Ramlallah: ಜೀವನಪರ್ಯಂತದ 5 ಕೋಟಿ ರೂ. ಗಳಿಕೆ ರಾಮಲಲ್ಲಾಗೆ ಸಮರ್ಪಣೆ
- ರಾಮನ ಅಪ್ಪಟ ಭಕ್ತರೊಬ್ಬರಿಂದ ಕಾಣಿಕೆ
Team Udayavani, Nov 21, 2023, 10:12 PM IST
ಲಕ್ನೋ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ದೇಶ-ವಿದೇಶಗಳಿಂದಲೂ ಭಕ್ತರು ಕೊಡುಗೆ ನೀಡುತ್ತಿರುವ ನಡುವೆಯೇ ರಾಮನ ಅಪ್ಪಟ ಭಕ್ತರಾದ ನಿವೃತ್ತ ಅಧಿಕಾರಿಯೊಬ್ಬರು ಶ್ರೀರಾಮನಿಗಾಗಿ ತಮ್ಮ ಜೀವನಪರ್ಯಂತದ ಗಳಿಕೆಯನ್ನೇ ಮುಡುಪಾಗಿ ಘೋಷಿಸಿದ್ದಾರೆ. ದೇಗುಲ ನಿರ್ಮಾಣಕ್ಕೆ ಸಂಬಂಧಿಸಿದ ಸಾಮಗ್ರಿಗಳಿಗಾಗಿ 5 ಕೋಟಿ ಮೌಲ್ಯದ ತಮ್ಮೆಲ್ಲಾ ಉಳಿತಾಯವನ್ನು ರಾಮನಿಗೆ ಅರ್ಪಿಸಿದ್ದಾರೆ.
ಹೌದು, ಕೇಂದ್ರದ ಮಾಜಿ ಗೃಹಕಾರ್ಯದರ್ಶಿ ಆಗಿದ್ದಂಥ 1970ರ ಐಎಎಸ್ ಬ್ಯಾಚ್‌ನ ಅಧಿಕಾರಿ ಲಕ್ಷ್ಮೀ ನಾರಾಯಣನ್ ಅವರು ತಮ್ಮೆಲ್ಲ ಚರ ಮತ್ತು ಸ್ಥಿರ ಆಸ್ತಿಯನ್ನು ರಾಮಲಲ್ಲಾನಿಗೆ ನೀಡುತ್ತಿದ್ದಾರೆ. ಭಗವಾನ್ ವಿಷ್ಣುವಿನ ಆರತಿಯ “ನನಗೇನು ಇಷ್ಟವೋ ಎಲ್ಲವನ್ನೂ ನಿನಗೇ ಸಮರ್ಪಿಸುತ್ತೇನೆ, ಇದೆಲ್ಲವೂ ನಿನ್ನದೇ, ನನ್ನದೇನೂ ಇಲ್ಲ’ ಎನ್ನುವಂಥ ಸಾಲುಗಳಿಂದ ಪ್ರಭಾವಿತರಾಗಿರುವ ಅವರು, ರಾಮಲಲ್ಲಾನ ಮೇಲಿನ ಶುದ್ಧ ಭಕ್ತಿಯಿಂದ ಈ ನಿರ್ಣಯ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ.
ಅಲ್ಲದೇ, ರಾಮಲಲ್ಲಾನ ಪ್ರತಿಷ್ಠಾಪನೆ ಮುಗಿದ ನಂತರ ವಿಗ್ರಹದ ಮುಂಭಾಗದಲ್ಲಿ 151 ಕೆಜಿಯ ರಾಮಚರಿತಮಾನಸವನ್ನು ಇರಿಸಲು ಉದ್ದೇಶಿಸಲಾಗಿದ್ದು, ತಮ್ಮೆಲ್ಲ ಆಸ್ತಿ ಮೌಲ್ಯವಾದ 5 ಕೋಟಿ ವೆಚ್ಚದಲ್ಲಿ ಅದನ್ನು ರಚಿಸಲು ಬದ್ಧರಾಗಿರುವುದಾಗಿ ನಾರಾಯಣನ್ ಘೋಷಿಸಿದ್ದಾರೆ. ಇತ್ತೀಚೆಗಷ್ಟೇ ನಾರಾಯಣನ್ ಅವರು ಪತ್ನಿ ಸಹಿತವಾಗಿ ಅಯೋಧ್ಯೆಗೆ ಭೇಟಿ ನೀಡಿ, ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರನ್ನು ಭೇಟಿಯಾಗಿ ದೇಣಿಗೆ ನೀಡುವುದಕ್ಕೆ ಅನುಮತಿಯನ್ನೂ ಕೋರಿದ್ದರು.
ಚಿನ್ನಲೇಪಿತ ರಾಮಚರಿತಮಾನಸ?
10,902 ಪದ್ಯಗಳನ್ನು ಒಳಗೊಂಡಿರುವ ಮಹಾಕಾವ್ಯ ರಾಮಚರಿತಮಾನಸ. ಇದರ ಪ್ರತಿಯೊಂದು ಪುಟವನ್ನೂ ತಾಮ್ರದಿಂದ ರಚಿಸಲಾಗುತ್ತದೆ. ವಿಶೇಷವೆಂದರೆ ಪದ್ಯದ ಪ್ರತಿ ಅಕ್ಷರವೂ ಚಿನ್ನ ಲೇಪಿತವಾಗಿರಲಿದೆ. ಪಚ್ಚೆ ಹರಳುಗಳನ್ನು ಚಿನ್ನದಲ್ಲಿ ಮುಳುಗಿಸಿ ಅವುಗಳಿಂದ ಅಕ್ಷರಗಳನ್ನು ಕೆತ್ತನೆ ಮಾಡಲಾಗುವುದು. ಇದಕ್ಕೆ ಒಟ್ಟು 140 ಕೆಜಿ ತಾಮ್ರ ಹಾಗೂ 5ರಿಂದ 7 ಕೆಜಿ ಚಿನ್ನದ ಅಗತ್ಯವಿದೆ. ಅಲಂಕಾರಕ್ಕಾಗಿ ಇನ್ನಿತರೆ ವಸ್ತುಗಳನ್ನೂ ಬಳಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
MUST WATCH
ಹೊಸ ಸೇರ್ಪಡೆ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.