ನೌಕರರ ವಿರುದ್ಧದ 7,200 ಪ್ರಕರಣ ವಾಪಸ್; “ಕಾರ್ಮಿಕ ದಿನಾಚರಣೆ’ಗೆ ಕೆಎಸ್‌ಆರ್‌ಟಿಸಿ ಗಿಫ್ಟ್
Team Udayavani, May 2, 2022, 6:35 AM IST
ಬೆಂಗಳೂರು: ಅಶಿಸ್ತಿನ ನಡೆ, ರಸ್ತೆ ಅಪಘಾತ, ಗೈರು ಸೇರಿದಂತೆ ವಿವಿಧ ಆರೋಪಗಳಡಿ ಪ್ರಕರಣಗಳನ್ನು ಎದುರಿಸುತ್ತಿದ್ದ ಸಾರಿಗೆ ನೌಕರರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ವು “ಕಾರ್ಮಿಕ ದಿನಾಚರಣೆ’ಯ ಕೊಡುಗೆ ನೀಡಿದೆ.
ವಿವಿಧ ಕಾರಣಗಳಿಂದ ಸಾರಿಗೆ ನೌಕರರ ವಿರುದ್ಧ ದಾಖಲಾಗಿದ್ದ 7,200 ಪ್ರಕರಣಗಳನ್ನು ಏಕಕಾಲಕ್ಕೆ ಕೆಎಸ್‌ಆರ್‌ಟಿಸಿ ಹಿಂಪಡೆದಿದೆ.
ಇದರಲ್ಲಿನ ಬಹುತೇಕ ಪ್ರಕರಣಗಳು ಸುಮಾರು 25 ಸಾವಿರ ರೂ.ಗಳವರೆಗೂ ದಂಡ ವಿಧಿಸುವಂತಹವುಗಳಾಗಿವೆ. ಆದರೆ, ಕಾರ್ಮಿಕ ದಿನಾಚರಣೆ ಹಿನ್ನೆಲೆಯಲ್ಲಿ ಕೇವಲ 100ರಿಂದ 500 ರೂ.ವರೆಗೂ ದಂಡ ವಿಧಿಸಿ ಒಟ್ಟು 7,200 ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು.
ಎಲ್ಲ ಸಿಬಂದಿಯ ವಿರುದ್ಧ ದಾಖಲಾಗಿದ್ದ ಶಿಸ್ತು ಕ್ರಮ ಪ್ರಕರಣ ಹಿಂಪಡೆದ್ದು, ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ನಡೆಯದಂತೆ ಜಾಗೃತರಾಗಿರಬೇಕು ಎಂದು ರವಿವಾರ ನಡೆದ ಕಾರ್ಮಿಕ ದಿನಾಚರಣೆಯಲ್ಲಿ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಹೇಳಿದರು.
8,414 ಸಿಬಂದಿ ವಿರುದ್ಧ ಶಿಸ್ತು ಪ್ರಕರಣವಿತ್ತು
ನಿಗಮದಲ್ಲಿರುವ ಒಟ್ಟು 35,000 ಸಿಬ್ಬಂದಿ ಪೈಕಿ 8,414 ಸಿಬಂದಿಗಳ ವಿರುದ್ಧ ಶಿಸ್ತು ಪ್ರಕರಣಗಳಿದ್ದವು. ಪ್ರಕರಣ ಹಿಂಪಡೆದಿರುವ ಹಿನ್ನೆಲೆಯಲ್ಲಿ ಎಲ್ಲ ಸಿಬಂದಿ ಮುಂದಿನ ದಿನಗಳಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕು.
ಕಾರ್ಮಿಕರೇ ಸಾರಿಗೆ ಇಲಾಖೆಯ ಬೆನ್ನೆಲುಬು. ಚಾಲಕರು, ನಿರ್ವಾಹಕರು ಮತ್ತು ತಾಂತ್ರಿಕ ಸಿಬಂದಿಗಳಿಂದ ನಿಗಮ ನಡೆಯುತ್ತಿದೆ. ವಿನಾ ವ್ಯವಸ್ಥಾಪಕ ನಿರ್ದೇಶಕರಿಂದಲ್ಲ. ಸಾರಿಗೆ ಸಂಸ್ಥೆಯ ಕಾರ್ಮಿಕರು ರಕ್ಷಣೆ ಮತ್ತು ಅವರ ನೆಮ್ಮದಿ ಜೀವನ ನಮಗೆ ಪ್ರಮುಖ ಆದ್ಯತೆಯಾಗಿದೆ ಎಂದು ಹೇಳಿದರು.
ನಿಗಮವನ್ನು ಬಲಪಡಿಸೋಣ
ನಿಗಮದ ನಿತ್ಯ ಸರಾಸರಿ ಆದಾಯ 10 ಕೋಟಿ ಇರಬೇಕು. ಆದರೆ ನಮಗೆ ಸರಾಸರಿ 8 ಕೋಟಿ ಮಾತ್ರ ಬರುತ್ತಿದೆ. ಇದರಲ್ಲಿ ಶೇ. 70ರಷ್ಟು ಡೀಸೆಲ್ ಪಾವತಿಗೆ ಸಂದಾಯವಾಗುತ್ತಿದೆ. ಹೀಗಾಗಿ ನಿಗಮದ ಆರ್ಥಿಕ ಪರಿಸ್ಥಿತಿ ಸಂಕಷ್ಟದಲ್ಲಿದೆ. ಹಾಗಾಗಿ, ನಿಗಮ ಬಲಗೊಳ್ಳಬೇಕಾದಲ್ಲಿ ನೌಕರರರ ಸೇವೆ ಮಹತ್ವದ್ದಾಗಿದೆ. ಸಾರ್ವಜನಿಕರಿಗೆ ಉತ್ತಮ ಸೇವೆ ಸಲ್ಲಿಸಲು ಎಲ್ಲ ಸಿಬಂದಿ ಕೈಜೋಡಿಸಬೇಕು ಎಂದು ಹೇಳಿದರು.
ಎಂಬಿಬಿಎಸ್, ಎಂಟೆಕ್ ಸೇರಿ ಉನ್ನತ ಮಟ್ಟದ ವಿದ್ಯಾಭ್ಯಾಸ ಮಾಡಿರುವ ನೌಕರರ ಮಕ್ಕಳನ್ನು ಪುರಸ್ಕರಿಸಲಾಯಿತು. ನಿಗಮದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Question paper leak ಶಂಕೆ: ಪಿಡಿಒ ಪರೀಕ್ಷೆ ಬಹಿಷ್ಕರಿಸಿ ಪ್ರತಿಭಟನೆ
Kanakadasa Jayanthi ಇಂದು; ಕನಕದಾಸರ ತಣ್ತೀಗಳು ಹಿಂದೆಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.