Nude: “ಬೆತ್ತಲೆ” ತೋರಿಸುವ ಕನ್ನಡಿಯಾಸೆಗೆ 9 ಲಕ್ಷ ರೂ. ನಷ್ಟ!
Team Udayavani, Aug 18, 2023, 7:10 AM IST
ನವದೆಹಲಿ: ನಿಮಗೆ ಎದುರಿರುವ ವ್ಯಕ್ತಿಗಳನ್ನು ಬೆತ್ತಲೆಯಾಗಿ ತೋರಿಸುವ, ಭವಿಷ್ಯವನ್ನು ಹೇಳುವ ಕನ್ನಡಿ ಬೇಕೇ? ಎಂಬ ಮಾತುಗಳಿಗೆ ಮರುಳಾದ ಉತ್ತರಪ್ರದೇಶದ ಅವಿನಾಶ್ ಕುಮಾರ್ ಶುಕ್ಲಾ ಬರೋಬ್ಬರಿ 9 ಲಕ್ಷ ರೂ. ಕಳೆದುಕೊಂಡಿದ್ದಾರೆ!
ಆಸೆಗೆ ಬಿದ್ದ 74 ವರ್ಷದ ವೃದ್ಧ ಅವಿನಾಶ್ ತಾವು ಮೋಸ ಹೋಗಿದ್ದು ಗೊತ್ತಾಗುತ್ತಿದ್ದಂತೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ವಂಚನೆಯ ಜಾಲವನ್ನು ಹೆಣೆದ ಪಶ್ಚಿಮ ಬಂಗಾಳದ ಪಾರ್ಥ ಸಿಂಘ್ರಾಯ್, ಮೊಲಯ ಸರ್ಕಾರ್, ಸುದೀಪ್ತ ಸಿನ್ಹಾ ರಾಯ್‌ರನ್ನು ಒಡಿಶಾದ ನಯಾಪಲ್ಲಿ ಪೊಲೀಸರು ಬಂಧಿಸಿದ್ದಾರೆ. ಅವರಿಂದ ಕಾರು, 28,000 ರೂ. ನಗದು, ಕೆಲ ನಕಲಿ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆಗಿದ್ದೇನು?:
ಸಿಂಗಾಪುರದ ಖ್ಯಾತ ಕಂಪನಿಯೊಂದರ ಉದ್ಯೋಗಿಗಳಂತೆ ಪ.ಬಂಗಾಳದ ಮೂವರು ವ್ಯಕ್ತಿಗಳು ನಟಿಸಿದ್ದಾರೆ. ಇದೇ ವೇಳೆ ಅವಿನಾಶ್‌ಗೂ ಇವರ ಪರಿಚಯವಾಗಿದೆ. ಈ ಮೂವರು ತಾವು ಪ್ರಾಚ್ಯ ವಸ್ತುಗಳನ್ನು ಹೊಂದಿದ್ದೇವೆ. ಅದರಲ್ಲೊಂದು ಈ ಅದ್ಭುತ ಕನ್ನಡಿ, ಅದಕ್ಕೆ ವಿಶೇಷ ಶಕ್ತಿಯಿದೆ. ಆ ಕನ್ನಡಿ ಮೂಲಕ ನೋಡಿದರೆ ಎದುರಿರುವ ವ್ಯಕ್ತಿ ನಿಮಗೆ ಬೆತ್ತಲೆಯಾಗಿ ಕಾಣುತ್ತಾನೆ. ನಾಸಾ ಕೂಡ ಅದನ್ನು ಬಳಸುತ್ತದೆ, ನೀವದನ್ನು ಕೊಳ್ಳಬೇಕಾದರೆ 2 ಕೋಟಿ ರೂ. ಕೊಡಿ ಎಂದು ನಂಬಿಸಿದ್ದಾರೆ. ಅಂತೂ ಭುವನೇಶ್ವರದ ಹೋಟೆಲ್‌ಗೆ ಅವಿನಾಶ್‌ರನ್ನು ಕರೆಸಿಕೊಳ್ಳಲು ಯಶಸ್ವಿಯಾಗಿದ್ದಾರೆ. ಅಲ್ಲಿ ಇವೆಲ್ಲ ಬರೀ ನಾಟಕ ಎಂದು ಗೊತ್ತಾಗಿದೆ. ಅಷ್ಟರಲ್ಲಾಗಲೇ ಈ ವ್ಯಕ್ತಿ 9 ಲಕ್ಷ ರೂ. ಕಳೆದುಕೊಂಡಾಗಿತ್ತು!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Uttar Pradesh: 6 ಪುರುಷರ ವರಿಸಿ ವಂಚಿಸಿದ ಯುವತಿಯ ಗ್ಯಾಂಗ್ ಜೈಲಿಗೆ
Road Project: ಶಿರಾಡಿ ಘಾಟ್ ಸುರಂಗ ಯೋಜನೆಗೆ ಡಿಪಿಆರ್ ರಚಿಸಿ: ಕೇಂದ್ರ ಸೂಚನೆ
Hosur ವಿಮಾನ ನಿಲ್ದಾಣಕ್ಕೆ 2 ಸ್ಥಳ ನಿಗದಿಪಡಿಸಿದ ತಮಿಳುನಾಡು
GST: ಖರೀದಿ, ಮಾರಾಟ ದರದ ವ್ಯತ್ಯಾಸಕ್ಕಷ್ಟೇ 18% ಜಿಎಸ್‌ಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shirva ಹಳೆವಿದ್ಯಾರ್ಥಿ ಸಂಘ; ಡಿ.29: ದಶಮಾನೋತ್ಸವ, ನೂತನ ಉಪಹಾರ ಗೃಹ ಸಮರ್ಪಣೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.