ಅಂತ್ಯಸಂಸ್ಕಾರಕ್ಕೂ ಕಚ್ಚಾಟ: ಸಂಘರ್ಷ ತಪ್ಪಿಸಿದ ಹೈಕೋರ್ಟ್
Team Udayavani, Aug 3, 2023, 11:50 PM IST
ಇಂಫಾಲ: ಬೂದಿ ಮುಚ್ಚಿದ ಕೆಂಡದಂತಿರುವ ಮಣಿಪುರದಲ್ಲಿ, ಹಿಂಸಾಚಾರದಲ್ಲಿ ಮಡಿದವರ ಅಂತ್ಯಸಂಸ್ಕಾರದ ವಿಚಾರವಾಗಿ ಮತ್ತೂಂದು ಸುತ್ತಿನ ಸಂಘರ್ಷದ ಕಿಡಿ ಹೊತ್ತಿಕೊಳ್ಳುವ ನಡುವೆಯೇ, ಮಣಿಪುರ ಹೈಕೋರ್ಟ್ ಮಧ್ಯಪ್ರವೇಶಿಸಿ, ತನ್ನ ಸಮಯೋಚಿತ ನಿರ್ಣಯದಿಂದ ಗಲಭೆ ಕಿಡಿಗೆ ತಣ್ಣೀರೆರಚಿದೆ.
ಹೌದು ಮಣಿಪುರದಲ್ಲಿ ಮೈತೇಯಿ ಮತ್ತು ಕುಕಿ ಸಮುದಾಯದ ನಡುವಿನ ಸಂಘರ್ಷದಲ್ಲಿ ಹಲವರು ಮೃತಪಟ್ಟಿದ್ದು, ಕುಕಿ ಜನಾಂಗದವರು ತಮ್ಮವರ 35 ಶವಗಳನ್ನೂ ಸಾಮೂಹಿಕ ಅಂತ್ಯಸಂಸ್ಕಾರ ಮಾಡಲು ನಿರ್ಧರಿಸಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ಮೈತೇಯಿ ಜನಾಂಗ ಆಕ್ಷೇಪ ವ್ಯಕ್ತಪಡಿಸಿ, ಹೈಕೋರ್ಟ್‌ನಲ್ಲಿ ನಡುರಾತ್ರಿ ಅರ್ಜಿ ಸಲ್ಲಿಸಿತ್ತು.
ಬಳಿಕ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳಾದ ಎಂ.ವಿ.ಮುರಳೀಧರನ್ ಮುಂಜಾನೆ 6 ಗಂಟೆಗೇ ಅರ್ಜಿ ಆಲಿಸಿದ್ದಾರೆ. ಸದ್ಯ ಅಂತ್ಯ ಸಂಸ್ಕಾರಕ್ಕೆ ತಡೆ ನೀಡಿ, ಆಡಳಿತಾಧಿಕಾರಿಗಳಿಗೆ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ದೇಶಿಸಿದ್ದಾರೆ. ಅಲ್ಲದೇ ಕುಕಿ ಜನಾಂಗಕ್ಕೆ ಬೇಕಿದ್ದರೆ ಸರಕಾರದಿಂದ ಭೂಮಿ ಪಡೆದು ಅಲ್ಲಿ, ಒಂದು ವಾರದ ಬಳಿಕ ಅಂತ್ಯ ಸಂಸ್ಕಾರ ನಡೆಸುವಂತೆ ಸೂಚನೆ ನೀಡಿದ್ದಾರೆ.
ಘರ್ಷಣೆ: 19 ಮಂದಿಗೆ ಗಾಯ: ಬಿಷ್ಣುಪುರ ಜಿಲ್ಲೆಯಲ್ಲಿ ಮತ್ತೂಮ್ಮೆ ಉದ್ವಿಗ್ನತೆ ಶುರುವಾಗಿದೆ. ಭದ್ರತಾ ಪಡೆಗಳು ಅಳವಡಿಸಿರುವ ಬ್ಯಾರಿಕೇಡ್‌ಗಳನ್ನು ದಾಟಲು ಮೈತೇಯಿ ಮಹಿಳೆಯರು ಮುಂದಾಗಿದ್ದು, ಅವರನ್ನು ತಡೆದ ಪರಿಣಾಮ ಮೈತೇಯಿ ಜನಾಂಗ ಮತ್ತು ಭದ್ರತಾ ಸಿಬಂದಿ ನಡು ವೆಯೇ ಘರ್ಷಣೆ ಏರ್ಪಟ್ಟಿದೆ. ಸಿಬಂದಿ ಮೇಲೆ ಜನರು ಕಲ್ಲುತೂರಾಟ ನಡೆಸಿದ್ದು, ಗುಂಪನ್ನು ಚದುರಿಸಲು ಪೊಲೀಸರು ಅಶ್ರು ವಾಯು ಪ್ರಯೋಗಿಸಿದ್ದಾರೆ. ಘಟನೆಯಲ್ಲಿ 19 ಮಂದಿ ಗಾಯಗೊಂಡಿದ್ದಾರೆ. ಪೂರ್ವ ಮತ್ತು ಪಶ್ಚಿಮ ಇಂಫಾಲದಲ್ಲಿ ಹಿಂಪಡೆದಿದ್ದ ಕರ್ಫ್ಯೂವನ್ನು ಘಟನೆ ಬಳಿಕ ಮತ್ತೆ ಜಾರಿಗೊಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.