“ರೋಮಿಯೋ’ ಚಿತ್ರಕ್ಕೆ 8, ನಮ್ಮ ಪ್ರೀತಿಗೆ 9: ಭಾವನಾ ಹೇಳಿದ್ದೇನು?
Team Udayavani, Jul 9, 2020, 9:54 AM IST
ಸ್ಯಾಂಡಲ್ವುಡ್ ನಟಿ ಭಾವನಾ ಮೆನನ್ “ಭಜರಂಗಿ 2’, “ಇನ್ಸ್ಪೆಕ್ಟರ್ ವಿಕ್ರಮ್’ ಮತ್ತು “ಗೋವಿಂದ ಗೋವಿಂದ’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಲಾಕ್ಡೌನ್ ಕಾರಣದಿಂದ ಮನೆಯಲ್ಲಿಯೇ ಉಳಿದಿದ್ದಾರೆ. ಅಲ್ಲದೇ ತಮ್ಮ ಲೈಫ್ಸ್ಟೈಲ್ ಸೇರಿದಂತೆ ಹಲವಾರು ಮಾಹಿತಿಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಭಾವನಾ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ತಮ್ಮ ಪ್ರೀತಿಯ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ಹೌದು! ನಟಿ ಭಾವನಾ ಮೆನನ್ ತಮ್ಮ ಬಹು ಕಾಲದ ಗೆಳೆಯ ಕನ್ನಡದ ನಿರ್ಮಾಪಕ ಮತ್ತು ನಟ ನವೀನ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದು, ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಬರಹವೊಂದನ್ನು ಪೋಸ್ಟ್ ಮಾಡಿದ್ದಾರೆ.
“ರೋಮಿಯೋ ಸಿನಿಮಾಗೆ 8 ವರ್ಷ ಆಗಿದೆ. ಅದೇ ರೀತಿ ನಮ್ಮ ಪ್ರೀತಿಗೆ 9 ವರ್ಷ ಆಗಿದೆ. ಈ ಸಿನಿಮಾ ನನಗೆ ನನ್ನ ರೋಮಿಯೋವನ್ನು ನೀಡಿದೆ. ನಾವು ಹೇಗೆ ಭೇಟಿ ಆದೆವು, ಪ್ರೀತಿಯಲ್ಲಿ ಬಿದ್ದೆವು ಎನ್ನುವುದು ಮ್ಯಾಜಿಕ್. ಅಲ್ಲದೇ ನಾನು ಹೇಗೆ ನಿಮ್ಮ ಜೊತೆ ಜೀವನ ಪೂರ್ತಿ ಕಳೆಯಲು ನಿರ್ಧರಿಸಿದೆ ಎಂಬುದು ಗೊತ್ತಿಲ್ಲ. ಆದರೆ ನನ್ನ ಜೀವನಕ್ಕೆ ಬಂದಿದ್ದಕ್ಕಾಗಿ ಹಾಗೂ ನಿಮ್ಮ ಪ್ರೀತಿಯಲ್ಲಿ ಬಿದ್ದಿದ್ದಕ್ಕೆ ಧನ್ಯವಾದಗಳು. 9 ವರ್ಷ ನಾವು ಜೊತೆಗಿದ್ದೀವಿʼ ಎಂದು ತಿಳಿಸಿದ್ದಾರೆ.
ಇನ್ನು ಭಾವನಾ 2012 ಬಿಡುಗಡೆಯಾದ “ರೋಮಿಯೋʼ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ಗೆ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರಕ್ಕೆ ನವೀನ್ ಬಂಡವಾಳ ಹೂಡಿದ್ದರಿಂದ ಅಲ್ಲೇ ಇವರಿಬ್ಬರ ಪರಿಯಚವಾಗಿದ್ದು, ಅನಂತರ ಇಬ್ಬರು ಪರಸ್ಪರ ಪ್ರೀತಿಸಿ 2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ZEBRA Movie: ಜೀಬ್ರಾ ಮೇಲೆ ಡಾಲಿ ಕಣ್ಣು
Drone Prathap: ಸಿನಿಮಾರಂಗಕ್ಕೆ ಡ್ರೋನ್ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.