BJP: ಹರಿಯಾಣದಲ್ಲಿ 50 ದಿನ ಬಿಜೆಪಿ ರಥಯಾತ್ರೆ
ಜೆಜೆಪಿಯನ್ನು ಮೈತ್ರಿಕೂಟದಿಂದ ಹೊರಹಾಕಲು ಬಿಜೆಪಿ ತೀರ್ಮಾನ?
Team Udayavani, Nov 30, 2023, 1:06 AM IST
ಮುಂದಿನ ವರ್ಷದ ಎಪ್ರಿಲ್-ಮೇಯಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಈ ವೇಳೆ ಹರಿಯಾಣದಲ್ಲಿ ಬಿಜೆಪಿ ಎಲ್ಲ ಹತ್ತು ಸ್ಥಾನಗಳಿಗೆ ಏಕಾಂಗಿಯಾಗಿ ಸ್ಪರ್ಧಿಸುವ ಸಾಧ್ಯತೆಗಳಿವೆ. ಅದಕ್ಕೆ ಪೂರಕವಾಗಿ ಮುಂದಿನ ತಿಂಗಳು ಐವತ್ತು ದಿನಗಳ ಕಾಲ ಪ್ರತ್ಯೇಕವಾಗಿ ಬಿಜೆಪಿ ರಥಯಾತ್ರೆ ನಡೆಸಲು ಮುಂದಾಗಿದೆ. ಡಿ. 3ರಂದು ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ. ಆದಾದ ಬಳಿಕ ಹರಿಯಾಣಾದ್ಯಂತ ರಥಯಾತ್ರೆ ನಡೆಸಲಿದೆ.
ದುಷ್ಯಂತ್ ಚೌಟಾಲ ನೇತೃತ್ವದ ಜನನಾಯಕ ಜನತಾ ಪಕ್ಷ (ಜೆಜೆಪಿ) ಸದ್ಯ ಬಿಜೆಪಿಯ ಜತೆಗೆ ಮೈತ್ರಿ ಮಾಡಿಕೊಂಡು ಸರಕಾರ ನಡೆಸುತ್ತಿದೆ. ಈ ಯಾತ್ರೆಯ ಮೂಲಕ ಜೆಜೆಪಿಯ ಜತೆಗೆ ಮೈತ್ರಿ ಮಾಡಿಕೊಳ್ಳುವ ಇರಾದೆ ತನಗೆ ಇಲ್ಲ ಎಂಬ ಸಂದೇಶ ರವಾನಿಸುವ ಪ್ರಯತ್ನಕ್ಕೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಇದರ ಜತೆಗೆ ಹರಿಯಾಣದ ಬಿಜೆಪಿ ನಾಯಕರೂ ಕೂಡ ಏಕಾಂಗಿಯಾಗಿಯೇ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂಬ ಅಭಿಪ್ರಾಯವನ್ನೂ ವರಿಷ್ಠರಿಗೆ ಸಲ್ಲಿಸಿದ್ದಾರೆ. ಮೂಲಗಳ ಪ್ರಕಾರ ಡಿ. 5ರಂದು ಯಾತ್ರೆ ಶುರುವಾಗಲಿದೆ.
2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಎಲ್ಲ ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು. ಹೀಗಾಗಿ, ಜೆಜೆಪಿಗೆ ಜತೆಯಾಗಿ ಸ್ಪರ್ಧಿಸಲು ಅವಕಾಶ ಮಾಡಿಕೊಡುವ ಇರಾದೆ ಆ ಪಕ್ಷಕ್ಕೆ ಇಲ್ಲ. ರಾಜ್ಯದಲ್ಲಿ ಜಾಟ್ ಹೊರತಾಗಿರುವ ಮತಗಳನ್ನು ಕೇಂದ್ರೀಕರಿಸಿ, ಭದ್ರವಾಗಿ ಇರಿಸಿಕೊಳ್ಳಲು ಮುಂದಾಗಿದೆ. ಜಾಟ್ ಸಮುದಾಯದ ನಾಯಕರಾಗಿರುವ ಕಾಂಗ್ರೆಸ್‌ನ ಭೂಪಿಂದರ್ ಸಿಂಗ್ ಹೂಡಾ, ಜೆಜೆಪಿಯ ದುಷ್ಯಂತ್ ಚೌಟಾಲ, ಇಂಡಿಯನ್ ನ್ಯಾಶನಲ್ ಲೋಕದಳದ ಓಂ ಪ್ರಕಾಶ್ ಚೌಟಾಲ ಸಮುದಾಯದ ಶೇ.25 ಮತಗಳನ್ನು ಸೆಳೆಯಲು ಮುಂದಾಗಿದ್ದಾರೆ. ಬಿಜೆಪಿಯ 2024ರ ರಣತಂತ್ರವೂ ಅದೇ ಆಗಿದ್ದು, ಸಮುದಾಯದ ಮತವನ್ನು ಶೇ.75ರಷ್ಟು ಸೆಳೆಯಲು ಮುಂದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yasin Malik ವಿಚಾರಣೆಗೆ ತಿಹಾರ್ ಜೈಲಿನಲ್ಲೇ ಕೋರ್ಟ್ ರೂಂ: ಸುಪ್ರೀಂ
Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.