ಗೋದಾಮಿನಿಂದ 50 ಲಕ್ಷ ಮೌಲ್ಯದ ಪಾನ್ ಮಸಾಲಾ ಕಳ್ಳತನ: 12 ಗಂಟೆಯೊಳಗೆ ಆರೋಪಿ ಬಂಧನ
Team Udayavani, Nov 23, 2020, 8:24 PM IST
ಚಾಮರಾಜನಗರ: 50 ಲಕ್ಷ ರೂ. ಮೌಲ್ಯದ ಪಾನ್ ಮಸಾಲಾ ಪೊಟ್ಟಣಗಳನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಜಿಲ್ಲಾ ಪೊಲೀಸರು 12 ಗಂಟೆಯೊಳಗೆ ಪತ್ತೆ ಹಚ್ಚಿ, ಬಂಧಿಸಿ ಕದ್ದ ಮಾಲನ್ನು ವಶಪಡಿಸಿಕೊಂಡಿದ್ದಾರೆ.
ತಾಲೂಕಿನ ಕೋಳಿಪಾಳ್ಯ ಗ್ರಾಮದಲ್ಲಿ ಬವರ್‌ಲಾಲ್ ಎಂಬ ಸಗಟು ವ್ಯಾಪಾರಿ ಪಾನ್‌ಮಸಾಲಾ ಸಗಟು ಗೋದಾಮು ಹೊಂದಿದ್ದು, ನ. 22ರ ಮಧ್ಯರಾತ್ರಿ ಬಳಿಕ 10 ರಿಂದ 12 ಜನರಿದ್ದ ತಂಡವೊಂದು 2 ಗೂಡ್ಸ್ ವಾಹನಗಳಲ್ಲಿ ಬಂದು ಗೋದಾಮಿನ ಬೀಗ ಮುರಿದು ಅದರೊಳಗಿದ್ದ 50 ಲಕ್ಷ ರೂ. ಮೌಲದ್ಯ ಪಾನ್ ಮಸಾಲಾ ಕಳ್ಳತನ ಮಾಡಿದ್ದಾರೆಂದು ವ್ಯಾಪಾರಿ ಬವರ್‌ಲಾಲ್ ನಗರದ ಪೂರ್ವ ಠಾಣೆಯಲ್ಲಿ ದೂರು ನೀಡಿದ್ದರು.
ಈ ಕುರಿತು ಸೋಮವಾರ ಸಂಜೆ ನಗರದ ಪೂರ್ವ ಠಾಣೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ಪಿ ದಿವ್ಯಾ ಸಾರಾ ಥಾಮಸ್, ಸರ್ಕಲ್ ಇನ್‌ಸ್ಪೆಕ್ಟರ್ ನಂಜಪ್ಪ ಅವರ ನೇತೃತ್ವದಲ್ಲಿ, ಪೂರ್ವ ಠಾಣೆ ಪಿಎಸ್‌ಐ ರವಿಕುಮಾರ್ ಮತ್ತು ಲೋಕೇಶ್ ಮತ್ತು ಸಿಬ್ಬಂದಿಯ ತಂಡ ರಚಿಸಿ ಓರ್ವ ಆರೋಪಿಯನ್ನು ಬಂಧಿಸಿ ಎರಡು ಗೂಡ್ಸ್ ವಾಹನಗಳು ಹಾಗೂ ಅದರಲ್ಲಿದ್ದ ಪಾನ್ ಮಸಾಲಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು. ಇನ್ನೂ 10 11 ಮಂದಿ ಆರೋಪಿಗಳು ತಲೆಮರೆಸಿಕೊಂಡಿದ್ದು ಅವರ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಇದನ್ನೂ ಓದಿ:ಚಿಕ್ಕಮಗಳೂರು : ಪತ್ನಿಯಿಂದಲೇ ಪತಿ ಕೊಲೆ : ಪ್ರಿಯಕರನ ಜೊತೆ ಸೇರಿ ಗಂಡನ ಮರ್ಡರ್
ಆರೋಪಿ ತಮಿಳುನಾಡಿನ ತಿರುಪ್ಪೂರು ಜಿಲ್ಲೆ, ಧರ್ಮಪುರಿ ತಾಲೂಕಿನ ಅಬುತಲ್ಲಾ (21) ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.
ತನಿಖಾ ತಂಡದಲ್ಲಿ ಸಿಬ್ಬಂದಿ ಬಸವಣ್ಣ, ಜಯಪ್ಪ, ಶಾಂತರಾಜು, ಚಂದು, ಕೃಷ್ಣ, ಅಶೋಕ, ಕಿಶೋರ್, ಶ್ರೀನಿವಾಸ, ಚಂದ್ರಶೇಖರ್, ನಾಗರಾಜು, ಮಹದೇವಸ್ವಾಮಿ ಇದ್ದರು. ಪ್ರಕರಣ ದಾಖಲಾದ 12 ಗಂಟೆಯೊಳಗೆ ಆರೋಪಿ ಮತ್ತು ಕದ್ದ ಮಾಲನ್ನು ಪತ್ತೆ ಮಾಡಿದ ಪೂರ್ವ ಠಾಣೆಯ ಪೊಲೀಸ್ ತಂಡಕ್ಕೆ ನಗದು ಬಹುಮಾನ ನೀಡಲಾಗುವುದು ಎಂದು ಎಸ್ಪಿ ತಿಳಿಸಿದರು.
ಎಎಸ್ಪಿ ಅನಿತಾ ಹದ್ದಣ್ಣನವರ್, ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣೆಕೊಪ್ಪ ಸುದ್ದಿಗೋಷ್ಠಿಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.