ಬಡ ಮಕ್ಕಳ ಹುಟ್ಟುಹಬ್ಬ ಆಚರಣೆಯಲ್ಲಿ ಖುಷಿ ಕಂಡ ದಂಪತಿ


Team Udayavani, Jun 3, 2020, 7:00 PM IST

Happy-Birthday

ಮೇರಿ ಡೇವಿಸ್‌ ಆಗಷ್ಟೇ ಗರ್ಭ ಧರಿಸಿದ್ದಳು. ಅವಳ ಕಣ್ಣಲ್ಲಿ ಸಂತೋಷ ಇತ್ತು. ಪತಿ ಅರಿ ಕದಿನ್‌ ಅವರಂತೂ ಸ್ವರ್ಗವೇ ಅಂಗೈಯಲ್ಲಿದೆ ಎಂಬುವಷ್ಟು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದರು. ಪತಿ ಕದಿನ್‌ ಪತ್ನಿ ಡೇವಿಸ್‌ನ ಆರೋಗ್ಯ, ಊಟ ಉಪಾಚಾರಗಳನ್ನು ದಿನವಿಡೀ ಚಾಚು ತಪ್ಪದೇ ವಿಚಾರಿಸುತ್ತಿದ್ದನು. ದಂಪತಿಯು ಮಗುವಿನ ಹೆಸರೂ ಗೊತ್ತುಪಡಿಸಿದ್ದರು. ಇಷ್ಟವಾಗುವ ಆಟಿಕೆ ಸಾಮಗ್ರಿ ಸಹಿತ ಏನೇನೂ ಬೇಕೆಂಬುದನ್ನು ಗೊತ್ತು ಪಡಿಸಿ ಆಗಲೇ ಖರೀದಿಸಿದ್ದರು. ಮಗುವಿನ ಸ್ಪರ್ಶ ಪಡೆಯುವುದಕ್ಕಾಗಿಯೇ ಅವರು ಕಾತುರರಾಗಿದ್ದರು.

ಆದರೆ! ಆದದ್ದೇ ಬೇರೆ, ಆರೋಗ್ಯದಲ್ಲಿ ಏರುಪೇರಾದ್ದರಿಂದಾಗಿ ಪತ್ನಿ ಡೇವಿಸ್‌ ಗರ್ಭಪಾತದಿಂದ ತಮ್ಮ ಮೊದಲ ಮಗುವನ್ನು ಕಳೆದುಕೊಳ್ಳಬೇಕಾಗಿ ಬಂತು. ಮೊದಲ ಮಗುವಿನ ಸ್ಪರ್ಶಕ್ಕಾಗಿ ಬೆಟ್ಟದಷ್ಟು ಹೊತ್ತಿದ್ದ ಕನಸು ನುಚ್ಚು ನೂರಾಯಿತು. ಇನ್ನೇನೂ ಜಗತ್ತು ಬೇಡವಾಗಷ್ಟು ಅವರಿಗೆ ಬೇಸರವಾಗಿತ್ತು. ನಿರೀಕ್ಷೆಗಳು ಹುಸಿಯಾಗಿದ್ದವು. ಆದರೂ ದಂಪತಿ ಎದೆಗುಂದಲಿಲ್ಲ. ಮುಂದೆ ತಮ್ಮ ಮಕ್ಕಳ ಸಂತೋಷವನ್ನು ಬೇರೆಯವರ ಕಣ್ಣಲ್ಲಿ ಕಾಣಲು ಮುಂದಾದರು. ಲಾಸ್‌ ಏಂಜೆಲಿಸ್‌ನ ಬೀದಿಯಲ್ಲಿರುವ ಅನಾಥ ಬಡ ಮಕ್ಕಳಿಗೆ ಆಶ್ರಯವಾದರು.

ಅದು 2013ರ ವರ್ಷ. ಅರಿ ಕದಿನ್‌ ಡೇವಿಸ್‌ ದಂಪತಿ ತಮ್ಮ ಮಗು ಇದ್ದರೆ ಒಂದು ವರ್ಷದವನಾಗಿರುತ್ತಿದ್ದ, ಅವನ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಅಚರಿಸುತ್ತಿದ್ದರು. ಆದರೆ ವಿಧಿ ನಮ್ಮ ಸಂತೋಷವನ್ನು ಕಿತ್ತುಕೊಂಡಿತು ಎಂಬ ನೋವು ತೋಡಿಕೊಳ್ಳುವಾಗಲೇ ಅವರಿಗೆ ಹೊಳೆದದ್ದು ಬೇರೆ ಮಕ್ಕಳ ಕಣ್ಣಲ್ಲಿ ಸಂತೋಷ ಕಾಣುವುದು. ಅದಕ್ಕೆ ಅವರು, ಲಾಸ್‌ ಎಂಜೆಲಿಸ್‌ನಲ್ಲಿ ಬಡ ಮಕ್ಕಳ ಹುಟ್ಟುಹಬ್ಬವನ್ನು ಆಚರಿಸಲು ಮುಂದಾದರು. ಇಲ್ಲಿನ ಯೂನಿಯನ್‌ ರೆಸ್ಕೂ ಮಿಷನ್‌ನಲ್ಲಿ ಒಂದು ಕೋಣೆಯನ್ನು ಇದಕ್ಕೆಂದು ತೆಗೆದುಕೊಂಡು, ಇಲ್ಲಿನ 15ಕ್ಕೂ ಹೆಚ್ಚು ಮಕ್ಕಳ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಅದೆಷ್ಟೂ ದಿನದಿಂದ ಸಂಗೀತವನ್ನೇ ಕೇಳದ ಡೇವಿಸ್‌, ಈ ಸಂದರ್ಭದಿಂದಾಗಿ ಸಂಗೀತ ಕೇಳಿದಳು. ಖುಷಿ ಪಟ್ಟಳು. ಆ 15 ಮಕ್ಕಳು ಕೂಡ ತುಂಬ ಸಂತೋಷ ಪಟ್ಟು, ಕುಣಿದವು, ಕೂಗಿದವು. “ಹ್ಯಾಪಿ ಬರ್ತ್‌ಡೇ’ ಎಂದು ಹರ್ಷೋದ್ಘಾರದ ಮಳೆ ಸುರಿಸಿದವು.

ಆ ದಂಪತಿಗೆ ತಮ್ಮ ಮಗುವಿನ ನಿರೀಕ್ಷೆಯಷ್ಟೇ ಖುಷಿ ನೀಡಿದ ಮೇಲೆ, ಅವರು ಪ್ರತಿ ತಿಂಗಳು ಕೂಡ ಬಡ ಮಕ್ಕಳ ಹುಟ್ಟು ಹಬ್ಬವನ್ನು ಆಚರಿಸಲು ಮುಂದಾದರು. ತಿಂಗಳಿನಲ್ಲಿ ಹುಟ್ಟು ಹಬ್ಬವನ್ನು ಆಚರಿಸುವ ಮಕ್ಕಳನ್ನು ಒಂದು ದಿನ ಎಲ್ಲರನ್ನೂ ಸೇರಿಸಿ ಅವರ ಬರ್ತ್‌ಡೇಯನ್ನು ಆಚರಿಸಿದರು. ಇದರಿಂದ ಅವರಿಗೆ ಮಗು ಇರದ ಅನಾಥ ಪ್ರಜ್ಞೆ ಕೂಡ ದೂರವಾಯಿತು. ಜೀವನದಲ್ಲಿ ಏನೋ ಗಳಿಸಿದಷ್ಟೇ ಹೆಮ್ಮೆ ಪಟ್ಟರು. ಈಗಾಗಲೇ ಇವರು ಸುಮಾರು 88 ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ.

-ಮಿಥುನಾ, ಮೈಸೂರು

ಟಾಪ್ ನ್ಯೂಸ್

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-uv-fusion

Government School: ಅಳಿವಿನಂಚಿನಲ್ಲಿ ನನ್ನೂರ ಸರಕಾರಿ ಶಾಲೆ

12-uv-fusion

UV Fusion: ಹಬ್ಬ ಹರಿದಿನಗಳಲ್ಲಿ ಯುವಜನರ ಪಾತ್ರ

11-uv-fusion

UV Fusion: ಹುಲಿ ವೇಷವೆಂಬ ವಿಸ್ಮಯ

9-uv-fusion

Family: ನಾವು ನಮ್ಮವರೊಂದಿಗೆ ಕಳೆಯುವ ಸಮಯ ಅಮೂಲ್ಯ

8-uv-fusion

Ratan Tata: ಉದ್ಯಮ ಕ್ಷೇತ್ರದ ಅಜಾತಶತ್ರು ರತನ್‌ ಟಾಟಾ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

ACC U-19 Asia Cup: ರಾಜ್ಯದ ಮೂವರು

ACC U-19 Asia Cup: ರಾಜ್ಯದ ಮೂವರು

Ranji Trophy: ಕರ್ನಾಟಕಕ್ಕೆ ನಾಕೌಟ್‌ ಕಷ್ಟ

Ranji Trophy: ಕರ್ನಾಟಕಕ್ಕೆ ನಾಕೌಟ್‌ ಕಷ್ಟ

Udupi: ರೈಲು ಬಡಿದು ವ್ಯಕ್ತಿ ಸಾವು

Udupi: ರೈಲು ಬಡಿದು ವ್ಯಕ್ತಿ ಸಾವು

Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ

Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ

Ranji Trophy: ಶಮಿ ಭರ್ಜರಿ ಪುನರಾಗಮನ; ಬಂಗಾಳಕ್ಕೆ ಜಯ

Ranji Trophy: ಶಮಿ ಭರ್ಜರಿ ಪುನರಾಗಮನ; ಬಂಗಾಳಕ್ಕೆ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.