ಉಗ್ರರ ಹಿಮ್ಮೆಟ್ಟಿಸಲು 50 ಕಮಾಂಡೋಗಳು ರೆಡಿ
ರಾಷ್ಟ್ರರಾಜಧಾನಿಯ ಸುರಕ್ಷತೆಗಾಗಿ ಸಜ್ಜಾಯ್ತು ಟೀಂ; ಕಾಶ್ಮೀರ, ನಕ್ಸಲ್‌ಪೀಡಿತ ಪ್ರದೇಶಗಳಿಂದ ಸಿಆರ್‌ಪಿಎಫ್ ಯೋಧರ ಆಯ್ಕೆ
Team Udayavani, Jan 19, 2022, 7:00 AM IST
ನವದೆಹಲಿ: ಕಾಶ್ಮೀರದಲ್ಲಿ ನೂರಾರು ಉಗ್ರರನ್ನು ಹಾಗೂ ರೆಡ್ ಝೋನ್‌ನಲ್ಲಿ ಹಲವು ನಕ್ಸಲರನ್ನು ಸದೆಬಡಿದಿರುವ ಸಿಆರ್‌ಪಿಎಫ್ ನ 50 ಕಮಾಂಡೋಗಳು ಇನ್ನು ರಾಷ್ಟ್ರ ರಾಜಧಾನಿಯನ್ನು ಕಾಯಲಿದ್ದಾರೆ!
ಹೌದು, ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇನ್ನು ಮುಂದೆ ಯಾವುದೇ ಭಯೋತ್ಪಾದಕ ದಾಳಿ ಅಥವಾ ಆತ್ಮಾಹುತಿ ದಾಳಿಗಳನ್ನು ಎದುರಿಸಲೆಂದೇ ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್‌ಪಿಎಫ್)ಯ 50 ಕಮಾಂಡೋಗಳನ್ನು ಆಯ್ಕೆ ಮಾಡಲಾಗಿದೆ.
ಕಾಶ್ಮೀರ ಕಣಿವೆಯಲ್ಲಿ ಹೇಗೆ ಸಿಆರ್‌ಪಿಎಫ್ ನ ಕ್ಷಿಪ್ರ ಕಾರ್ಯಪಡೆ(ಕ್ಯೂಎಟಿ) ಕಾರ್ಯನಿರ್ವಹಿಸುತ್ತಿದೆಯೋ, ಅದೇ ಮಾದರಿಯಲ್ಲಿ ದೆಹಲಿ ಕ್ಷಿಪ್ರ ಕಾರ್ಯಪಡೆಯು, ಸರ್ಕಾರದ ಸೂಚನೆ ಬಂದ ಕೂಡಲೇ ಯಾವುದೇ ಫಿದಾಯೀನ್ ಅಥವಾ ಉಗ್ರ ದಾಳಿಯನ್ನು ಸಮರ್ಥವಾಗಿ ಎದುರಿಸುವ ಕೆಲಸ ಮಾಡಲಿದೆ. ಈ 50 ಯುವ ಕಮಾಂಡೋಗಳಿಗೆ ಹಗಲಿರುಳೆನ್ನದೆ ಕಾರ್ಯನಿರ್ವಹಿಸಲು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಒದಗಿಸಲಾಗುತ್ತದೆ.
ಏನೇನು ತರಬೇತಿ?
ಹಲವು ವರ್ಷಗಳ ಕಾಲ ಕಾಶ್ಮೀರದಲ್ಲಿ ಸೇವೆ ಸಲ್ಲಿಸಿರುವ, ಪ್ರಮುಖ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡಿರುವ ಹಿರಿಯ ಅಧಿಕಾರಿಗಳೇ ಈ ಕಮಾಂಡೋಗಳಿಗೆ ತರಬೇತಿ ನೀಡಿದ್ದಾರೆ. ಸುಧಾರಿತ ಸ್ಫೋಟಕಗಳ ಪತ್ತೆ ಹಾಗೂ ನಿರ್ವಹಣೆ ಕುರಿತೂ ಟ್ರೈನಿಂಗ್ ನೀಡಲಾಗಿದೆ. ಇದಲ್ಲದೇ, ಜನಜಂಗುಳಿಯಿರುವ ಪ್ರದೇಶ ಅಂದರೆ ನಗರ ಪ್ರದೇಶಗಳಲ್ಲಿ. ಗೋಚರತೆ ಕಡಿಮೆ ಇರುವಾಗ(ಅಂದರೆ ರಾತ್ರಿ ಹೊತ್ತಲ್ಲಿ) ಹಾಗೂ ಗಗನಚುಂಬಿ ಕಟ್ಟಡಗಳಲ್ಲಿ ಹೇಗೆ ಕಾರ್ಯನಿರ್ವಹಿಸಬೇಕು ಎಂಬ ಬಗ್ಗೆ ಒಂದು ತಿಂಗಳ ತರಬೇತಿಯನ್ನೂ ಕಮಾಂಡೋಗಳು ಪಡೆದಿದ್ದಾರೆ.
ಇದನ್ನೂ ಓದಿ:ಶುಕ್ರವಾರ ಕರ್ಫ್ಯೂ ಭವಿಷ್ಯ, ಲಸಿಕಾಕರಣ ಕಡಿಮೆಯಾದರೆ ಜಿಲ್ಲಾಧಿಕಾರಿಗಳೆ ಹೊಣೆ : ಸಿಎಂ ಸೂಚನೆ
ಏನೇನು ಶಸ್ತ್ರಾಸ್ತ್ರಗಳಿರಲಿವೆ?
ಎಂಪಿ-5 ಸಬ್‌ಮಷೀನ್ ಗನ್‌ಗಳು, ರೈಫಲ್‌ಗಳು, ಲಘು ಮಷೀನ್ ಗನ್‌ಗಳು, ಎಕೆ-47ಗಳು, ಕಾರ್ನರ್ ಶಾಟ್, ಅಂಡರ್ ಬ್ಯಾರೆಲ್ ಗ್ರೆನೇಡ್ ಲಾಂಚರ್‌ಗಳು ಇತ್ಯಾದಿಗಳನ್ನು ಕಮಾಂಡೋಗಳು ಹೊಂದಿರಲಿದ್ದಾರೆ. ಇದಲ್ಲದೇ, ಕತ್ತಲಲ್ಲಿ ಸ್ಪಷ್ಟವಾಗಿ ಗೋಚರಿಸಲು ಕನ್ನಡಕಗಳು, ರೇಡಾರ್‌ಗಳು, ಇನ್-ವಾಲ್ ಸ್ಕ್ಯಾನರ್‌ಗಳು, ಶಸ್ತ್ರಾಸ್ತ್ರಗಳನ್ನು ಅಳವಡಿಸಿರುವ ರೊಬೋಟ್‌ಗಳನ್ನೂ ಒದಗಿಸಲಾಗಿದೆ. ಉಗ್ರರ ಸಮೂಹವನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಪ್ರತಿ ಕಮಾಂಡೋಗೆ ಇರುವಂತೆ ಸಜ್ಜುಗೊಳಿಸಲಾಗಿದೆ.
ಮೊದಲ ಬಾರಿಗೆ ನಿಯೋಜನೆ
ಜ.26ರ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಹೈಅಲರ್ಟ್ ಘೋಷಿಸಲಾಗಿದ್ದು, ಮೊದಲ ಬಾರಿಗೆ ಈ ತಂಡವನ್ನು ಪ್ರಮುಖ ಸ್ಥಳಗಳಲ್ಲಿ ನಿಯೋಜಿಸಲಾಗಿದೆ. ಯಾವುದೇ ದಾಳಿ ನಡೆದರೂ ಕ್ಷಣಮಾತ್ರದಲ್ಲಿ ಆ ಪ್ರದೇಶಕ್ಕೆ ತಲುಪುವಂತೆ, ರಾಷ್ಟ್ರ ರಾಜಧಾನಿಯ ಹೃದಯಭಾಗದಲ್ಲೇ ಸದಾಕಾಲ ಈ ಕಮಾಂಡೋಗಳು ಇರಲಿದ್ದಾರೆ.ಏ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್ ಟೀಕೆ
PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್ 2.0? ಇದರ ವೈಶಿಷ್ಟ್ಯವೇನು?
Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Gundlupete: ವಿದ್ಯುತ್ ತಂತಿಗೆ ಸಿಲುಕಿ ಮರಿಯಾನೆ ಸಾವು
Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ
Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್ ಟೀಕೆ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.