![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Jan 18, 2024, 9:35 PM IST
ನವದೆಹಲಿ: ಆ್ಯಂಟಿ ಬಯಾಟಿಕ್‌ಗಳನ್ನು ಬೇಕಾಬಿಟ್ಟಿ ಬಳಕೆ ಮಾಡುವುದರ ಬಗ್ಗೆ ಕೇಂದ್ರ ಸರ್ಕಾರ ಗುರುವಾರ ನಿಷೇಧ ಹೇರಿದೆ. ವೈದ್ಯರ ಪ್ರಿಸ್ಕ್ರಿಪ್ಶನ್ (ವೈದ್ಯರು ನೀಡುವ ಚೀಟಿ) ಇಲ್ಲದೆ ಔಷಧ ಮಳಿಗೆಗಳು ಕೆಲವೊಂದು ಆ್ಯಂಟಿ ಬಯಾಟಿಕ್‌ಗಳನ್ನು ಮಾರಾಟ ಮಾಡುವಂತೆ ಇಲ್ಲ. ಜತೆಗೆ ವೈದ್ಯರೂ ಕೂಡ ಯಾವ ಕಾರಣಕ್ಕಾಗಿ ಅವುಗಳನ್ನು ನೀಡಲಾಗಿದೆ ಎಂಬ ಬಗ್ಗೆ ಕಾರಣಗಳನ್ನು ನೀಡಬೇಕು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ವ್ಯಾಪ್ತಿಯ ಆರೋಗ್ಯ ಸೇವೆಗಳ ಮಹಾ ನಿರ್ದೇಶನಾಲಯ (ಡಿಜಿಎಚ್‌ಎಸ್) ಕಟ್ಟುನಿಟ್ಟಿನ ನಿಯಮಗಳನ್ನು ಹೇರಿದೆ.
ಅಗತ್ಯ ಬಿದ್ದಲ್ಲಿ ವೈದ್ಯರು ನೀಡುವ ಪ್ರಿಸ್ಕ್ರಿಪ್ಶನ್ ಅನುಸಾರವಾಗಿಯೇ ಆ್ಯಂಟಿ ಬಯಾಟಿಕ್‌ಗಳನ್ನು ನೀಡಬೇಕು ಎಂದು ಡಿಜಿಎಚ್‌ಎಸ್ ಸ್ಪಷ್ಟಪಡಿಸಿದೆ. ಇದರ ಜತೆಗೆ ವೈದ್ಯರು ಆ್ಯಂಟಿ ಬಯಾಟಿಕ್‌ಗಳನ್ನು ನೀಡುವ ಸಂದರ್ಭದಲ್ಲಿ ಯಾವ ಕಾರಣಕ್ಕಾಗಿ ಅವುಗಳನ್ನು ನೀಡಲಾಗುತ್ತದೆ ಎಂಬುದನ್ನು ಪ್ರಿಸ್ಕ್ರಿಪ್ಶನ್ (ವೈದ್ಯರ ಚೀಟಿ)ನಲ್ಲಿ ನಮೂದಿಸಬೇಕು. ಜತೆಗೆ ಔಷಧ ಮಾರಾಟ ಮಾಡುವ ಮಳಿಗೆಗಳು ಕೂಡ ವೈದ್ಯರು ನೀಡುವ ಚೀಟಿಯ ಹೊರತಾಗಿ ಅಂಥ ಔಷಧಗಳನ್ನು ನೇರವಾಗಿ ಮಾರಾಟ ಮಾಡಲೇಬಾರದು ಎಂದು ದೇಶದ ಎಲ್ಲಾ ವೈದ್ಯಕೀಯ ಕಾಲೇಜುಗಳಿಗೆ, ವೈದ್ಯರ ಸಂಘಟನೆಗಳು, ಔಷಧ ಮಾರಾಟ ಮಾಡುವ ಮಳಿಗೆಗಳ ಒಕ್ಕೂಟಗಳಿಗೆ ಬರೆದಿರುವ ಪತ್ರದಲ್ಲಿ ಆರೋಗ್ಯ ಸೇವೆಗಳ ಮಹಾ ನಿರ್ದೇಶನಾಲಯ ಗುರುವಾರ ತಿಳಿಸಿದೆ.
ಏಕೆ ಇಂಥ ಕ್ರಮ?
ಹೆಚ್ಚಿನ ಪ್ರಮಾಣದಲ್ಲಿ ಆ್ಯಂಟಿಬಯಾಟಿಕ್‌ಗಳನ್ನು ಬಳಕೆ ಮಾಡುವುದರಿಂದ ನಿಗದಿತ ರೋಗಗಳು ಔಷಧಗಳ ವಿರುದ್ಧವೇ ಪ್ರತಿರೋಧವನ್ನು ಬೆಳೆಸಿಕೊಳ್ಳುತ್ತವೆ. ಇತ್ತೀಚಿನ ವರ್ಷಗಳಲ್ಲಿ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಇದೊಂದು ಆರೋಗ್ಯ ಸಮಸ್ಯೆಯಾಗಿ ಬಾಧಿಸುತ್ತಿದೆ. ಹೀಗಾಗಿ, ಆ್ಯಂಟಿ ಬಯಾಟಿಕ್‌ಗಳನ್ನು ನೀಡುವುದರ ಮೇಲೆ ನಿಯಂತಣ ಹೇರಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಸದಸ್ಯ ರಾಷ್ಟ್ರಗಳಿಗೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ.
ಆ್ಯಂಟಿ ಬಯಾಟಿಕ್‌ಗಳ ದುಷ್ಪರಿಣಾಮ
– 2019ರಲ್ಲಿ 4.95 ಮಿಲಿಯ ಮಂದಿ ಔಷಧ ಪರಿಣಾಮಕಾರಿಯಾಗದೆ ಸಾವು
– ವೈರಸ್, ಬ್ಯಾಕ್ಟೀರಿಯಾಗಳು ಔಷಧಗಳ ವಿರುದ್ಧ ಪ್ರತಿಕಾಯ ಬೆಳೆಸಿಕೊಳ್ಳುವುದರಿಂದ ಅಪಾಯ
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Stampede: ಕುಂಭಕ್ಕೆ ಹೊರಟವರು ಕಾಲ್ತುಳಿತಕ್ಕೆ ಬಲಿ! ದೆಹಲಿ ರೈಲುನಿಲ್ದಾಣದಲ್ಲಿ ಆಗಿದ್ದೇನು?
You seem to have an Ad Blocker on.
To continue reading, please turn it off or whitelist Udayavani.