IT: ವಾರಕ್ಕೆ 70 ಗಂಟೆ ಕೆಲಸದ ಸಲಹೆಯನ್ನು ಹಲವರು ಮೆಚ್ಚಿದ್ದಾರೆ: ಇನ್ಫಿ ಮೂರ್ತಿ
ಸಲಹೆಗೆ ನಾನು ಬದ್ಧ ಎಂದ ಇನ್ಫೋಸಿಸ್ ಸಹಸ್ಥಾಪಕ
Team Udayavani, Jan 6, 2024, 1:03 AM IST
ಹೊಸದಿಲ್ಲಿ: ದೇಶದ ಆರ್ಥಿಕ ಅಭಿವೃದ್ಧಿಗಾಗಿ ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ಈ ಹಿಂದಿನ ತಮ್ಮ ಹೇಳಿಕೆಗೆ ಬದ್ಧವಾಗಿರುವುದಾಗಿ ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಪುನರುಚ್ಚರಿಸಿದರು.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, “ಯಾವುದೇ ಕ್ಷೇತ್ರದಲ್ಲಿ ಉನ್ನತ ಯಶಸ್ಸು ಕಂಡ ವ್ಯಕ್ತಿ ಯನ್ನು ನಾನು ಗೌರವ ದಿಂದ ಕೇಳುತ್ತೇನೆ, ನನ್ನ ಹೇಳಿಕೆಯಲ್ಲಿ ಏನಾದ ರೂ ತಪ್ಪಿದೆಯೇ ಎಂದು. ಆದರೆ ನನ್ನ ಸಲಹೆಗೆ ವೈಯಕ್ತಿಕವಾಗಿ ನನಗೆ ಯಾವುದೇ ನಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ” ಎಂದರು. “ಸ್ವತಃ ನಾನು ಇದನ್ನು ಪಾಲಿಸಿದ್ದರಿಂದ ಈ ಸಲಹೆ ನೀಡಿದ್ದೇನೆ. ನನ್ನ ಸಲಹೆ ಕುರಿತು ನನ್ನ ವಿದೇಶಿ ಸ್ನೇಹಿತರು, ಎನ್ಆರ್ಐಗಳು ಹಾಗೂ ಭಾರತದಲ್ಲಿ ಅನೇಕ ರು ಮೆಚ್ಚುಗೆ ವ್ಯಕ್ತಪಡಿ ಸಿದ್ದಾರೆ’ ಎಂದು ಹೇಳಿದರು. “ಈಗಲು ನಮ್ಮ ದೇಶದಲ್ಲಿ ರೈತರು, ಕೈಗಾರಿಕೆ ಗಳಲ್ಲಿ ಕಾರ್ಮಿಕರು ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಅವರು ತಮ್ಮ ಆರ್ಥಿಕ ಮಟ್ಟದಿಂದ ಮೇಲಕ್ಕೇರಲು ಶ್ರಮಿಸುತ್ತಾರೆ,’ ಎಂದರು.
ಸುಧಾ ಮೂರ್ತಿಯನ್ನು ಸೇರಿಸಿಕೊಳ್ಳದೇ ತಪ್ಪು ಮಾಡಿದೆ
“ಇನ್ಫೋಸಿಸ್ ಕಂಪೆನಿಯಲ್ಲಿ ಪತ್ನಿ ಸುಧಾ ಮೂರ್ತಿ ಅವರನ್ನು ಸೇರಿಸಿಕೊಳ್ಳದೇ ತಪ್ಪು ಮಾಡಿದೆ ಎಂದು ನನಗೆ ಈಗ ಅನಿಸುತ್ತಿದೆ’ ಎಂದು ಮೂರ್ತಿ ಹೇಳಿದರು. “ಕಂಪೆನಿಯಲ್ಲಿ ಕುಟುಂಬದ ಹಸ್ತಕ್ಷೇಪ ಇರಬಾರ ದೆಂದು ಆಗ ನನ್ನ ತತ್ವವಾಗಿತ್ತು. ಇನ್ಫೋಸಿಸ್ನ ಎಲ್ಲ ಸಂಸ್ಥಾಪಕರಿಗಿಂತಲು ಸುಧಾ ಹೆಚ್ಚು ಅರ್ಹರಾಗಿದ್ದರು. ಅಂದು ನಾನು ನಂಬಿದ್ದ ಆದರ್ಶಕ್ಕೆ ಒತ್ತು ಕೊಟ್ಟು ಸುಧಾರನ್ನು ದೂರವಿಟ್ಟೆ. ಆದರೆ, ಅರ್ಹತೆ ಇರುವ ಯಾರಿಗಾದರೂ ಸೂಕ್ತ ಸ್ಥಾನ ನೀಡಬೇಕೆಂದು ಅನಂತರ ಅರ್ಥವಾಯಿತು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.