Sullia: ರಸ್ತೆ ಬದಿಯ ಮಣ್ಣಿನ ದಿಬ್ಬಕ್ಕೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ
Team Udayavani, Dec 9, 2024, 10:05 PM IST
ಸುಳ್ಯ: ಚಾಲಕನ ನಿಯಂತ್ರಣ ತಪ್ಪಿ ಕಾರೊಂರು ರಸ್ತೆ ಬದಿಯ ಮಣ್ಣಿನ ದಿಬ್ಬಕ್ಕೆ ಢಿಕ್ಕಿ ಪಲ್ಟಿಯಾದ ಪರಿಣಾಮ ಇಬ್ಬರು ಗಾಯಗೊಂಡ ಘಟನೆ ಮಾಣಿ-ಮೈಸೂರು ಹೆದ್ದಾರಿಯ ಕೊಡಗು ಸಂಪಾಜೆಯ ಕೊಯನಾಡಿನಲ್ಲಿ ಸಂಭವಿಸಿದೆ.
ಮಡಿಕೇರಿ ಮೂಲದವರು ಸಂಚರಿಸುತ್ತಿದ್ದ ಈ ಕಾರಿನ ಚಾಲಕ ಹಾಗೂ ಇನ್ನೋರ್ವ ಪ್ರಯಾಣಿಕ ಗಾಯಗೊಂಡಿದ್ದು, ಅವರನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ತೋಡಿಗೆ ಬಿದ್ದ ರಿಕ್ಷಾ
ಸುಳ್ಯ: ಚಾಲಕನ ನಿಯಂತ್ರಣ ತಪ್ಪಿದ ರಿಕ್ಷಾವೊಂದು ರಸ್ತೆ ಬದಿಯ ತೋಡಿಗೆ ಬಿದ್ದ ಘಟನೆ ಸುಳ್ಯ-ಐವರ್ನಾಡು ರಸ್ತೆಯ ಬಾಂಜಿಕೋಡಿಯಲ್ಲಿ ರವಿವಾರ ಸಂಭವಿಸಿದೆ.
ಶಶಿ ಎಂಬವರು ಚಲಾಯಿಸುತ್ತಿದ್ದ ಈ ರಿಕ್ಷಾವು ಸುಳ್ಯ ಕಡೆಯಿಂದ ಐವರ್ನಾಡಿಗೆ ಬಂದು ಸುಳ್ಯಕ್ಕೆ ಮರಳುತ್ತಿತ್ತು. ರಿಕ್ಷಾ ಜಖಂಗೊಂಡಿದ್ದು, ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಸ್ಥಳೀಯರ ಸಹಕಾರದಲ್ಲಿ ರಿûಾವನ್ನು ಮೇಲಕ್ಕೆತ್ತಲಾಯಿತು.
ರಿಕ್ಷಾಚಾಲಕ ಆತ್ಮಹತ್ಯೆ
ಸುಳ್ಯ: ರಿಕ್ಷಾ ಚಾಲಕ, ತೊಡಿಕಾನ ನಿವಾಸಿ ಜಗದೀಶ (50) ಅವರು ಸುಳ್ಯದ ಮನೆಯಲ್ಲಿ ಸೋಮವಾರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅವರು ಸುಳ್ಯ ಜೂನಿಯರ್ ಕಾಲೇಜು ರಸ್ತೆಯ ಸಮೀಪದಲ್ಲಿ ಬಾಡಿಗೆ ಮಾಡುತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಒಂದೇ ವೃತ್ತ; ಪೊಲೀಸ್ ಚೌಕಿ 5!; ಕಲ್ಸಂಕ ಜಂಕ್ಷನ್‌ನಲ್ಲಿ ಮುಗಿಯದ ಸಂಚಾರ ಸಮಸ್ಯೆ
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್
Mangaluru: ಪಾಲಿಕೆ ಕಚೇರಿ ಪಕ್ಕದಲ್ಲೇ ಫುಟ್‌ಪಾತ್ ಅವ್ಯವಸ್ಥೆ
Nanthoor: ಮನೆಯಿಂದ ಮಣ್ಣು ತಂದು ರಸ್ತೆಗುಂಡಿ ಮುಚ್ಚುವ ಹಿರಿಯ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.