Investment: ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕಕ್ಕೆ 5ನೇ ಸ್ಥಾನ
- 2022-23ರಲ್ಲಿ ದೇಶಾದ್ಯಂತ ಹೊಸ ಹೂಡಿಕೆಯಲ್ಲಿ ಶೇ.80 ಹೆಚ್ಚಳ
Team Udayavani, Aug 20, 2023, 8:07 PM IST
ನವದೆಹಲಿ: 2022-23ರಲ್ಲಿ ದೇಶಾದ್ಯಂತ ಆಗಿರುವ ಒಟ್ಟಾರೆ ಬಂಡವಾಳ ಹೂಡಿಕೆ ಪ್ರಸ್ತಾಪ(ಬ್ಯಾಂಕ್ ನೆರವಿನ ಹೂಡಿಕೆ)ಗಳ ಪೈಕಿ ಅರ್ಧಕ್ಕೂ ಹೆಚ್ಚು ಪಾಲನ್ನು ಕರ್ನಾಟಕ ಸೇರಿದಂತೆ 5 ರಾಜ್ಯಗಳು ಹಂಚಿಕೊಂಡಿವೆ.
ಈ ಅವಧಿಯಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ಬಡ್ಡಿ ದರ ಹೆಚ್ಚಳವಾಗಿದ್ದರೂ, ಒಟ್ಟಾರೆ ಹೂಡಿಕೆ ಪ್ರಸ್ತಾಪಗಳ ಪ್ರಮಾಣ ಶೇ.79.50ರಷ್ಟು ಏರಿಕೆಯಾಗಿವೆ. 2014-15ರ ನಂತರದಲ್ಲಿ ಆಗಿರುವ ಅತಿ ಹೆಚ್ಚಿನ ಹೂಡಿಕೆ ಪ್ರಸ್ತಾಪ ಇದಾಗಿದ್ದು, ದಾಖಲೆಯ ಬರೋಬ್ಬರಿ 3,52,624 ಕೋಟಿ ರೂ.ಗಳ ಪ್ರಸ್ತಾಪಗಳು ಬಂದಿವೆ. ಈ ಪೈಕಿ ಉತ್ತರಪ್ರದೇಶ, ಗುಜರಾತ್, ಒಡಿಶಾ, ಮಹಾರಾಷ್ಟ್ರ ಮತ್ತು ಕರ್ನಾಟಕದ ಪಾಲೇ 2,01,700 ಕೋಟಿ ರೂ. ಎಂದು ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಬಿಡುಗಡೆ ಮಾಡಿರುವ ವರದಿ ತಿಳಿಸಿದೆ.
2022-23ರಲ್ಲಿ ಸುಮಾರು 547 ಯೋಜನೆಗಳಿಗೆ(2,66,547 ಕೋಟಿ ರೂ. ವೆಚ್ಚ) ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಂದ ಆರ್ಥಿಕ ನೆರವು ದೊರೆತಿದ್ದರೆ, 2021-22ರಲ್ಲಿ 401 ಯೋಜನೆಗಳಿಗೆ(1,41,976 ಕೋಟಿ ರೂ. ವೆಚ್ಚ) ಬ್ಯಾಂಕುಗಳಿಂದ ಹಣಕಾಸು ಸಹಾಯ ದೊರೆತಿದೆ. ಅಂದರೆ, ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಮೊತ್ತದಲ್ಲಿ ಶೇ.87.7ರಷ್ಟು ಏರಿಕೆ ಕಂಡುಬಂದಿದೆ ಎಂದೂ ಆರ್‌ಬಿಐ ಹೇಳಿದೆ.
ಟಾಪ್ 5 ರಾಜ್ಯಗಳು ಮತ್ತು ಹೂಡಿಕೆ ಪ್ರಮಾಣ
- ಉತ್ತರಪ್ರದೇಶ – ಶೇ.16.2
- ಗುಜರಾತ್- ಶೇ.14
- ಒಡಿಶಾ – ಶೇ.11.8
- ಮಹಾರಾಷ್ಟ್ರ- ಶೇ.7.9
- ಕರ್ನಾಟಕ -ಶೇ.7.3
ಅತಿ ಕಡಿಮೆ ಹೂಡಿಕೆ ಪಡೆದ ರಾಜ್ಯಗಳು
- ಕೇರಳ – ಶೇ.0.9
- ಗೋವಾ – ಶೇ. 0.8
- ಅಸ್ಸಾಂ- ಶೇ.0.7
– 2022-23ರ ಬಂಡವಾಳ ವೆಚ್ಚ 8 ವರ್ಷಗಳಲ್ಲೇ ಅತ್ಯಧಿಕ
– ಹೊಸ ಹೂಡಿಕೆ ಯೋಜನೆಗಳಲ್ಲಿ ಶೇ.80ರಷ್ಟು ಹೆಚ್ಚಳ
– ಈ ಪೈಕಿ 5 ರಾಜ್ಯಗಳ ಪಾಲು ಶೇ.57
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.