ಐಪಿಎಲ್ ಹರಾಜಿಗೆ 1,214 ಆಟಗಾರರು
Team Udayavani, Jan 23, 2022, 5:30 AM IST
ಹೊಸದಿಲ್ಲಿ: ಐಪಿಎಲ್ ಹರಾಜಿಗೆ ಒಟ್ಟು 1,214 ಕ್ರಿಕೆಟಿಗರ ಹೆಸರು ನೋಂದಾಯಿಸಲ್ಪಟ್ಟಿದೆ. ಇದರಲ್ಲಿ 896 ಆಟಗಾರರು ಭಾರತದವರಾದರೆ, 318 ಆಟಗಾರರು ವಿದೇಶಿಯರು.
ಉಳಿದಂತೆ 33 ಕ್ರಿಕೆಟಿಗರನ್ನು ಫ್ರಾಂಚೈಸಿಗಳು ತಮ್ಮಲ್ಲೇ ಉಳಿಸಿಕೊಂಡಿವೆ. ಇವರಲ್ಲಿ ಪ್ರಮುಖರೆಂದರೆ ಮಹೇಂದ್ರ ಸಿಂಗ್ ಧೋನಿ, ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ. ಹಾಗೆಯೇ ಜಸ್‌ಪ್ರೀತ್ ಬುಮ್ರಾ, ರವೀಂದ್ರ ಜಡೇಜ, ಕೇನ್ ವಿಲಿಯಮ್ಸನ್, ಜಾಸ್ ಬಟ್ಲರ್, ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಆಯಾ ಫ್ರಾಂಚೈಸಿಗಳಲ್ಲಿ ಉಳಿದುಕೊಂಡಿದ್ದಾರೆ.
ಬೆನ್ ಸ್ಟೋಕ್ಸ್, ಆರ್ಚರ್, ಮಿಚೆಲ್ ಸ್ಟಾರ್ಕ್, ಸ್ಯಾಮ್ ಕರನ್, ಅವರೆಲ್ಲ ಕೈಬಿಡಲ್ಪಟ್ಟ ಪ್ರಮುಖ ಆಟಗಾರರು. ಗೇಲ್, ಎಬಿಡಿ ಈ ಬಾರಿ ಆಡುವುದಿಲ್ಲ.
ಭೂತಾನ್ ಕ್ರಿಕೆಟಿಗ
ಮೊದಲ ಸಲ ಭೂತಾನ್ ಕ್ರಿಕೆಟರ್ ಒಬ್ಬರು ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಳ್ಳುತ್ತಿರುವುದು ಈ ಸಲದ ವಿಶೇಷ. ಹಾಗೆಯೇ ಅಮೆರಿಕದ ದಾಖಲೆ ಸಂಖ್ಯೆಯ 14 ಆಟಗಾರರೂ ಇದ್ದಾರೆ.
ವಿದೇಶಿ ಕ್ರಿಕೆಟಿಗರಲ್ಲಿ ಆಸ್ಟ್ರೇಲಿಯಕ್ಕೆ ಅಗ್ರಸ್ಥಾನ. ಕಾಂಗರೂ ನಾಡಿನ 59 ಕ್ರಿಕೆಟಿಗರು ರೇಸ್‌ನಲ್ಲಿದ್ದಾರೆ. ದ್ವಿತೀಯ ಸ್ಥಾನ ದಕ್ಷಿಣ ಆಫ್ರಿಕಾಕ್ಕೆ. ಇಲ್ಲಿನ 48 ಆಟಗಾರರಿದ್ದಾರೆ. ಉಳಿದಂತೆ ವೆಸ್ಟ್ ಇಂಡೀಸ್‌ನ 41, ಶ್ರೀಲಂಕಾದ 36, ಇಂಗ್ಲೆಂಡ್‌ನ 30, ನ್ಯೂಜಿಲ್ಯಾಂಡ್‌ನ 29 ಮತ್ತು ಅಫ್ಘಾನಿಸ್ಥಾನದ 20 ಕ್ರಿಕೆಟಿಗರು ಹೆಸರು ನೋಂದಾಯಿಸಿದ್ದಾರೆ.
ಹಾಗೆಯೇ ನಮೀಬಿಯಾ (5), ನೇಪಾಲ (15), ನೆದರ್ಲೆಂಡ್ಸ್ (1), ಒಮಾನ್ (3), ಸ್ಕಾಟ್ಲೆಂಡ್ (1), ಜಿಂಬಾಬ್ವೆ (2), ಐರ್ಲೆಂಡ್ (3), ಯುಎಇ (1) ಕ್ರಿಕೆಟಿಗರೂ ಐಪಿಎಲ್ ಆಡಲು ಉತ್ಸುಕರಾಗಿದ್ದಾರೆ.
ಈ ಬಾರಿಯ ಐಪಿಎಲ್‌ನಿಂದ ಪ್ರಮುಖ ಕ್ರಿಕೆಟಿಗರು ದೂರ ಉಳಿಯಲು ನಿರ್ಧರಿಸಿದ್ದಾರೆ. ಇವರಲ್ಲಿ ಇಂಗ್ಲೆಂಡಿ ನವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸ್ಟೋಕ್ಸ್, ರೂಟ್, ಆರ್ಚರ್ ಮತ್ತು ವುಡ್ ಈ ಯಾದಿಗೆ ಹೊಸತಾಗಿ ಸೇರ್ಪಡೆಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
M Chinnaswamy Stadium; ಶಾಂತಾ ಹೆಸರಿಡಲು ಸಮಸ್ಯೆಯೇನಿದೆ? ಕೆಎಸ್ಸಿಎ ತಾರತಮ್ಯವೇಕೆ?
PV Sindhu: ವಿಮಾನದಲ್ಲಿ ಶುರುವಾಯ್ತು ಸಿಂಧು-ದತ್ತಾ ಲವ್ ಸ್ಟೋರಿ
INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.