Fraud Case; ಷೇರು ವ್ಯವಹಾರ ಹೆಸರಿನಲ್ಲಿ 72.31 ಲಕ್ಷ ರೂ. ವಂಚನೆ
Team Udayavani, Mar 5, 2024, 10:48 PM IST
ಮಂಗಳೂರು: ಆನ್ಲೈನ್ನಲ್ಲಿ ಷೇರು ಮಾರುಕಟ್ಟೆ ವ್ಯವಹಾರದ ನೆಪದಲ್ಲಿ ವ್ಯಕ್ತಿಯೋರ್ವರಿಗೆ 72.31 ಲಕ್ಷ ರೂ ವಂಚಿಸಿರುವ ಘಟನೆ ನಡೆದಿದೆ.
ಪ್ರಭಾಕರ ವಂಚನೆಗೊಳಗಾದವರು. ಅವರು ಫೇಸ್ಬುಕ್ ನೋಡುತ್ತಿದ್ದಾಗ ಷೇರು ಮಾರುಕಟ್ಟೆ ಬಗ್ಗೆ ಜಾಹಿರಾತು ಇತ್ತು. ಸಬ್ಸೆಬ್ ಆಯ್ಕೆ ಮೇಲೆ ಕ್ಲಿಕ್ ಮಾಡಿದಾಗ ಅದರಲ್ಲಿ ಒಂದು ಲಿಂಕ್ ಮೂಲಕ ಎರಡು ಆ್ಯಪ್ ಡೌನ್ಲೋಡ್ ಆಯಿತು. ಅದರಲ್ಲಿ ವಿಳಾಸವನ್ನು ನೀಡಿದ ಬಳಿಕ ವಾಟ್ಸ್ ಆ್ಯಪ್ ಗ್ರೂಪ್ಗೆ ಸೇರ್ಪಡೆಗೊಳಿಸ ಲಾಯಿತು.ಮೊದಲಿಗೆ 50 ಸಾವಿರ ರೂ.ಗಳನ್ನು ಹೂಡಿಕೆ ಮಾಡುವಂತೆ ತಿಳಿಸಿದ್ದು, ಪ್ರಭಾಕರ ಅವರು ಹಣ ಹಾಕಿದ್ದರು. ಅನಂತರ ಮತ್ತೆ ಬೇರೆ ಬೇರೆ ಷೇರುಗಳನ್ನು ಖರೀದಿಸುವಂತೆ ತಿಳಿಸಿದಾಗ ಅವರು ಹಂತ ಹಂತವಾಗಿ 72,31,017 ರೂ.ಗಳನ್ನು ವರ್ಗಾಯಿ ಸಿದ್ದರು.
ತನ್ನ ಷೇರುಗಳನ್ನು ಮಾರಾಟ ಮಾಡುವುದಾಗಿ ಪ್ರಭಾಕರ ಅವರು ತಿಳಿಸಿದಾಗ ಅದಕ್ಕೆ ಶೇ.10ರಷ್ಟು ತೆರಿಗೆ ಕಟ್ಟುವಂತೆ ತಿಳಿಸಲಾಯಿತು. ಆಗ ಪ್ರಭಾಕರ ಅವರಿಗೆ ತಾನು ಮೋಸ ಹೋಗಿರುವುದು ತಿಳಿಯಿತು. ಮಂಗ ಳೂರಿನ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Goa: ಕ್ಯಾಲಂಗುಟ್ ಬೀಚ್ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.