಲಕೋಟೆ-203, ವಿಜಯಪುರ-7, ರಾಯಚೂರು-15, ಯಾದಗಿರಿ-15, ಉತ್ತರ ಕನ್ನಡ-93, ದಕ್ಷಿಣ ಕನ್ನಡ-30, ಶಿವಮೊಗ್ಗ-25, ಉಡುಪಿ-0, ಕೊಡಗು-44, ಚಿಕ್ಕಮಗಳೂರು-12, ಹಾಸನ-11, ಗದಗ-40, ಮೈಸೂರು-32, ಧಾರವಾಡ-81, ಹಾವೇರಿ-137 ಸಾಂತ್ವನ ಕೇಂದ್ರಗಳನ್ನು ತೆರೆಯಲಾಗಿದೆ.
ಬೆಳೆ ಹಾನಿ: ಬೆಳಗಾವಿ-1.57 ಲಕ್ಷ ಹೆ., ಬಾಗಲಕೋಟೆ-29,765, ವಿಜಯಪುರ -16642, ರಾಯಚೂರು-2821, ಯಾದಗಿರಿ-2360, ಉತ್ತರ ಕನ್ನಡ- 10,100, ದಕ್ಷಿಣ ಕನ್ನಡ-14, ಶಿವಮೊಗ್ಗ- 18319, ಉಡುಪಿ-1171, ಕೊಡಗು-0, ಚಿಕ್ಕಮಗಳೂರು-1483, ಹಾಸನ- 2485, ಗದಗ-6172, ಮೈಸೂರು-201, ಧಾರವಾಡ-1.07 ಲಕ್ಷ, ಹಾವೇರಿ- 59773, ಕಲಬುರಗಿ-5830 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ.
ಮನೆ ಹಾನಿ: ಬೆಳಗಾವಿ-9748, ಬಾಗಲಕೋಟೆ-ಪರಿಶೀಲನೆಯಲ್ಲಿದೆ. ಉತ್ತರ ಕನ್ನಡ-2072, ದಕ್ಷಿಣ ಕನ್ನಡ-432, ಶಿವಮೊಗ್ಗ-805, ಉಡುಪಿ-455, ಕೊಡಗು-16, ಚಿಕ್ಕಮಗಳೂರು-327, ಹಾಸನ-763, ಗದಗ-1853, ಮೈಸೂರು-832, ಧಾರವಾಡ-7931, ಹಾವೇರಿ-6566 ಮನೆಗಳು ಹಾನಿಗೊಳಗಾಗಿವೆ.
ಎಲ್ಲಿ, ಎಷ್ಟು ಜೀವಹಾನಿ?
ಬೆಳಗಾವಿ 12
ಬಾಗಲಕೋಟೆ 2
ಉತ್ತರ ಕನ್ನಡ 4
ದಕ್ಷಿಣ ಕನ್ನಡ 2
ಶಿವಮೊಗ್ಗ 3
ಉಡುಪಿ-2
ಕೊಡಗು-7
ಚಿಕ್ಕಮಗಳೂರು 5
ಮೈಸೂರು 2
ಧಾರವಾಡ 3
ಕಾಣೆಯಾದವರು: ಬೆಳಗಾವಿ-2, ಕೊಡಗು-8, ಚಿಕ್ಕಮಗಳೂರು-1, ಹಾವೇರಿ-1 ಕಾಣೆಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್ ಉತ್ಸವ’ ಮಾಡಲ್ಲ: ಬಿಜೆಪಿ
Internal Dissent: ಪ್ರಧಾನಿ ಮೋದಿ ಭೇಟಿಯಾದ ವಿಜಯೇಂದ್ರ ದೂರದಿದ್ದರೂ ‘ಸಂದೇಶ’ ರವಾನೆ
Bill Amendment: ರಾಜ್ಯಪಾಲರ ಕುಲಾಧಿಪತಿ ಅಧಿಕಾರಕ್ಕೆ ಕತ್ತರಿ: ಮೇಲ್ಮನೆಯಲ್ಲೂ ಅಂಗೀಕಾರ
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
MUST WATCH
ಹೊಸ ಸೇರ್ಪಡೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.