ಕ್ಯಾನ್ಸರ್ ಗೆದ್ದ ನಟ ಸಂಜಯ್ ದತ್! ಸ್ನೇಹಿತ ರಾಜ್ ಬನ್ಸಾಲ್ ಸುಳಿವು
Team Udayavani, Oct 19, 2020, 4:36 PM IST
ಮಣಿಪಾಲ: ನಟ ಸಂಜಯ್ ದತ್ ಅವರು ಕ್ಯಾನ್ಸರ್ ಅನ್ನು ಮಣಿಸಿದ್ದಾರೆ. ಅವರ ಆಪ್ತ ಸ್ನೇಹಿತ, ವಿಶ್ಲೇಷಕ ರಾಜ್ ಬನ್ಸಾಲ್ ಈ ಮಾಹಿತಿ ನೀಡಿದ್ದು, ಕೋಕಿಲಾಬೆನ್ ಆಸ್ಪತ್ರೆಯ ಮೂಲಗಳು ಇದನ್ನು ಖಚಿತಪಡಿಸಿದೆ. ಸಂಜಯ್ ದತ್ತ್ ಕುಟುಂಬ ಇಂದು ಸಂಜೆಯೊಳಗೆ ಈ ಮಾಹಿತಿಯನ್ನು ಬಹಿರಂಗಪಡಿಸುವ ಸಾಧ್ಯತೆ ಇದೆ.
ಸೋಮವಾರ 61 ವರ್ಷದ ಸಂಜು ಅವರ ಪೊಸಿಟ್ರಾನ್ ಎಮಿಷನ್ ಟೊಮೊಗ್ರಫಿ (ಪಿಇಟಿ) ( Positron Emission Tomography) ವರದಿ ಹೊರಬಂದಿದ್ದು, ಅದರಲ್ಲಿ ಅವರು ಕ್ಯಾನ್ಸರ್ ಮುಕ್ತರು ಎಂದು ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ. ಪಿಇಟಿ ಸ್ಕ್ಯಾನ್ ಅನ್ನು ಕ್ಯಾನ್ಸರ್‌ನ ಅಧಿಕೃತ ಪರೀಕ್ಷೆ ಎಂದು ಪರಿಗಣಿಸಲಾಗುತ್ತದೆ. ಸಂಜು ಅವರ ಆಪ್ತ ಸ್ನೇಹಿತ ರಾಜ್ ಬನ್ಸಾಲ್ ಅವರಿಬ್ಬರ ಫೋಟೋ ಹಾಕಿ “So happy for you Sanjuʼ ಎಂದು ಟ್ವೀಟ್ ಮಾಡಿದ್ದಾರೆ.
ಇತ್ತೀಚೆಗೆ ಸಂಜಯ್ ದತ್ ತಮ್ಮ ಅನಾರೋಗ್ಯದ ಕುರಿತು ಮೊದಲ ಬಾರಿಗೆ ವೀಡಿಯೋದಲ್ಲಿ ಮಾತನಾಡಿದ್ದು, ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಅಲೀಮ್ ಹಕೀಮ್ ಅವರು ಸಂಜು ಅವರ ವೀಡಿಯೋವನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ನಾನು ಶೀಘ್ರದಲ್ಲೇ ಈ ಕ್ಯಾನ್ಸರ್‌ನಿಂದ ಹೊರಬರುತ್ತೇನೆ” ಎಂದು ಹೇಳಿದ್ದರು.
So happy for you Sanju pic.twitter.com/hJ00kUjy07
— RAJ BANSAL (@rajbansal9) October 19, 2020
ಇತ್ತೀಚೆಗೆ ಸಡಕ್ 2ನಲ್ಲಿ ಕಾಣಿಸಿಕೊಂಡ ಈ ನಟ ಕನ್ನಡದ ಬಹುನಿರೀಕ್ಷಿತ ಚಿತ್ರ ಕೆಜಿಎಫ್ ಚಾಪ್ಟರ್ 2 ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನವೆಂಬರ್‌ನಲ್ಲಿ ಶೂಟಿಂಗ್ ಪ್ರಾರಂಭವಾಗುತ್ತಿದ್ದಂತೆ ನಾನು ಸೆಟ್ಟಿನಲ್ಲಿರಬೇಕು. ಸೆಟ್‌ಗಳಲ್ಲಿ ಇರುವುದು ನನಗೆ ಸಂತೋಷ ತರುತ್ತದೆ. ಡಬ್ಬಿಂಗ್ ಕೂಡ ನಡೆಯಬೇಕಿದೆ. ಹಾಗಾಗಿ ನಾನು ಶೀಘ್ರ ಹಿಂತಿರುಗಬೇಕು ಎಂದು ಹೇಳಿದ್ದರು.
ಆಗಸ್ಟ್ 8ರಂದು ಸಂಜಯ್ ದತ್ ಅವರಲ್ಲಿ ಉಸಿರಾಟದ ತೊಂದರೆ ಕಾಣಸಿಕೊಂಡ ಪರಿಣಾಮ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಅವರು ಕೆಲವು ಪರೀಕ್ಷೆಗಳಿಗೆ ಒಳಗಾಗಿದ್ದರು. ಮೂರು ದಿನಗಳ ಬಳಿಕ ಆಗಸ್ಟ್ 11 ರಂದು ಅವರು ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ.
ವರದಿಗಳ ಪ್ರಕಾರ ಸಂಜಯ್ ದತ್ತ್ ಅವರು ನಾಲ್ಕನೇ ಹಂತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಅವರ ಕುಟುಂಬ ಇದನ್ನು ಬಹಿರಂಗೊಳಿಸಿರಲಿಲ್ಲ. ಆದರೆ ಅಷ್ಟರಲ್ಲೇ ಮಾಧ್ಯಗಳಲ್ಲಿ ಸುದ್ದಿ ಪ್ರಸರಣಗೊಂಡಿತ್ತು. ದತ್ ಅವರು ಕ್ಯಾನ್ಸರ್ ಗೆದ್ದಿರುವುದನ್ನು ದೈನಿಕ್ ಭಾಸ್ಕರ್ ವರದಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.