ಗೋವಾದ ಅಭಯಾರಣ್ಯಗಳಲ್ಲಿ 6 ಹುಲಿಗಳು: ರಕ್ಷಣೆ ಅಗತ್ಯ
ದನಕರುಗಳ ರಕ್ಷಣೆಯ ಹೆಸರಲ್ಲಿ 4 ಹುಲಿಗಳ ಹತ್ಯೆ
Team Udayavani, Apr 18, 2022, 6:39 PM IST
ಪಣಜಿ: ಗೋವಾದ ಮಹದಾಯಿ ಹಾಗೂ ಮೋಲೆಂ ಅಭಯಾರಣ್ಯದಲ್ಲಿ ಹುಲಿಗಳು ಇರುವ ಪುರಾವೆಯಿದೆ. ಮಹದಾಯಿ ಅಭಯಾರಣ್ಯದಲ್ಲಿ 3, ಮೋಲೆಂ ಅಭಯಾರಣ್ಯದಲ್ಲಿ 3 ಹುಲಿಗಳು ಇರುವುದು ಖಚಿತವಾಗಿದೆ. ಈ 6 ಹುಲಿಗಳ ರಕ್ಷಣೆ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ನಾನು ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದು ಗೋವಾ ರಾಜ್ಯ ಪರಿಸರ ಹೋರಾಟಗಾರ ರಾಜೇಂದ್ರ ಕೇರಕರ್ ಹೇಳಿದ್ದಾರೆ.
ಪಣಜಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ಕಳೆದ 12 ವರ್ಷದಲ್ಲಿ ನಾವು 5 ಹುಲಿಗಳನ್ನು ಕಳೆದುಕೊಂಡಿದ್ದೇವೆ. 2009 ರಲ್ಲಿ 1, 2020 ರಲ್ಲಿ ದನಕರುಗಳ ರಕ್ಷಣೆಯ ಹೆಸರಲ್ಲಿ 4 ಹುಲಿಗಳ ಹತ್ಯೆ ನಡೆದಿದೆ. ಇದರಿಂದಾಗಿ ಗೋವಾದಲ್ಲಿ ಹುಲಿಗಳು ಸುರಕ್ಷಿತವಾಗಿಲ್ಲ ಎಂಬುದು ಕಂಡುಬರುತ್ತದೆ. ಇದರಿಂದಾಗಿ ಹುಲಿಗಳ ರಕ್ಷಣೆ ಅಗತ್ಯವಿದೆ. ಇದಕ್ಕಾಗಿ ಯಾವುದಾದರೂ ಯೋಜನೆ ಅಥವಾ ವ್ಯವಸ್ಥೆ ಕಲ್ಪಿಸುವ ಅಗತ್ಯವಿದೆ. ನಾನು ರಾಜ್ಯ ಸರ್ಕಾರಕ್ಕೆ ಈ ಕುರಿತಂತೆ ಪತ್ರ ಬರೆಯುತ್ತೇನೆ. ಮಹದಾಯಿ ಮತ್ತು ಮೋಲೆಂ ಅಭಯಾರಣ್ಯದಲ್ಲಿ ಹುಲಿಗಳಿರುವುದು ಖಚಿತವಾಗಿದೆ ಎಂದು ಪರಿಸರ ಹೋರಾಟಗಾರ ರಾಜೇಂದ್ರ ಕೇರಕರ್ ಹೇಳಿದರು.
ರಾಜ್ಯದಲ್ಲಿ ಎಷ್ಟು ಹುಲಿಗಳಿವೆ? ಎಂಬ ಕುರಿತಂತೆ ಈ ಹಿಂದೆ ಸರ್ವೆ ನಡೆದಿದೆ. ಇದೀಗ ಮತ್ತೆ ಸರ್ವೆ ನಡೆಯಲಿದೆ. ಈ ಸರ್ವೆಯ ನಂತರ ಗೋವಾದಲ್ಲಿ ಎಷ್ಟು ಹುಲಿಗಳಿವೆ ಎಂಬುದು ಮತ್ತೆ ಖಚಿತವಾಗಲಿದೆ. ಪುರಾವೆಯ ಅನುಸಾರ ರಾಜ್ಯದ ಅಭಯಾರಣ್ಯದಲ್ಲಿ ಸದ್ಯ 6 ಹುಲಿಗಳಿವೆ. ಇದನ್ನು ಹೊರತುಪಡಿಸಿ ಸತ್ತರಿ, ಸಾಂಗೆ ಧಾರಾಬಾಂದೊಡಾ ಅರಣ್ಯದಲ್ಲಿ ಹುಲಿಗಳಿರುವ ಸಾಧ್ಯತೆಯಿದೆ. ಇದರಿಂದಾಗಿ ರಾಜ್ಯದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಿರುವ ಸಾಧ್ಯತೆಯಿದೆ ಎಂದು ರಾಜೇಂದ್ರ ಕೇರಕರ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chennai: ನಟಿ ಕಸ್ತೂರಿ ಶಂಕರ್‌ಗೆ ನ.29ರ ವರೆಗೆ ನ್ಯಾಯಾಂಗ ಬಂಧನ
Maharashtra: ಬಿಜೆಪಿ ನಾಯಕಿ ನವನೀತ್ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್ ದಾಖಲು
Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು
Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್ ನೋಟಿಸ್
Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.