ಬೀದರ್‌ನಲ್ಲಿ ಮತ್ತೆ 7 ಮಂದಿಗೆ ಕೋವಿಡ್-19 ಸೋಂಕು ದೃಢ
Team Udayavani, Jun 28, 2020, 8:51 PM IST
ಬೀದರ್: ಜಿಲ್ಲೆಯಲ್ಲಿ ಒಂದೇ ದಿನ ಮೂವರನ್ನು ಬಲಿ ಪಡೆದು ಆರ್ಭಟಿಸಿದ್ದ ಕೋವಿಡ್-19 ಸೋಂಕು ರವಿವಾರ ಕೊಂಚ ತಗ್ಗಿದ್ದು, 7 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 562ಕ್ಕೆ ಏರಿಕೆ ಆಗಿದೆ.
55 ವರ್ಷದ ಪುರುಷ (ಪಿ-12189), 60 ವರ್ಷದ ವೃದ್ಧೆ (ಪಿ-12190), 64 ವರ್ಷದ ವೃದ್ಧೆ (ಪಿ-12191), 39 ವರ್ಷದ ಮಹಿಳೆ (ಪಿ-12192), 16 ವರ್ಷದ ಯುವತಿ (ಪಿ-12193), 43 ವರ್ಷದ ಪುರುಷ (ಪಿ-12194) ಮತ್ತು 45 ವರ್ಷದ ಪುರುಷ (ಪಿ-12195) ರೋಗಿಗಳಿಗೆ ಸೋಂಕು ಕಾಣಿಸಿಕೊಂಡಿದೆ. ಜಿಲ್ಲೆಯಲ್ಲಿ ಈವರೆಗೆ 562 ಪಾಸಿಟಿವ್ ಪ್ರಕರಣಗಳು ವರದಿ ಆದಂತಾಗಿದ್ದು, 19 ಜನ ಸಾವನ್ನಪ್ಪಿದ್ದರೆ 456 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ 87 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
857 ಜನರ ವರದಿ ಬಾಕಿ: ಜಿಲ್ಲೆಯಲ್ಲಿ ಕೋವಿಡ್-19 ಶಂಕಿತ 857 ಮಂದಿಯ ಗಂಟಲು ದ್ರವ ಪರೀಕ್ಷಾ ವರದಿ ಬರಬೇಕಿದೆ. ರವಿವಾರ 137 ಜನ ಸೇರಿ ಈವರೆಗೆ 37,036 ಜನರ ಗಂಟಲು ದ್ರವ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ 35,617 ಮಂದಿಯದ್ದು ನೆಗೆಟಿವ್ ಬಂದಿದೆ. ಸೋಂಕಿತರ ಪ್ರಥಮ ಸಂಪರ್ಕಿತ 5503 ಮತ್ತು ದ್ವಿತೀಯ ಸಂಪರ್ಕಿತ 6887 ಜನರನ್ನು ಗುರುತಿಸಲಾಗಿದೆ ಎಂದು ಹೆಲ್ತ್ ಬುಲೆಟಿನ್ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.