ಹೆಣ್ಣು ಮಕ್ಕಳ ಪಾಲಿನ ಕಳ್ಳ-ಪೊಲೀಸ್‌ ಆಟ


Team Udayavani, May 19, 2020, 5:15 AM IST

aata poli

ಹಳ್ಳಿ ಮತ್ತು ಸಿಟಿ, ಈ ಎರಡೂ ಕಡೆಗಳಲ್ಲಿ ಹೆಣ್ಣು ಮಕ್ಕಳು ಬಹಳ ಸಂಭ್ರಮದಿಂದ ಆಡುತ್ತಿದ್ದ ಆಟವೆಂದರೆ, ಐ ಸ್ಪೈ. ತಮಾಷೆ ಅಂದರೆ, ಅದನ್ನು ಎಲ್ಲರೂ ಐಸ್‌ ಪೈಸ್‌ ಎಂದು ಕರೆಯುತ್ತಿದ್ದುದು. ಈಗಲೂ ಹೆಚ್ಚಿನವರು ಐಸ್‌ ಪೈಸ್‌  ಎಂದೇ ಕರೆಯುವುದುಂಟು. ಐ ಸ್ಪೈ ಅಂದರೆ, ನಾನು ಪತ್ತೆಹಚ್ಚಿದೆ ಎಂದು ಅಥವಾ ನಾನು ಕಂಡುಹಿಡಿದೆ ಎಂದು ಅರ್ಥ. ಹುಡುಗರು, ಹುಡುಗಿಯರು ಒಟ್ಟಿಗೇ ಸೇರಿ, ಅಥವಾ ಪ್ರತ್ಯೇಕವಾಗಿ ಈ ಆಟ ಆಡಬಹುದು.

ಇದನ್ನು ಹೆಚ್ಚಾಗಿ   ಹೆಣ್ಣುಮಕ್ಕಳು ಮಾತ್ರ ಆಡುವುದರಿಂದ, ಹುಡುಗಿಯರ ಆಟವೆಂದೇ ಪ್ರಸಿದ್ಧಿ. ಮನೆಗಳ ಎದುರು ಇರುವ ಗೋಡೆಯೇ ಈ ಆಟದ ಸ್ಟಾರ್ಟಿಂಗ್‌ ಪಾಯಿಂಟ್. ಇನ್ನು ಈ ಆಟದ ವಿಧಾನವೂ ಸೊಗಸಿನದ್ದೇ. ಆಟಕ್ಕೆ 10 ಜನ ಸೇರಿರುತ್ತಾರೆ  ಅಂದುಕೊಳ್ಳೋಣ. ಆ ಹತ್ತು ಜನರೂ ಮೊದಲು ಪ್ಲಸ್‌ ಹಾಕುತ್ತಾರೆ. ಯಾರು ಫೇಲ್‌ ಆಗುತ್ತಾರೋ, ಅವರಿಗೆ ಉಳಿದವರನ್ನು ಹಿಡಿಯಬೇಕಾದ ಕೆಲಸ. ಆಟ ಶುರುವಾಗುವುದು ಹೀಗೆ- ಪ್ಲಸ್‌ ಹಾಕಿದಾಗ ಪಾಸ್‌ ಆಗದೆ ಉಳಿಯುತ್ತಾರಲ್ಲ,

ಅವರು ಗೋಡೆಗೆ ಮುಖ ಮುಚ್ಚಿಕೊಂಡು ನಿಂತು 1 ರಿಂದ 10 ರವರೆಗೆ ಎಣಿಸಬೇಕು. (ಕೆಲವು ಕಡೆ ಯಾವುದಾದರೂ ಹಾಡು ಹೇಳುವ ಪದತಿಯೂ ಇದೆ.) 10 ಎಂದು ಎಣಿಸಿ ಮುಗಿಸುವುದರೊಳಗೆ ಎಲ್ಲರೂ ಗೋಡೆಯ ಆಚೀಚೆ,  ಮನೆಯ ಮೂಲೆ, ಬಾಗಿಲಿನ ಮರೆ…ಹೀಗೆ, ಎಲ್ಲೆಲ್ಲೋ ಅಡಗಿಕೊಳ್ಳಬೇಕು. 10 ಎಣಿಸಿದ್ದು ಮುಗಿದ ತಕ್ಷಣ, ಯಾರ್ಯಾರು ಎಲ್ಲೆಲ್ಲಿ ಅಡಗಿದ್ದಾರೆ ಎಂದು ನೋಡಿ, ಅವರಿಗಿಂತ ಮೊದಲೇ ಗೋಡೆಯ ಬಳಿ ಬಂದು, ಅದನ್ನು ಮುಟ್ಟಿ,  ಕಮಲಾ ಐ ಸ್ಪೈ, ಸೋನು ಐ ಸ್ಪೈ, ಪ್ರಿಯಾ ಐ ಸ್ಪೈ ಎಂದು ಹೇಳಬೇಕು.

ಹೀಗೇ ಆಟಕ್ಕೆ ಸೇರಿರುವ ಎಲ್ಲರನ್ನೂ ಪತ್ತೆ ಹಚ್ಚಬೇಕು. ಮೊದಲು ಸಿಕ್ಕಿಬಿದ್ದರಲ್ಲ: ಅವರು ಆಟ ಮುಂದುವರಿದಾಗ, ಗೋಡೆಗೆ ಮುಖ ಹಚ್ಚಿ, ಒಂದು- ಎರಡು ಹೇಳಿ,  ಉಳಿದವರನ್ನು ಹಿಡಿಯುವ ಕೆಲಸ ಮಾಡಬೇಕು. ಅಕಸ್ಮಾತ್‌, ಅಡಗಿದ್ದವರು ಬೇಗ ಓಡಿ ಬಂದು ತಾವೇ ಮೊದಲು ಗೋಡೆ ಮುಟ್ಟಿ, ಐ ಸ್ಪೈ ಅಂದುಬಿಟ್ಟರೆ, ಮೊದಲು ಹಿಡಿಯಲು ನಿಂತಿದ್ದವರೇ ಮತ್ತೆ ಅದೇ ಕೆಲಸ ಮಾಡಬೇಕು! ಇದು, ಐ  ಸ್ಪೈ ಆಟದ ಗಮ್ಮತ್ತು. ಹೆಣ್ಣುಮಕ್ಕಳು ಮನೆಯ ಮುಂದೆಯೇ ಇದ್ದು ಆಡಬಲ್ಲಂಥ ಆಟ ಇದು. ಹಾಗಾಗಿ, ಈ ಆಟಕ್ಕೆ ಮನೆಯ ಹೆಂಗಸರ/ ಹಿರಿಯರ ಆಕ್ಷೇಪ ಇರಲಿಲ್ಲ. ಇದು ಹೆಣ್ಣು ಮಕ್ಕಳ ಪಾಲಿಗೆ ಕಳ್ಳ- ಪೊಲೀಸ್‌ ಥರದ ಆಟ  ಆಗಿದ್ದರಿಂದ, ಅವರೂ ಆಟವನ್ನು ಎಂಜಾಯ್‌ ಮಾಡುತ್ತಿದ್ದರು.

ಟಾಪ್ ನ್ಯೂಸ್

IPL Mega Auction: Here is the auction information for the third set of players

IPL Mega Auction: ಮೂರನೇ ಸೆಟ್‌ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ

Supreme Court

Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

kangana-2

Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

kl-rahul

IPL Auction: ‌ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್‌ ರಾಹುಲ್;‌ ಖರೀದಿ ಆರಂಭಿಸಿದ ಆರ್‌ ಸಿಬಿ

sanjay-raut

Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

1-huliraya

Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ

IPL Mega Auction: Here is the auction information for the third set of players

IPL Mega Auction: ಮೂರನೇ ಸೆಟ್‌ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ

Supreme Court

Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ‌ ಒಂದು ವರ್ಷದ ಮರಿ ಚಿರತೆ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.