ಲಾಠಿ ಹಿಡಿವ ಕೈ ಕೊಳಲು ಹಿಡಿದಾಗ…
Team Udayavani, May 18, 2020, 5:40 AM IST
ಮಂಗಳೂರು: ನಗರದ ಕದ್ರಿ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಮನೋಜ್ ಗಟ್ಟಿ ಅವರ ಕೊಳಲು ವಾದನ ಪ್ರತಿಭೆ ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗಿದೆ.
ಲಾಠಿ ಹಿಡಿಯುವ ಕೈ ಕೆಲವೊಮ್ಮೆ ಕೊಳಲು ಹಿಡಿದು ನುಡಿಸುವಾಗ ಸುಮಧುರ ಸಂಗೀತ ಮಾಧುರ್ಯ ಪಸರಿಸುತ್ತದೆ. ಲಾಠಿಯು ಜನರಿಗೆ ಭಯ ಮತ್ತು ರಕ್ಷಣೆಯನ್ನು ಒದಗಿಸುತ್ತಿದ್ದರೆ ಕೊಳಲಿನ ಧ್ವನಿ ಜನರನ್ನು ತನ್ನತ್ತ ಆಕರ್ಷಿಸುತ್ತದೆ.
ಮನೋಜ್ 29 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿದ್ದು, ಮೂಲ್ಕಿ, ಮಂಗಳೂರು ಗ್ರಾಮಾಂತರ ಠಾಣೆ, ಬರ್ಕೆ ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಕದ್ರಿ ಠಾಣೆಯಲ್ಲಿ ಹೆಡ್ ಕಾನ್‌ಸ್ಟೇಬಲ್ ಆಗಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬಾಲ್ಯದಿಂದಲೂ ಕೊಳಲು ಆಸಕ್ತಿ ರೂಢಿಸಿಕೊಂಡಿದ್ದಾರೆ. ಕೆಲವು ಸಭೆ, ಸಮಾರಂಭ, ಕಾರ್ಯಕ್ರಮಗಳಲ್ಲಿ ಕೊಳಲು ವಾದನ ಕಛೇರಿ ನೀಡಿದ್ದಾರೆ.
ಬಾಲ್ಯದಲ್ಲಿ ಜಾತ್ರೆಯ ಸಂತೆಯಲ್ಲಿ ಮಾರಾಟಕ್ಕೆ ಇರಿಸಿದ್ದ ಕೊಳಲುಗಳನ್ನು ನೋಡಿ ಆಕರ್ಷಿತನಾಗಿದ್ದೆ. ಹಾಗೆ ಅಲ್ಲಿಂದ ಕೊಳಲು ಖರೀದಿಸಿಕೊಂಡು ಬಂದು ಅದನ್ನು ನುಡಿಸಲು ಅಭ್ಯಾಸ ಮಾಡುತ್ತಿದ್ದೆ. ಈ ಮೂಲಕ ಕೊಳಲು ವಾದನದ ಬಗ್ಗೆ ನನಗೆ ಅಭಿ ರುಚಿ ಹುಟ್ಟಿತ್ತು ಎನ್ನುತ್ತಾರೆ ಹೆಡ್ ಕಾನ್‌ಸ್ಟೇಬಲ್ ಮನೋಜ್ ಗಟ್ಟಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
Doctor; ಖ್ಯಾತ ಹೃದ್ರೋಗ ತಜ್ಞ ಡಾ.ಎಸ್.ಜಿ.ಸರ್ವೋತ್ತಮ ಪ್ರಭು ವಿಧಿವಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.