Ayodhya: ರಾಮನಿಗೆ ದೇಸಿ ಗೋವಿನ 600 ಕೆ.ಜಿ. ತುಪ್ಪ
Team Udayavani, Dec 9, 2023, 12:17 AM IST
ಪ್ರಭು ಶ್ರೀರಾಮನಿಗೆ ಸಮರ್ಪಿಸಲೆಂದೇ ದೇಶದ ಮೂಲೆ-ಮೂಲೆಗಳಿಂದ ಜನರು ಒಡವೆ, ವಸ್ತ್ರ, ವಸ್ತುಗಳನ್ನು ಅಯೋಧ್ಯೆಗೆ ತಲುಪಿಸುತ್ತಿದ್ದಾರೆ. ಭುವಿ ಒಡೆಯನ ಪಟ್ಟಾಭಿಷೇಕಕ್ಕೆ ದೇಶವೇ ಕಾದು ಕುಳಿತಿದೆ. ಈ ಅಭೂತಪೂರ್ವ ಸಂಭ್ರಮದಲ್ಲಿ ಅಖಂಡ ದೀಪವನ್ನು ಬೆಳಗಲು ಕಳೆದ 9 ವರ್ಷಗಳಿಂದ ಕಾದಿದ್ದ ದೇಸಿ ಗೋವುಗಳ 600 ಕೆ.ಜಿ. ಅಪ್ಪಟ ತುಪ್ಪ ತುಂಬಿದ ಕುಂಭ ಗಳನ್ನು ಅಯೋಧ್ಯೆ ತಲುಪಿಸಲಾಗಿದ್ದು, ಮಹಾ ಯಜ್ಞ, ಪೂಜೆ, ಆರತಿಗೆ ಈ ಘೃತ ಬಳಕೆಯಾಗಲಿದೆ.
9 ವರ್ಷ ಕಾದ 108 ಕುಂಭ
ಜೋಧಪುರದ ದೇಸಿ ಹಸುಗಳ ಹಾಲನ್ನು ಬಳಸಿ 9 ವರ್ಷಗಳಿಂದ ಸಂಗ್ರಹಿಸಲಾಗಿರುವ ತುಪ್ಪವನ್ನು 108 ಕುಂಭದಲ್ಲಿ ತುಂಬಿಸಿ ಜೋಧಪುರದಿಂದ ಅಯೋಧ್ಯೆಗೆ ತರಲಾಗಿದೆ. ಜೋಧಪುರದ ಸಂತ ಮಹರ್ಷಿ ಸಾಂದೀಪಾನಿ ಮಹಾರಾಜರ ನೇತೃತ್ವದಲ್ಲಿ ತುಪ್ಪ ತುಂಬಿದ ಕುಂಭಗಳು 5 ಎತ್ತಿನಗಾಡಿಗಳಲ್ಲಿ ಬಂದಿದ್ದು, ಪಟ್ಟಾಭಿಷೇಕಕ್ಕೂ ಮುನ್ನ ಹಚ್ಚಲಿರುವ ಅಖಂಡ ದೀಪಕ್ಕೆ ಇದು ಸಮರ್ಪಣೆಯಾಗಲಿದೆ. ಪ್ರತೀ 3 ವರ್ಷಕ್ಕೊಮ್ಮೆ ವಿವಿಧ ಔಷಧೀಯ ಗುಣವುಳ್ಳ ಗಿಡಮೂಲಿಕೆಗಳನ್ನು ತುಪ್ಪದ ಮಡಕೆಯಲ್ಲಿ ಹಾಕಿಟ್ಟು , ಗುಣಮಟ್ಟ ಕಾಯ್ದುಕೊಂಡು, ಅನಂತರ ಮತ್ತೂಂದು ಮಡಕೆಯಲ್ಲಿ ಶೋಧಿಸಿ ಸಂಗ್ರಹಿಸಲಾಗಿರುವುದು ಇದರ ವಿಶೇಷ .
ಗೀತೆ ಕೇಳಿದ ಗೋವಿನ ತುಪ್ಪ ಮೊದಲ ಆರತಿಗೆ
ದಿನದ 24 ಗಂಟೆಯೂ ಭಗವದ್ಗೀತೆಯನ್ನು ಕೇಳುತ್ತಿದ್ದ ಕಾಳಿ ಕಪಾಲಿ ಎನ್ನುವ ಗೋವಿನ ಹಾಲಿನಿಂದ ವಿಶೇಷವಾಗಿ ತುಪ್ಪ ತಯಾರಿಸಲಾಗಿದೆ. ಆ ವಿಶೇಷ ಕುಂಭದ ತುಪ್ಪವನ್ನು ರಾಮಲಲ್ಲಾನ ಪಟ್ಟಾಭಿಷೇಕದಂದು ನಡೆಯಲಿರುವ ಮೊದಲ ಆರತಿಗೆ ಬಳಕೆ ಮಾಡಲಾಗುತ್ತಿದೆ. ಅಲ್ಲದೇ ನೈವೇದ್ಯ, ಪಂಚಾಮೃತಕ್ಕೂ ಇದೇ ತುಪ್ಪ ಬಳಸಲು ಉದ್ದೇಶಿಸಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.