ರಾಜಧಾನಿಗೆ ಬಂಪರ್‌…ಬಿಜೆಪಿಗೆ ಬಲ…

ಬೆಂಗಳೂರು ನಗರಕ್ಕೆ 7 ಸಚಿವರು; ಮತ್ತೆ ಬಿಬಿಎಂಪಿ ಚುನಾವಣೆಯಲ್ಲಿ ಹಿಡಿತ ಸಾಧಿಸಲು ಬಿಜೆಪಿ ತಂತ್ರ

Team Udayavani, Aug 5, 2021, 3:23 PM IST

BJP

ಸಾಂದರ್ಭಿಕ ಚಿತ್ರ..

ಬೆಂಗಳೂರು: ಬಿಜೆಪಿ ಸರ್ಕಾರದ ಹೊಸ ಸಚಿವ ಸಂಪುಟದಲ್ಲಿ ಸುಮಾರು 13 ಜಿಲ್ಲೆಗಳಿಗೆ ಪ್ರಾತಿನಿಧ್ಯವೇ ಸಿಕ್ಕಿಲ್ಲ. ಆದರೆ, ರಾಜಧಾನಿಗೆ ಬಂಪರ್‌ ಕೊಡುಗೆ ದೊರಕಿದೆ!

ನೂತನ ಸಂಪುಟದಲ್ಲಿ 29 ಸಚಿವರನ್ನು ಸೇರಿಸಲಾಗಿದ್ದು, ಈ ಪೈಕಿ ಶೇ.28ರಷ್ಟು ಅಂದರೆ ಪಕ್ಕದ ಹೊಸಕೋಟೆಯೂ ಸೇರಿದಂತೆ ಎಂಟು ಸಚಿವ ಸ್ಥಾನಗಳನ್ನು ಬೆಂಗಳೂರು ಬಾಚಿ ಕೊಂಡಿದೆ. ಇದಕ್ಕೆ ಸಕಾರಣವೂ ಇದೆ. ರಾಜ್ಯದ ಅತಿಹೆಚ್ಚು 28 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. “ನಗರ ಕೇಂದ್ರಿತ’ ಹಣೆಪಟ್ಟಿ ಅಂಟಿಸಿಕೊಂಡಿರುವ ಬಿಜೆಪಿಗೆ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹಾಗೂ ಹಲವಾರು ಆರೋಪಗಳ ನಡುವೆಯೂ ಮತ್ತೆ ಬಿಬಿಎಂಪಿ ಚುನಾವಣೆಯಲ್ಲಿ ಹಿಡಿತ ಸಾಧಿಸಲು ಇದು ಅಗತ್ಯ ಮತ್ತು ಅನಿವಾರ್ಯವೂ ಆಗಿದೆ.

ನಗರ ಜಿಲ್ಲೆಯಲ್ಲಿ ಬರುವ ಏಳು ಸಚಿವರಲ್ಲಿ ಆರ್‌. ಅಶೋಕ್‌, ವಿ. ಸೋಮಣ್ಣ, ಡಾ.ಸಿ.ಎನ್‌. ಅಶ್ವತ್ಥ ನಾರಾಯಣ ಸೇರಿದಂತೆ ಇತ್ತೀಚೆಗೆ ಬಿಜೆಪಿಗೆ ವಲಸೆ ಬಂದ ನಾಲ್ಕುಜನರೂ ಇದ್ದಾರೆ.ಹೀಗೆವಲಸೆ ಬಂದವರು ವೈಯಕ್ತಿಕವಾಗಿ ಹಲವರು ರೀತಿಯಲ್ಲಿ “ಪ್ರಬಲ’ ನಾಯಕರಾಗಿ ಬೆಳೆದಿದ್ದು, ಸ್ಥಳೀಯ ಮಟ್ಟದಲ್ಲಿ ತಮ್ಮೊಂದಿಗೆ ಬೆಂಬಲಿಗರನ್ನೂ ಕರೆತಂದಿದ್ದಾರೆ. ಇದೆಲ್ಲದರಿಂದಆಪಕ್ಷಕ್ಕೆಸಹಜವಾಗಿಬಲಬಂದಂತಾಗಿದೆ. ಸ್ಥಳೀಯವಾಗಿ ಮತ್ತಷ್ಟು ತನ್ನ ಜಾಲ ವಿಸ್ತರಿಸಲು ಇದು ಪೂರಕವಾಗಲಿದೆ. ಬರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಯಲ್ಲಿ ಇದು ಫ‌ಲ ಕೂಡ ನೀಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಸಾಕಷ್ಟು ಒತ್ತಡದ ನಡುವೆಯೂ ಸಂಪುಟದಲ್ಲಿ ವಲಸಿಗರಿಗೆ ಹೀಗೆ ಮಣೆ ಹಾಕಲು ಇದು ಕೂಡ ಒಂದು ಕಾರಣ. ಆದರೆ,ಈಸಚಿವರುಗಳಿಗೆ ನೀಡುವ ಖಾತೆಗಳು ಹಾಗೂ ಅದರಿಂದ ಅವರ ಸ್ಪಂದನೆ ಹೇಗಿರುತ್ತದೆ? ಬೆಂಗಳೂರು ಅಭಿವೃದ್ಧಿ ಖಾತೆ ಯಾರಿಗೆ ಸಿಗಲಿದೆ? ಎಂಬುದರ ಮೇಲೆ ಈ ಎಲ್ಲ ಲೆಕ್ಕಾಚಾರ ಅವಲಂಬಿತವಾಗಿದೆ. ಮತ್ತೊಂದೆಡೆ ವರ್ಷದ ಹಿಂದೆ ನಡೆಯಬೇಕಿದ್ದ ಚುನಾವಣೆಗೆ ಇನ್ನೂ ಕಾಲ ಕೂಡಿ ಬಂದಿಲ್ಲ (ಇದಕ್ಕೆ ಬಿಜೆಪಿಯೇ ಮನಸ್ಸು ಮಾಡಿಲ್ಲ!). ಹಾಗಾಗಿ ಪಾಲಿಕೆ ಸದಸ್ಯರಿಗೆ ಅಸ್ತಿತ್ವದ ಪ್ರಶ್ನೆಯಾಗಿದ್ದು, ತಮ್ಮ ವ್ಯಾಪ್ತಿಯಲ್ಲಿ ನಿರಂತರವಾಗಿ ಒಂದಿಲ್ಲೊಂದು ಸಾಮಾಜಿಕ ಕಾರ್ಯಗಳ ಮೂಲಕ ಜನ ಸಂಪರ್ಕದಲ್ಲಿ ಇದ್ದಾರೆ. ಇದೆಲ್ಲವೂ ಚುನಾವಣೆಯಲ್ಲಿ ಕೈಹಿಡಿಯಬಹುದು ಎಂಬ ಲೆಕ್ಕಾಚಾರ ಬಿಜೆಪಿಯದ್ದಾಗಿದೆ.

ಮತ್ತೊಂದೆಡೆ ಈ “ಬಲ’ವು ಬಿಜೆಪಿಗೆ ಮುಂದಿನ ದಿನಗಳಲ್ಲಿ ನುಂಗಲಾರದ ತುತ್ತು ಕೂಡ ಆಗಬಹುದು. ಸ್ಥಳೀಯ ಮಟ್ಟದಲ್ಲಿ ಈಗ ಮೂಲ ಮತ್ತು ವಲಸಿಗರು ಎಂಬ ಎರಡು ರೀತಿಯ ಕಾರ್ಯಕರ್ತರ ವರ್ಗಗಳು ಸೃಷ್ಟಿಯಾಗುತ್ತವೆ. ಇದು ಟಿಕೆಟ್‌ ಹಂಚಿಕೆಯಿಂದ ಹಿಡಿದು ಅಧಿಕಾರದ ಗದ್ದುಗೆ ಏರುವವರೆಗೂ ವಿವಿಧ ಹಂತಗಳಲ್ಲಿ ತಿಕ್ಕಾಟಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಜತೆಗೆ ಹಲವು ಶಕ್ತಿ ಕೇಂದ್ರಗಳು ಆಗುತ್ತವೆ ಆಗ, ಅದನ್ನು ನಿಭಾಯಿಸುವುದು ಕಷ್ಟವಾಗಲಿದೆ.

ಆಗ ಎಂಟು ಸಚಿವರು; ಈಗ ಏಳು: ಈಗಲೂ ಏಳು ಸಚಿವರನ್ನು ನೀಡಿದ್ದು, ಶಕ್ತಿ ಕೇಂದ್ರ ಹಲವು ಇವೆ. ಹಾಗಾಗಿ, ಇತಿಹಾಸ ಪುನರಾವರ್ತನೆ ಆಗದಂತೆ ಎಚ್ಚರ ವಹಿಸುವ ಅವಶ್ಯಕತೆಯೂ ಇದೆ ಎಂದು ಅವರು ಹೇಳುತ್ತಾರೆ. ಹಾಗೆ ನೋಡಿದರೆ, ಬಿ.ಎಸ್‌. ಯಡಿಯೂರಪ್ಪ ಅವರ ಸಂಪುಟದಲ್ಲಿ ಬೆಂಗಳೂರಿಗೆ ಎಂಟು ಸಚಿವ ಸ್ಥಾನಗಳನ್ನು ನೀಡಲಾಗಿತ್ತು. ಜತೆಗೆ ಬೆಂಗಳೂರು ಅಭಿವೃದ್ಧಿ ಖಾತೆ ಸ್ವತಃ ಅಂದಿನ ಮುಖ್ಯಮಂತ್ರಿ ಬಳಿ ಇತ್ತು. ಖುದ್ದು ಪ್ರಗತಿ ಪರಿಶೀಲನೆ ಮಾಡುತ್ತಿದ್ದರು. ಆದರೆ, ಬೆರಳೆಣಿಕೆಯಷ್ಟು ಬಾರಿ ಮಾತ್ರ ಆ ಪರಿಶೀಲನಾ ಸಭೆಗಳು ನಡೆದಿವೆ ಎಂಬ ಆರೋಪವೂ ಇದೆ. ಇನ್ನು ಕಳೆದೆರಡು ವರ್ಷಗಳಿಂದ ನಿರೀಕ್ಷಿತ ಮಟ್ಟದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಪ್ರಗತಿ ಕೂಡ ಸಾಧಿಸಿಲ್ಲ. ಇದಕ್ಕೆ ಕೋವಿಡ್‌-19 ಹಾವಳಿ ಪ್ರಮುಖ ಕಾರಣ.

ಬೆಂಗಳೂರು ಸಚಿವರು
ಆರ್‌.ಅಶೋಕ್‌, ವಿ. ಸೋಮಣ್ಣ, ಡಾ.ಸಿ.ಎನ್‌. ಅಶ್ವತ್ಥ ನಾರಾಯಣ, ಗೋಪಾಲಯ್ಯ,ಬಿ.ಬಸವರಾಜು(ಬೈರತಿ ಬಸವರಾಜು), ಎಸ್‌.ಟಿ. ಸೋಮಶೇಖರ್‌, ಮುನಿರತ್ನ.

ಇಂದು ಖಾತೆ ಹಂಚಿಕೆ
ಬೆಂಗಳೂರು: ನೂತನ ಸಚಿವರಿಗೆ ಗುರುವಾರ (ಇಂದು) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖಾತೆ ಹಂಚಿಕೆ ಮಾಡಲಿದ್ದಾರೆ. ಬಹುತೇಕ ಸಚಿವರು ಹಳಬರೇ ಇರುವುದರಿಂದ ತಾವು ಈ ಹಿಂದೆ ನಿರ್ವಹಿಸಿದ ಖಾತೆಯನ್ನೇ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿಂದಿನ ಸಿಎಂ ಬಳಿ ಇದ್ದ ಇಂಧನ, ಜಲ ಸಂಪನ್ಮೂಲ, ಹಣಕಾಸು, ಬೆಂಗಳೂರು ನಗರಾಭಿವೃದ್ಧಿ ಖಾತೆಗಳ ಮೇಲೆ ಕೆಲವು ಹಿರಿಯ ಸಚಿವರು ಕಣ್ಣಿಟ್ಟಿದ್ದಾರೆ ಎಂದು ತಿಳಿದು ಬಂದಿದ್ದು, ಯಡಿಯೂರಪ್ಪ ಸಂಪುಟದಲ್ಲಿ ಗೃಹ,ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಹೊಂದಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಈಗ ತಮ್ಮ ಬಳಿ ಹಣಕಾಸು ಹಾಗೂ ಜಲ ಸಂಪನ್ಮೂಲ, ಡಿಪಿಎಆರ್‌ ಗುಪ್ತಚರ ಖಾತೆಗಳನ್ನು ಉಳಿಸಿಕೊಂಡು ಹಿರಿಯ ಸಚಿವರಿಗೆ ಪ್ರಮುಖ ಖಾತೆಗಳನ್ನು ನೀಡುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.

ಇಮೇಜ್‌ ಬರುವಂತೆ ಕೆಲಸ ಮಾಡುವೆ
ಬೆಂಗಳೂರು: “ಸರ್ಕಾರಕ್ಕೆ ಹಾಗೂ ಬಿಜೆಪಿ ಪಕ್ಷಕ್ಕೆಕ್ಲೀನ್‌ ಇಮೇಜ್‌ ಬರುವಂತೆ ಶಕ್ತಿ ಮೀರಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ’ ಇದುನೂತನ ಸಚಿವ ಎಸ್‌.ಟಿ. ಸೋಮಶೇಖರ್‌ ಅವರ ಮಾತುಗಳು. ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ನಂತರ “ಉದಯ ವಾಣಿ’ ಮಾತನಾಡಿದ ಅವರು, ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ 16 ತಿಂಗಳಲ್ಲಿ ಉತ್ತಮ ಕೆಲಸ ಮಾಡಿದ್ದೇನೆ. ಇದೀಗ ಬಸವರಾಜ ಬೊಮ್ಮಾಯಿ ಆವರ ನಾಯಕತ್ವದಲ್ಲಿ ಕೆಲಸ ಮಾಡಲು ಮತ್ತೂಮ್ಮೆ ಅವಕಾಶ ಸಿಕ್ಕಿದ್ದು ಜನ ಮೆಚ್ಚುವಂತೆ ಕಾರ್ಯನಿರ್ವಹಿಸುತ್ತೇನೆ ಎಂದು ಹೇಳಿದರು.

ಸಚಿವ ಸ್ಥಾನದ ನಿರೀಕ್ಷೆ ಇತ್ತೇ?
ಖಂಡಿತವಾಗಿಯೂ ಇತ್ತು. ಪಕ್ಷದ ವರಿಷ್ಠರುಹಾಗೂ ಸಿಎಂ ವಿಶ್ವಾಸ ಇಟ್ಟು ಹೊಣೆಗಾರಿಕೆ ನೀಡಿದ್ದಾರೆ. ಅವರ ವಿಶ್ವಾಸಕ್ಕೆ ಚ್ಯುತಿಬಾರದಂತೆ ಕೆಲಸ ಮಾಡುತ್ತೇನೆ.

ನಿಮ್ಮಿಂದ ಯಾವ ರೀತಿಯ ಕೆಲಸ ನಿರೀಕ್ಷಿಸಬಹುದು?
ಸರ್ಕಾರ ಹಾಗೂ ಬಿಜೆಪಿ ಪಕ್ಷಕ್ಕೆ ಕ್ಲೀನ್‌ ಇಮೇಜ್‌ ಬರುವಂತೆ,ಮುಂದಿನವಿಧಾನಸಭೆಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುವಂತೆ ನನ್ನ ಶಕ್ತಿ ಮೀರಿ ಶ್ರಮಿಸುತ್ತೇನೆ. ಇದು ಅವಕಾಶ ಎನ್ನುವುದಕ್ಕಿಂತ ಜವಾಬ್ದಾರಿ ಎಂಬಂತೆ ನಿರ್ವಹಿಸುತ್ತೇನೆ. ಸಹಕಾರ ಸಚಿವನಾಗಿ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿದ್ದೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವನಾಗಿ 150 ಕ್ಕೂ ಹೆಚ್ಚು ಬಾರಿ ಭೇಟಿ ಕೊಟ್ಟಿದ್ದೆ.

ಇಂತದ್ದೇ ಖಾತೆ ಬೇಕು ಎಂಬ ಬೇಡಿಕೆ ಇಟ್ಟಿದ್ದೀರಾ?
ಇಲ್ಲ. ಯಡಿಯೂರಪ್ಪ ಅವರ ಸರ್ಕಾರದಲ್ಲಿ ಸಹ ಕಾರ ಖಾತೆ ನೀಡಲಾಗಿತ್ತು. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರೇ ಮೆಚ್ಚುವಂತೆ ಕೆಲಸ ಮಾಡಿದ್ದೆ. ಸಹಕಾರಿಗಳ ಜತೆಗೂಡಿ ಕಾರ್ಯನಿರ್ವಹಿಸುವ ಅವ ಕಾಶ ನನಗೆಕೊಡಲಾಗಿತ್ತು. ನ್ಯಾಯ ಒದಗಿಸಿದ್ದೇನೆ.

ಈಗಲೂ ಸಹಕಾರ ಖಾತೆಯೇ ಬೇಕಾ?
ಅದು ಮುಖ್ಯಮಂತ್ರಿಯವರ ವಿವೇಚನೆ ಬಿಟ್ಟದ್ದು. ಯಾವುದೇ ಖಾತೆ ಕೊಟ್ಟರೂ ಸಮರ್ಥವಾಗಿ ನಿಭಾಯಿಸು ತ್ತೇನೆ. ಖಾತೆಗಾಗಿ ಯಾವುದೇ ಬೇಡಿಕೆ ಇಟ್ಟಿಲ್ಲ, ಇಡುವುದೂ ಇಲ್ಲ. ಕೆಲಸ ಮಾಡುವುದು ಮುಖ್ಯ , ಖಾತೆಯಲ್ಲ

ಕ್ಷೇತ್ರದ ಅಭಿವೃದ್ದಿಬಗ್ಗೆ ಹೊಸ ಯೋಜನೆ ಇದೆಯಾ?
ನಾನು ಸಚಿವನಾಗಲು ಯಶವಂತಪುರ ಕ್ಷೇತ್ರದ ಜನತೆಯ ಆಶೀರ್ವಾದ ಮುಖ್ಯ. ಅವರಿಂದಾಗಿ ನಾನು ಈ ಸ್ಥಾನದಲ್ಲಿದ್ದೇನೆ. ಅವರ ಋಣ ತೀರಿಸಲು ಏನು ಮಾಡಿದರೂ ಸಾಲದು. ತಾಯಿ ಚಾಮುಂಡೇಶ್ವರಿ ಕೃಪೆಯಿಂದ ರಾಜ್ಯದ ಅಭಿವೃದ್ಧಿ ಹಾಗೂ ನನ್ನ ಕ್ಷೇತ್ರದ ಅಭಿವೃದ್ಧಿ ನನ್ನ ಆದ್ಯತೆ. ಆ ವಿಚಾರದಲ್ಲಿ ನನ್ನದೇ ಆದ ಕನಸುಗಳಿವೆ.

ಹೊಸ ಸರ್ಕಾರದಲ್ಲಿ ಇರಲಿದೆ ಹೊಸತನ
ಬೆಂಗಳೂರು: “ಹೊಸ ಸರ್ಕಾರದಲ್ಲಿ ಹೊಸತನ ಇರಲಿದ್ದು ಜನಪರ ನಿರ್ಧಾರಗಳು ಹಾಗೂ ಜನಮೆಚ್ಚುವ ಕೆಲಸ ಆಗಲಿವೆ’ ನೂತನ ಸಚಿವ ಆರ್‌. ಅಶೋಕ್‌ ಅವರ ಮಾತುಗಳಿವು. ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ಸ್ವೀಕರಿಸಿದ ನಂತರ “ಉದಯವಾಣಿ’ ಜತೆ ಮಾತನಾಡಿದ ಅವರು, ನಮ್ಮ ಮುಂದೆ ಸವಾಲುಗಳಿವೆ ಇದ್ದು ಎಲ್ಲವನ್ನು ಸಮರ್ಥವಾಗಿ ನಿಭಾಯಿಸಲಾಗುವುದು ಎಂದು ಹೇಳಿದರು.

ಸಚಿವರಾಗಿರುವುದು ಸಂತೋಷ ತಂದಿದೆಯಾ?
ಖಂಡಿತವಾಗಿಯೂ. ನನ್ನ ಆತ್ಮೀಯ ಮಿತ್ರರಾದ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಸಚಿವನಾಗಿರುವುದು ಅತೀವ ಸಂತೋಷ ತಂದಿದೆ.

ನೀವು ಉಪಮುಖ್ಯಮಂತ್ರಿ ಆಕಾಂಕ್ಷಿಯಾಗಿದ್ದೀರಲ್ಲವೇ?
ನಾನು ಉಪ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದವನು. ಈಗ ನನಗೆ ಉಪ ಮುಖ್ಯಮಂತ್ರಿ ಹುದ್ದೆಯ ಬಗ್ಗೆ ವ್ಯಾಮೋಹ,ಪ್ರೀತಿ ಇಲ್ಲ.ಅವಕಾಶ ಸಿಕ್ಕಾಗ ಕೆಲಸ ಮಾಡಿದ್ದೇನೆ.

ಯಾವ ಖಾತೆಯ ನಿರೀಕ್ಷೆಯಲ್ಲಿದ್ದೀರಿ? 
ಬೆಂಗಳೂರು ಅಭಿವೃದ್ಧಿ ಹಾಗೂ ಗೃಹ ಬಿಟ್ಟು ಬೇರೆ ಯಾವುದೇ ಖಾತೆ ಕೊಟ್ಟರೂ ಸರಿಯೇ ಎಂದು ಮುಖ್ಯಮಂತ್ರಿಯವರಿಗೆ ಹೇಳಿದ್ದೇನೆ.

ಈ ಎರಡು ಖಾತೆಯಾಕೆ ಬೇಡ?
ನಾನು ಬೆಂಗಳೂರು ಅಭಿವೃದ್ಧಿ ಖಾತೆಗಾಗಿ ಪಟ್ಟು ಹಿಡಿಯುತ್ತೇನೆ ಎಂದು ಪ್ರತಿ ಬಾರಿಯೂ ವದಂತಿಗಳು ಹರಿದಾಡುತ್ತವೆ. ಹೀಗಾಗಿಯೇ ನನಗೆ ಆಖಾತೆ ಬೇಡ ಎಂದು ನಾನೇ ಹೇಳಿದ್ದೇನೆ. ಗೃಹ ಸಚಿವ ಸ್ಥಾನವನ್ನೂ ನಾನು ಹಿಂದೆ ನಿಭಾಯಿಸಿದ್ದೇನೆ. ಕಂದಾಯ, ಸಾರಿಗೆ, ಆರೋಗ್ಯ ಸೇರಿ ಹಲವು ಖಾತೆಗಳಲ್ಲಿ ಕೆಲಸ ಮಾಡಿದ್ದೇನೆ. ಹೀಗಾಗಿ, ಹೊಸ ಖಾತೆ ಕೊಟ್ಟರೆ ಕೆಲಸ ಮಾಡಿ ತೋರಿಸುವ ಆಸೆ.

ನಿಮ್ಮಪ್ರಕಾರ ಸರ್ಕಾರಕ್ಕೆಇರುವ ಸವಾಲು ಏನು?
ಮೊದಲಿಗ ಕೊರೊನಾ ಮೂರನೇ ಅಲೆ ತಡೆಗಟ್ಟುವಿಕೆ, ಪ್ರವಾಹ ಸಂತ್ರಸ್ತರಿಗೆ ಪರಿಹಾರ. ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ವೇಗ ಕೊಡುವುದು. ನಂತರ ಎರಡು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ, ಜಿಲ್ಲಾ ಹಾಗೂ ತಾಪಂ, ಬಿಬಿಎಂಪಿ ಚುನಾವಣೆಗಳು ನಮಗೆ ಸವಾಲು. ಇಡೀ ಸಂಪುಟ ತಂಡವಾಗಿ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ.

ಈ ಸರ್ಕಾರದ ಆದ್ಯತೆಗಳೇನು?
ಹೊಸ ಸರ್ಕಾರದಲ್ಲಿ ಹೊಸತನ ಇರಲಿ, ಜನಪರ ನಿರ್ಧಾರಗಳು ಹಾಗೂ ಜನಮೆಚ್ಚುವ ಕೆಲಸ ಆಗಲಿವೆ. ನಾನು ಹಿಂದೆ ಯಡಿಯೂರಪ್ಪ, ಸದಾನಂದಗೌಡ, ಜಗದೀಶ್‌ ಶೆಟ್ಟರ್‌ ಹೀಗೆ ಎಲ್ಲರ ನಾಯಕತ್ವದಲ್ಲೂ ಸಚಿವನಾಗಿ ಕೆಲಸ ಮಾಡಿದ್ದೇನೆ. ಈಗ ವಿಶೇಷ ಎಂದರೆ ಆತ್ಮೀಯ ಮಿತ್ರನ ನೇತೃತ್ವದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ನಮ್ಮ ನಾಯಕರು ಅವಕಾಶ ಮಾಡಿಕೊಟ್ಟಿದ್ದಾರೆ. ಇದಕ್ಕಾಗಿ ನಾನು ಪಕ್ಷ ಹಾಗೂ ನಾಯಕರಿಗೂ ಕೃತಜ್ಞತೆ ಸಲ್ಲಿಸುತ್ತೇನೆ.

-ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆMandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ

Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ

ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

Surjewala

Pegasus spyware ಬಗ್ಗೆ ಸುಪ್ರೀಂಕೋರ್ಟ್‌ ತನಿಖೆ ನಡೆಸಲಿ: ಸುರ್ಜೇವಾಲಾ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.