Ayodhya: ರಾಮಮಂದಿರದ ಹಿಂದೆ 500 ವರ್ಷಗಳ ಪರಿಶ್ರಮ: ಪೇಜಾವರ ಶ್ರೀ
Team Udayavani, Dec 15, 2023, 9:19 PM IST
ಬೆಂಗಳೂರು: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುವ ಮೂಲಕ ಶತ-ಶತಮಾನಗಳ ಕನಸು ಈಗ ನನಸಾಗುತ್ತಿದೆ. ಸುಮಾರು 500 ವರ್ಷಗಳ ಪರಿಶ್ರಮ ಇದರ ಹಿಂದಿದೆ ಎಂದು ಉಡುಪಿಯ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥರು ಹೇಳಿದರು.
ಗಿರಿನಗರದಲ್ಲಿ ಶುಕ್ರವಾರ ಪೂರ್ಣಪ್ರಮತಿ ಪರಿಪೂರ್ಣ ಕಲಿಕಾ ತಾಣ (ಶಾಲೆ)ಹಮ್ಮಿಕೊಂಡಿದ್ದ ನೂತನ ಕಟ್ಟಡದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮೋಕ್ಷದಾಯಕ ಕ್ಷೇತ್ರಗಳಲ್ಲಿ ಅಯೋಧ್ಯೆ ಕೂಡ ಒಂದಾಗಿದೆ. ಅಲ್ಲೀಗ ಶ್ರೀರಾಮಂದಿರ ಭವ್ಯವಾಗಿ ಎದ್ದು ನಿಂತಿದೆ. ಸೂರ್ಯಚಂದ್ರರು ಇರುವವರೆಗೂ ರಾಮಮಂದಿರ ರಾಮ ಮಂದಿರವಾಗಿಯೇ ಉಳಿಯಬೇಕು. ನಾವು ನಾವಾಗಿಯೇ ಉಳಿದರೆ ಮಾತ್ರ ರಾಮಮಂದಿರ ರಾಮಮಂದಿರವಾಗಿ ಉಳಿಯುತ್ತದೆ. ಹಿಂದೂಗಳು ಹಿಂದೂಗಳಾಗಿಯೇ ಉಳಿಯಬೇಕು ಎಂದರೆ ನಾವಷ್ಟೇ ಅಲ್ಲ, ನಮ್ಮ ಮುಂದಿನ ಸಂತತಿ ಕೂಡ ಹಿಂದೂಗಳಾಗಿಯೇ ಉಳಿಯಬೇಕು ಎಂದರು.
ದೇಶದಲ್ಲಿ ಬದಲಾವಣೆ ಆರಂಭ
ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ದೇಶದಲ್ಲಿ ಈಗ ಬದಲಾವಣೆಯ ಕಾಲ ಆರಂಭವಾಗಿದೆ. ಈ ದೇಶ ತನ್ನ ಮೂಲ ಸಂಸ್ಕೃತಿಗೆ ಮರಳುತ್ತಿದೆ. ಯಾವುದನ್ನು ಕಳೆದುಕೊಂಡಂತೆ ಭಾಸವಾಗುತ್ತಿತೋ ಅದನ್ನು ಪಡೆದುಕೊಳ್ಳುವ ಹೊತ್ತು ಆರಂಭವಾಗಿದೆ. ಸುಮಾರು 500 ವರ್ಷಗಳ ಹಿಂದೆ ನಾವು ಕಳೆದುಕೊಂಡ ರಾಮ ಮಂದಿರವನ್ನು ಈಗ ಪಡೆಯುತ್ತಿದ್ದೇವೆ ಎಂದರು.
ಸಾಂಸ್ಕೃತಿಕವಾಗಿಯೂ ಭಾರತ ಬಲಾಡ್ಯವಾಗುತ್ತಿದೆ. ಈ ದೇಶದಲ್ಲಿ ಹಿಂದೂಗಳು ತಮ್ಮನ್ನ ತಾವು ಹಿಂದೂಗಳು ಎಂದು ಕರೆಯಲು ಹಿಂಜರಿಯುವಂತಹ ಪ್ರಮೇಯವೆ ಇಲ್ಲ. ಈ ಹಿಂದೆ ಭಾರತದ ತಲಾದಾಯ ಕುರಿತಂತೆ ಅಪಹಾಸ್ಯ ಮಾಡಲಾಗುತ್ತಿತ್ತು. ಆದರೆ ಕೋವಿಡ್ ಅಪ್ಪಳಿಸಿದ ಹಿನ್ನೆಲೆಯಲ್ಲಿ ಬಲಾಡ್ಯ ದೇಶಗಳ ಆರ್ಥಿಕ ವ್ಯವಸ್ಥೆ ಹಳಿ ತಪ್ಪಿತು. ಆದರೆ ಭಾರತ ಆರ್ಥಿಕ ಹಿಂಜರಿತದಿಂದ ಪಾರಾಯಿತು ಎಂಬುದನ್ನು ನಾವು ಮರೆಯುವಂತಿಲ್ಲ ಎಂದು ಸೂಲೆಬೆಲೆ ತಿಳಿಸಿದರು.
ಮುಳಬಾಗಿಲಿನ ಶ್ರೀ ಸುಜಯನಿಧಿ ತೀರ್ಥರು ಸಹಿತ ಪ್ರಮುಖರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.