ಮಣಿಪುರದಲ್ಲಿರುವುದೇ ಒಂದು FSL !
-ಇಡೀ ರಾಜ್ಯದಲ್ಲಿರುವುದು ಒಂದೇ ಒಂದು ವಿಧಿವಿಜ್ಞಾನ ಪ್ರಯೋಗಾಲಯ
Team Udayavani, Aug 11, 2023, 6:36 AM IST
ಇಂಫಾಲ: ಜನಾಂಗೀಯ ಗಲಭೆ ಹಿನ್ನೆಲೆಯಲ್ಲಿ ಮಣಿಪುರದಲ್ಲಿ ಕಳೆದ ಮೂರು ತಿಂಗಳಲ್ಲಿ 6,500ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಸುಮಾರು 6 ಲಕ್ಷ ಮದ್ದು-ಗುಂಡುಗಳು ಹಾಗೂ 4,000 ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಲಾಗಿದೆ. 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 75 ಹತ್ಯೆ ಪ್ರಕರಣಗಳು ದಾಖಲಾಗಿವೆ. ಪೊಲೀಸ್ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. ಆದರೆ ರಾಜ್ಯದಲ್ಲಿ ಇರುವುದು ಒಂದೇ ಒಂದು ವಿಧಿವಿಜ್ಞಾನ ಪ್ರಯೋಗಾಲಯ (ಎಫ್ಎಸ್‌ಎಲ್). ಪ್ರಾದೇಶಿಕ ಮಟ್ಟದಲ್ಲಿ ಒಂದೂ ಕೂಡ ಎಫ್ಎಸ್‌ಎಲ್ ಇಲ್ಲ.
ಕೇಂದ್ರ ಗೃಹ ಸಚಿವಾಲಯದ ಮಾಹಿತಿ ಪ್ರಕಾರ, ಪಕ್ಕದ ಅಸ್ಸಾಂನಲ್ಲಿ ಐದು ಪ್ರಾದೇಶಿಕ ಎಫ್ಎಸ್‌ಎಲ್‌ಗಳಿವೆ. ಒಡಿಶಾದಲ್ಲಿ ಮೂರು ಎಫ್ಎಸ್‌ಎಲ್‌ಗಳಿವೆ. ಮಣಿಪುರದ ಪರಿಸ್ಥಿತಿಯನ್ನು ಅವಲೋಕಿಸಿ, ತನಿಖೆಯನ್ನು ತೀವ್ರಗೊಳಿಸಲು ಅಧಿಕಾರಿಗಳು ಸ್ಯಾಂಪಲ್‌ಗಳನ್ನು ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಹಾಗೂ ಇತರೆ ರಾಜ್ಯಗಳ ಎಫ್ಎಸ್‌ಎಲ್‌ಗಳಿಗೆ ಕಳುಹಿಸುತ್ತಿದ್ದಾರೆ. “ಮಣಿಪುರದ ಅನೇಕ ಪ್ರಕರಣಗಳಿಗೆ ಎಫ್ಎಸ್‌ಎಲ್ ಅಗತ್ಯವಿದೆ. ಸಾಕ್ಷ್ಯ ಸಂಗ್ರಹಕ್ಕೆ ಹಾಗೂ ಸರಿಯಾದ ತನಿಖೆಗೆ ಇದು ಸಹಕಾರಿ. ಪ್ರಮುಖ ಪ್ರಕರಣಗಳಲ್ಲಿ ಸ್ಯಾಂಪಲ್‌ಗಳನ್ನು ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೇಂದ್ರ ಗೃಹ ಸಚಿವಾಲಯದ ಮಾಹಿತಿ ಪ್ರಕಾರ, ಹಾಲಿ ಎಫ್ಎಸ್‌ಎಲ್‌ಗಳ ಸುಧಾರಣೆಗೆ ಹಾಗೂ ಹೊಸ ಎಫ್ಎಸ್‌ಎಲ್‌ಗಳ ಸ್ಥಾಪನೆಗೆ 6.21 ಕೋಟಿ ರೂ., 7.60 ಕೋಟಿ ರೂ., 9.11 ಕೋಟಿ ರೂ. ಹಾಗೂ 25.71 ಕೋಟಿ ರೂ.ಗಳನ್ನು ಕ್ರಮವಾಗಿ 2019-20, 2020-21, 2021-22 ಹಾಗೂ 2022-23ರಲ್ಲಿ ಬಿಡುಗಡೆ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.