54th IFFI; ಫಿಲ್ಮ್ ಬಜಾರ್ ಗಾಗಿ ಪ್ರತಿನಿಧಿ ನೋಂದಣಿ ಪ್ರಾರಂಭ
ಈ ವರ್ಷ ಪ್ರತಿನಿಧಿ ಸಂಖ್ಯೆ 10,000 ಕ್ಕೆ ತಲುಪುವ ನಿರೀಕ್ಷೆ...
Team Udayavani, Sep 13, 2023, 4:54 PM IST
ಪಣಜಿ: ಗೋವಾ ರಾಜಧಾನಿ ಪಣಜಿಯಲ್ಲಿ ನಡೆಯಲಿರುವ 54 ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಮತ್ತು ಫಿಲ್ಮ್ ಬಜಾರ್ ಗಾಗಿ ಪ್ರತಿನಿಧಿ ನೋಂದಣಿ ಪ್ರಾರಂಭವಾಗಿದೆ. ಕಳೆದ ವರ್ಷ 6,774 ಪ್ರತಿನಿಧಿಗಳು ಚಲನಚಿತ್ರೋತ್ಸವಕ್ಕೆ ನೋಂದಾಯಿಸಿಕೊಂಡಿದ್ದರು. ಈ ವರ್ಷ ಈ ಸಂಖ್ಯೆ 10,000 ಕ್ಕೆ ತಲುಪುವ ನಿರೀಕ್ಷೆ ಇದೆ ಎನ್ನಲಾಗಿದೆ.
ನ್ಯಾಶನಲ್ ಫಿಲ್ಮ್ ಡೆವಲಪ್‍ಮೆಂಟ್ ಕಾರ್ಪೊರೇಷನ್ ಆಯೋಜಿಸಿರುವ 54 ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ನವೆಂಬರ್ 20 ರಿಂದ 28 ರವರೆಗೆ ರಾಜಧಾನಿ ಪಣಜಿ ಮತ್ತು ರಾಜ್ಯದ ಇತರ ಸ್ಥಳಗಳಲ್ಲಿ ನಡೆಯಲಿದೆ. ಉತ್ಸವದ ಪ್ರತಿನಿಧಿ ನೋಂದಣಿ ಮತ್ತು ಉತ್ಸವದಲ್ಲಿ ನಡೆಯಲಿರುವ ಫಿಲ್ಮ್ ಬಜಾರ್ ಗಾಗಿ ಆನ್‍ಲೈನ್ ನೋಂದಣಿ ಕಾರ್ಯ ಬುಧವಾರದಿಂದ ಪ್ರಾರಂಭವಾಗಿದೆ. ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಅಧಿಕೃತ ವೆಬ್‍ಸೈಟ್ ಮೂಲಕ ನಿಯೋಗ ಮತ್ತು ಫಿಲ್ಮ್ ಬಜಾರ್ ನೋಂದಣಿಯನ್ನು ಆನ್‍ಲೈನ್‍ನಲ್ಲಿ ಮಾಡಬಹುದು. ಪ್ರತಿನಿಧಿ ನೋಂದಣಿಗಾಗಿ, ಚಲನಚಿತ್ರೋತ್ಸಕ್ಕೆ ನೋಂದಣಿಗೆ 1,180 ರೂ. ಶುಲ್ಕ ವಿಶಿಸಲಾಗುತ್ತದೆ.
ಫಿಲ್ಮ ಬಜಾರ್ ವಿಭಾಗದಲ್ಲಿ ಭಾಗವಹಿಸಲು ಬಯಸಿದರೆ, ವಿವಿಧ ವರ್ಗಕ್ಕೆ 18,000 ರಿಂದ 21,000 ರೂ. ಶುಲ್ಕವಿದೆ. ವಿದ್ಯಾರ್ಥಿಗಳು ಉತ್ಸವವನ್ನು ಉಚಿತವಾಗಿ ವೀಕ್ಷಿಸಬಹುದು. ಈ ಮಾಹಿತಿಯನ್ನು ಎನ್‍ಎಫ್‍ಡಿಸಿ ಮತ್ತು ಸ್ಥಳೀಯ ಸಂಘಟಕರು ಗೋವಾ ಎಂಟರ್‍ಟೈನ್‍ಮೆಂಟ್ ಸೊಸೈಟಿ ಮಾಹಿತಿ ನೀಡಿದ್ದಾರೆ
ಈ ವರ್ಷ ಕೆಲವು ಆಯ್ದ ಚಿತ್ರಗಳು ಮಡಗಾಂವ್‍ನ ರವೀಂದ್ರ ಭವನದಲ್ಲಿ ಪ್ರದರ್ಶನಗೊಳ್ಳುವ ಸಾಧ್ಯತೆ ಇದೆ. ಉತ್ಸವದ ಭಾರತೀಯ ಪನೋರಮಾ ವಿಭಾಗವು 26 ಚಲನಚಿತ್ರಗಳು ಮತ್ತು 23 ರಿಂದ 25 ನಾನ್ ಫಿಚ್ಚರ್ ಫಿಲ್ಮ್ ಚಲನಚಿತ್ರಗಳನ್ನು ಒಳಗೊಂಡಿರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IFFI Goa 2024: ಕೋಟ ಫ್ಯಾಕ್ಟರಿಯಿಂದ ಬೊಮಾನ್ ಇರಾನಿವರೆಗೆ
IFFI Goa 2024: ಚಿತ್ರ ನವಿಲಿಗೆ ಹೊಸ ಬಣ್ಣ; ಬೆಳಗ್ಗೆ ಚಿತ್ರಾವತಿ ಕಣ್ಣು ತೆರೆಯುವುದಣ್ಣ!
Emergency: ಹತ್ತಾರು ವಿಳಂಬದ ಬಳಿಕ ಕೊನೆಗೂ ಕಂಗನಾ ʼಎಮರ್ಜೆನ್ಸಿʼ ರಿಲೀಸ್ ಗೆ ಡೇಟ್ ಫಿಕ್ಸ್
Baaghi 4: ಟೈಗರ್ ಶ್ರಾಫ್ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್ ಔಟ್
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.