ತಿಮ್ಮಕ್ಕ ಸೇರಿ 6 ಮಂದಿಗೆ ಗೌ.ಡಾಕ್ಟರೇಟ್?
Team Udayavani, Feb 12, 2020, 3:07 AM IST
ಕಲಬುರಗಿ: ಕಳೆದ ವರ್ಷ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ರಾಗಿರುವ ಸಾಲು ಮರದ ತಿಮ್ಮಕ್ಕ ಸೇರಿ ಆರು ಗಣ್ಯ ರಿಗೆ ಇಲ್ಲಿನ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಲು ಸಿದ್ಧತೆ ನಡೆಸಿದೆ.
ಸಾಲು ಮರದ ತಿಮ್ಮಕ್ಕ ಸೇರಿ ಹಿರಿಯ ಸಾಹಿತಿಗಳಾದ ಡಾ.ಚೆನ್ನವೀರ ಕಣವಿ, ದೇವನೂರ ಮಹಾದೇವ, ಡಾ.ಎಸ್.ಎಲ್.ಭೈರಪ್ಪ, ಕಲಬುರಗಿ ಮ.ಗು. ಬಿರಾದಾರ, ಇಸ್ರೋ ಮುಖ್ಯಸ್ಥ ಕೆ.ಶಿವನ್ ಅವರ ಸಾಧನೆ ವಿವರಣೆಯೊಳಗೊಂಡ ಶಿಫಾರಸು ಪಟ್ಟಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ ಅವರಿಗೆ ಸಲ್ಲಿಸಲಾಗಿದೆ. ಮಾರ್ಚ್‌ನಲ್ಲಿ ನಡೆಯುವ ವಿವಿ ಐದನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲು ಉದ್ದೇಶಿಸಲಾಗಿದೆ. ಘಟಿಕೋತ್ಸವಕ್ಕೆ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಆಗಮಿಸಿ ಭಾಷಣ ಮಾಡುವ ಸಾಧ್ಯತೆಗಳಿವೆ.
ದಶಕದ ಸಂಭ್ರಮದಲ್ಲಿ ವಿವಿ: 2009ರಲ್ಲಿ ಸಂಸತ್ತಿನ ಕಾಯ್ದೆಯಡಿ ಸ್ಥಾಪಿತವಾದ 16 ವಿವಿಗಳ ಪೈಕಿ ಕರ್ನಾ ಟಕ ಕೇಂದ್ರೀಯ ವಿವಿ ಒಂದಾಗಿದ್ದು, ಈಗ ದಶಕದ ಸಂಭ್ರಮದಲ್ಲಿದೆ. 2009ರಲ್ಲಿ ಕೇಂದ್ರೀಯ ವಿವಿ ಶೈಕ್ಷಣಿಕ ಚಟುವಟಿಕೆ ಕಲಬುರಗಿ ವಿವಿಯಲ್ಲಿ ತಾತ್ಕಾಲಿಕ ವಾಗಿ ಆರಂಭವಾಗಿ 2010ರಲ್ಲಿ ಕಡಗಂಚಿ ಬಳಿ ವಿಶಾಲ ವಾದ 654 ಎಕರೆ ಭೂಮಿಯಲ್ಲಿ ವಿವಿ ಸ್ಥಾಪಿಸಲು ಭೂಮಿ ಪೂಜೆ ನೆರವೇರಿಸಲಾಯಿತು.
2015, ಡಿ.22ರಂದು ನಡೆದಿದ್ದ ವಿವಿ 2ನೇ ಘಟಿ ಕೋತ್ಸವಕ್ಕೆ ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆಗಮಿಸಿ ಘಟಿಕೋತ್ಸವ ಭಾಷಣ ಮಾಡಿದ್ದರು. 2012ರ ಜನವರಿಯಲ್ಲಿ ಪ್ರಥಮ ಘಟಿಕೋತ್ಸವ ನಡೆದ ನಂತರ, 2ನೇ ಘಟಿಕೋತ್ಸವ 3 ವರ್ಷಗಳ ನಂತರ 2015ರಲ್ಲಿ ನಡೆಯಿತು. 2019, ಫೆ.28ರಂದು 4ನೇ ಘಟಿ ಕೋತ್ಸವ ನಡೆದಿತ್ತು. ಈಗ 5ನೇ ಘಟಿಕೋತ್ಸವ ನಡೆಯಲಿದೆ.
ಕುಲಪತಿಗಳ ನಿವೃತ್ತಿ: ಕಳೆದ 5 ವರ್ಷಗಳಿಂದ ಕೇಂದ್ರೀಯ ವಿವಿ ಕುಲಪತಿಗಳಾಗಿರುವ ಪ್ರೊ.ಎಚ್.ಎಂ. ಮಹೇಶ್ವರಯ್ಯ ಬರುವ ಏಪ್ರಿಲ್‌ನಲ್ಲಿ ನಿವೃತ್ತಿ ಯಾಗುತ್ತಿದ್ದಾರೆ. ಮಹೇಶ್ವರಯ್ಯ ಕುಲಪತಿಗಳಾಗಿ ಬಂದ ಮೇಲೆ ಶೈಕ್ಷಣಿಕ ಸುಧಾರಣೆಗೆ ಹಲವಾರು ಕ್ರಮ ಕೈಗೊಂಡಿದ್ದಾರೆ. ಕಳೆದ ವರ್ಷ ಐವರು ಗಣ್ಯರಿಗೆ ಗೌರವ ಡಾಕ್ಟರೇಟ್ ನೀಡಿರುವುದು ಮೆಚ್ಚುಗೆಗೆ ಪಾತ್ರವಾಗಿತ್ತು.
ಗೌರವ ಡಾಕ್ಟರೇಟ್‌ಗೆ ಭಾಜನರಾದವರು: ಇದುವರೆಗೆ ನಡೆದಿರುವ ನಾಲ್ಕು ಘಟಿಕೋತ್ಸವಗಳ ಪೈಕಿ 2 ಘಟಿಕೋತ್ಸವಗಳಲ್ಲಿ ಗೌರವ ಡಾಕ್ಟರೇಟ್ ನೀಡಿದರೆ ಉಳಿದೆರಡು ಅಂದರೆ ಮೊದಲ ಸಲ 3 ಹಾಗೂ ತದನಂತರ ಐವರು ಸೇರಿ ಒಟ್ಟಾರೆ 8 ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿದೆ. 2012ರಲ್ಲಿ ನಡೆದಿದ್ದ ಪ್ರಥಮ ಘಟಿಕೋತ್ಸವದಲ್ಲಿ ಡಾ.ಯು.ಆರ್.ಅನಂತಮೂರ್ತಿ, ನಂದನ ನಿಲೇಕಣಿ ಹಾಗೂ ಗೋವರ್ಧನ ಮೇಹ್ತಾ ಅವರಿಗೆ ನೀಡಲಾಗಿತ್ತು.
2018ರ ಜುಲೈನಲ್ಲಿ ನಡೆದ 2ನೇ ಘಟಿಕೋತ್ಸವದಲ್ಲಿ ನಾಡೋಜ, ಖ್ಯಾತ ಕಲಾವಿದ ಡಾ.ಜೆ.ಎಸ್. ಖಂಡೇರಾವ್, ಚಿಂತಕ ಡಾ.ಸಿದ್ಧಲಿಂಗಯ್ಯ, ಕ್ಷಿಪಣಿ ಮಹಿಳೆ ಡಾ.ಟೆಸ್ಟಿ ಥಾಮಸ್, ಪ್ರಸಿದ್ಧ ಭೌತ ವಿಜ್ಞಾನಿ ಡಾ.ಬಾಲಸುಬ್ರಹ್ಮಣ್ಯಂ ಅಯ್ಯರ್, ವಿಮರ್ಶಕ ಡಾ.ಎಂ.ಚಿದಾನಂದಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿತ್ತು. 3ನೇ ಹಾಗೂ ಕಳೆದ ವರ್ಷ ನಡೆದ 4ನೇ ಘಟಿಕೋತ್ಸವದಲ್ಲಿ ಯಾರೊಬ್ಬರಿಗೂ ಗೌರವ ಡಾಕ್ಟರೇಟ್ ನೀಡಿರಲಿಲ್ಲ.
* ಹಣಮಂತರಾವ ಭೈರಾಮಡಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
Belagavi;ಕಾಂಗ್ರೆಸ್ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು
Belagavi: ನಕಲಿ ಗಾಂಧಿಗಳನ್ನು ಮೆಚ್ಚಿಸಲು ಕನ್ನಡಿಗರ ತೆರಿಗೆ ಹಣ ಪೋಲು: ಜಗದೀಶ್ ಶೆಟ್ಟರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
RSS: ಮೋಹನ್ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್ ಪತ್ರಿಕೆ ಆಕ್ಷೇಪ
Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್ ಮಾತು
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.