ಅರಬ್ ದೇಶಗಳಲ್ಲಿ ಶೇ. 70 ಕಂಪೆನಿ ಬಂದ್
Team Udayavani, May 23, 2020, 11:01 AM IST
ದುಬಾೖ: ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ದುಬಾೖ ಸೇರಿದಂತೆ ಪ್ರಮುಖ ನಗರಗಳಲ್ಲಿ ಉದ್ಯೋಗ ಕಡಿತದ ಮಹಾಪರ್ವ ಶುರುವಾಗಿದ್ದು, ಕೋವಿಡ್-19 ಸೃಷ್ಟಿಸಿರುವ ಅವಾಂತರದಿಂದ ಕಳೆದೊಂದು ದಶಕದಲ್ಲಿ ಮೊದಲ ಬಾರಿಗೆ ಉದ್ಯೋಗ ಕ್ಷೇತ್ರದಲ್ಲಿ ಮಹತ್ತರವಾದ ಬೆಳವಣಿಗೆಗಳಾಗುತ್ತಿವೆ ಎಂದು ವರದಿಯಾಗಿದೆ.
ಉದ್ಯೋಗಗಳು ಕಣ್ಮರೆಯಾಗುತ್ತಿದ್ದು, ಮುಂಬರುವ 6 ತಿಂಗಳಲ್ಲಿ ನಾನಾ ಉದ್ಯಮ-ವ್ಯವಹಾರಗಳು ಸ್ಥಗಿತಗೊಳ್ಳಲಿವೆ ಎಂದು ಅಧ್ಯಯನ ವರದಿಯೊಂದು ಎಚ್ಚರಿಸಿದೆ. ಮಧ್ಯಪ್ರಾಚ್ಯದ ವಾಣಿಜ್ಯ ಕೇಂದ್ರಗಳಲ್ಲಿ ಇತ್ತೀಚಿನ ಆರ್ಥಿಕ ಒತ್ತಡಗಳ ಪರಿಣಾಮ ವ್ಯಾಪಾರ ಬೆಳವಣಿಗೆ ಸಂಪೂರ್ಣವಾಗಿ ಕುಂಠಿತವಾಗಿದೆ. ಮಧ್ಯಪೂರ್ವದಲ್ಲಾಗುತ್ತಿರುವ ಆರ್ಥಿಕ ನಷ್ಟ-ಕಷ್ಟಗಳನ್ನು ಹಲವು ಸಮೀಕ್ಷೆಗಳು ತೆರೆದಿಟ್ಟಿದೆ.
ದುಬಾೖ ಚೇಂಬರ್ ಆಫ್ ಕಾಮರ್ಸ್‌ವಿವಿಧ ಕ್ಷೇತ್ರಗಳ ಸುಮಾರು 1,228ಕ್ಕೂ ಹೆಚ್ಚು ಸಿಇಒಗಳನ್ನು ಸಂದರ್ಶಿಸಿ ಮಾಡಿದ ಸಮೀಕ್ಷೆ ಪ್ರಕಾರ ಮೂರನೇ ಎರಡು ಭಾಗದಷ್ಟು ಉದ್ಯಮಗಳು ಮುಂಬರುವ ಆರು ತಿಂಗಳಲ್ಲಿ ಪರಿಪೂರ್ಣ ಮಟ್ಟದಲ್ಲಿ ತಮ್ಮ ವ್ಯವಹಾರಗಳು ಸ್ಥಗಿತಗೊಳ್ಳುತ್ತದೆ ಎಂಬ ಕಳವಳ ವ್ಯಕ್ತಪಡಿಸಿದ್ದಾರೆ. ಶೇ.27ರಷ್ಟು ಮಂದಿ ಮುಂದಿನ ತಿಂಗಳೊಳಗೆ ವ್ಯಾಪಾರವನ್ನು ಕಳೆದುಕೊಳ್ಳುವ ಲಕ್ಷಣಗಳು ಗೋಚರವಾಗುತ್ತಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನುಳಿದ ಶೇ.43ರಷ್ಟು ಜನರು ಉದ್ಯೋಗ ಕಡಿತವಾಗುವ ಭಯದಲ್ಲಿದ್ದು, ಶೇ.20ರಷ್ಟಕ್ಕಿಂತ ಕಡಿಮೆ ಮಟ್ಟದ ಉದ್ಯೋಗಿಗಳನ್ನು ಹೊಂದಿರುವ ಸಣ್ಣ ಉದ್ಯಮಗಳು ಇಂತಹದೇ ದುಗುಡವನ್ನು ಹೊರಹಾಕಿವೆ. ಆ ಮೂಲಕ ಬರುವ ಆರು ತಿಂಗಳ ಕಾಲಾವಧಿಯಲ್ಲಿ ತೈಲ ಸಮೃದ್ಧ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಪ್ರಮುಖ ವಾಣಿಜ್ಯ ನಗರಗಳು ಶೇ.70ರಷ್ಟು ಉದ್ಯಮ ಸ್ಥಗಿತಕ್ಕೆ ಸಾಕ್ಷಿಯಾಗಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.