Kasaragod ನಕಲಿ ಆ್ಯಪ್ ಮೂಲಕ 55 ಲಕ್ಷ ರೂ. ಲಪಟಾವಣೆ; ದೂರು
Team Udayavani, Nov 24, 2023, 11:42 PM IST
ಕಾಸರಗೋಡು: ನಕಲಿ ಆ್ಯಪ್ ಮೂಲಕ ಬ್ಯಾಂಕ್ ಖಾತೆಯಿಂದ 55 ಲಕ್ಷ ರೂ. ಲಪಟಾಯಿಸಿದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ನೀಲೇಶ್ವರ ಚರಪುರಂ ಅಲನ್ ಕೇಳನ್ ನಿವಾಸಿ ಕೆ.ಜೆ. ಜೋಸೆಫ್ ಈ ಬಗ್ಗೆ ನೀಲೇಶ್ವರ ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಪೊಲೀಸರು ಕೇಸು ದಾಖಲಿಸಿ ಸೈಬರ್ ಸೆಲ್ನ ಸಹಾಯದಿಂದ ತನಿಖೆ ನಡೆಸುತ್ತಿದ್ದಾರೆ.
ನಕಲಿ ಆ್ಯಪ್ ತಯಾರಿಸಿ ತನ್ನ 2 ಬ್ಯಾಂಕ್ ಖಾತೆಗಳಿಂದ ಹಣ ಎಗರಿಸಲಾಗಿದೆ. ಕಳೆದ ಎಪ್ರಿಲ್ 7ರಂದು ತನ್ನ ಎರಡು ಬ್ಯಾಂಕ್ ಖಾತೆಗಳಿಂದಾಗಿ 1,11,300 ರೂ. ಹಾಗೂ ಅದರ ಬೆನ್ನಲ್ಲೇ 1,18,000 ರೂ. ಎಗರಿಸಲಾಗಿದೆ.
ಅನಂತರ ತನ್ನ ಖಾಯಂ ಠೇವಣಿ ಖಾತೆಯಿಂದ ಇನ್ನೊಂದು ಖಾತೆಗೆ ಎರಡು ಬಾರಿಯಾಗಿ ತಲಾ 3,25,000 ರೂ. ನಂತೆಯೂ ಟ್ರಾನ್ಸ್ಫರ್ ಮಾಡಲಾಗಿದೆ. ಹೀಗೆ ಒಟ್ಟು 55 ಲಕ್ಷ ರೂ. ತನ್ನ ಬ್ಯಾಂಕ್ ಖಾತೆಯಿಂದ ಎಗರಿಸಿದ್ದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.