ಈಶ್ವರಿ ಸಂಸ್ಥೆಗೆ 50 ವರ್ಷ
Team Udayavani, May 19, 2020, 4:35 AM IST
ಕನ್ನಡ ಚಿತ್ರರಂಗದಲ್ಲಿ ಈಶ್ವರಿ ನಿರ್ಮಾಣ ಸಂಸ್ಥೆ ಅಂದರೆ ಕನ್ನಡದ ಹೆಮ್ಮೆ ಡಾ.ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್, ರವಿಚಂದ್ರನ್ ಸೇರಿದಂತೆ ಹಲವು ನಟ, ನಟಿಯರ ಅದ್ಭುತ ಚಿತ್ರಗಳನ್ನು ನಿರ್ಮಿಸಿದ ಸಂಸ್ಥೆ ಅದು. ಈ ಈಶ್ವರಿ ಸಂಸ್ಥೆಇದೀಗ 50ರ ಸಂಭ್ರಮದಲ್ಲಿದೆ. ಹೌದು, ವೀರಸ್ವಾಮಿ ಅವರ ಈಶ್ವರಿ ಸಂಸ್ಥೆ ಹುಟ್ಟಿಕೊಂಡಿದ್ದು, ಎಪ್ಪರತ್ತರ ದಶಕದಲ್ಲಿ 1970 71 ರಲ್ಲಿ ಡಾ.ರಾಜಕುಮಾರ್ ಅಭಿನಯದ ಕುಲಗೌರವ ಚಿತ್ರದ ನಿರ್ಮಾಣ ಮೂಲಕ ಈಶ್ವರಿ ಸಂಸ್ಥೆಯನ್ನು ಹುಟ್ಟುಹಾಕಿದ ಹಿರಿಮೆ ಎನ್.ವೀರಸ್ವಾಮಿ ಅವರಿಗೆ ಸಲ್ಲುತ್ತದೆ.
ಆ ಬಳಿಕ ನಡೆದದ್ದು ಒಂದು ಇತಿಹಾಸ. ಅವರ ಈಶ್ವರಿ ಸಂಸ್ಥೆಯಲ್ಲಿ ತಯಾರಾದ ಸಿನಿಮಾಗಳು ಸೂಪರ್ ಹಿಟ್ ಆದವು. ಹಲವಾರು ಪ್ರಶಸ್ತಿ ಪುರಸ್ಕಾರಗಳು ಬಂದವು. ವಿಷ್ಣುವರ್ಧನ್, ಅಂಬರೀಶ್ ಅವರಂತಹ ಮೇರು ನಟರನ್ನು, ನಟಿಯರನ್ನು, ನಿರ್ದೇಶಕರನ್ನು ಹುಟ್ಟುಹಾಕಿದ ಕೀರ್ತಿ ಈಶ್ವರಿ ಸಂಸ್ಥೆಗೆ ಸಲ್ಲುತ್ತದೆ. ಹಾಗೆಯೇ 90ರ ದಶಕದ ಸಂಸ್ಥೆಯ ಹೆಗ್ಗಳಿಕೆ ಅವರ ಪುತ್ರ ರವಿಚಂದ್ರನ್ ಅವರಿಗೂ ಸಲುತ್ತದೆ. ಪ್ರೇಮಲೋಕ, ರಣಧೀರ, ಪುಟ್ನಂಜ, ರಾಮಾಚಾರಿ ಸೇರಿದಂತೆ ಹಲವು ಹಿಟ್ ಚಿತ್ರಗಳನ್ನು ಕೊಟ್ಟ ಹೆಮ್ಮೆ ರವಿಚಂದ್ರನ್ ಅವರದು. ಬರೀ ನಿರ್ಮಾಪಕರಾಗಿ ಅಲ್ಲದೆ ನಿರ್ದೇಶಕರಾಗಿ ನಟರಾಗಿಯೂ ರವಿಚಂದ್ರನ್ ಗುರುತಿಸಿಕೊಂಡರು.
ತಂದೆ ವೀರಸ್ವಾಮಿ ಹುಟ್ಟುಹಾಕಿದ ಈಶ್ವರಿ ಸಂಸ್ಥೆಯನ್ನು ಈಗಲೂ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಈಗ ಅವರ ಜೊತೆ ಪುತ್ರರಾದ ಮನುರಂಜನ್, ವಿಕ್ರಮ್ ಕೂಡ ಇದ್ದಾರೆ. ಈಶ್ವರಿ ನಿರ್ಮಾಣ ಸಂಸ್ಥೆ ಈಗ 50 ವರ್ಷ ಸಂಭ್ರಮದಲ್ಲಿದೆ. ಕನ್ನಡದಲ್ಲಿ ಕರುನಾಡ ಕುಳ್ಳನೆಂದೇ ಪ್ರೀತಿಯಿಂದ ಕರೆಸಿಕೊಳ್ಳುವ ದ್ವಾರಕೀಶ್ ಅವರ “ದ್ವಾರಕೀಶ್ ಚಿತ್ರ’ ಸಂಸ್ಥೆ ಕೂಡ 50 ವರ್ಷ ಪೂರೈಸಿದೆ. ಅವರ ನಿರ್ಮಾಣ ಸಂಸ್ಥೆಯಾದ “ದ್ವಾರಕೀಶ್ ಚಿತ್ರ’ ಬ್ಯಾನರ್‌ನಲ್ಲಿ ಡಾ.ರಾಜಕುಮಾರ್, ರಜನಿಕಾಂತ್, ಡಾ.ವಿಷ್ಣುವರ್ಧನ್, ಅಂಬರೀಶ್, ಶಂಕರ್‌ನಾಗ್, ಸುದೀಪ್, ಶಿವರಾಜಕುಮಾರ್ ಸೇರಿದಂತೆ ಹಲವು ಹೊಸಬರ ಸಿನಿಮಾಗಳನ್ನು ನಿರ್ಮಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.